AFP
ಮಾಸ್ಕೋ: ಮಾಸ್ಕೋ ಉಕ್ರೇನ್ ಮೇಲಿನ ತನ್ನ ಆಕ್ರಮಣವನ್ನು ಹೆಚ್ಚಿಸುತ್ತಿದ್ದು ಇದರ ಮಧ್ಯೆ ಜಿರ್ಕಾನ್ ಹೈಪರ್ಸಾನಿಕ್ ಕ್ರೂಸ್ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿದೆ ಎಂದು ರಷ್ಯಾ ಹೇಳಿದೆ.
ಬ್ಯಾರೆಂಟ್ಸ್ ಸಮುದ್ರದಲ್ಲಿನ ಅಡ್ಮಿರಲ್ ಗೋರ್ಶ್ಕೋವ್ ಯುದ್ಧನೌಕೆಯಿಂದ ಕ್ಷಿಪಣಿಯನ್ನು ಉಡಾಯಿಸಲಾಗಿದ್ದು ಆರ್ಕ್ಟಿಕ್ನ ಬಿಳಿ ಸಮುದ್ರದಲ್ಲಿ 1,000 ಕಿಲೋಮೀಟರ್ ದೂರದಲ್ಲಿ ನೆಲೆಗೊಂಡಿದ್ದ ಗುರಿಯನ್ನು ಯಶಸ್ವಿಯಾಗಿ ಹೊಡೆದಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ನಡೆಯುತ್ತಿರುವ ಯುದ್ಧದ ನಡುವೆ ‘ಹೊಸ ಶಸ್ತ್ರಾಸ್ತ್ರಗಳ ಪರೀಕ್ಷೆ’ ಭಾಗವಾಗಿ ಪರೀಕ್ಷೆಯನ್ನು ನಡೆಸಲಾಗಿದೆ ಎಂದು ಸಚಿವಾಲಯ ಹೇಳಿದೆ.
ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇದನ್ನು ‘ಮಹಾನ್ ಘಟನೆ’ ಎಂದು ವರ್ಣಿಸಿದ್ದಾರೆ. ಮೊದಲ ಅಧಿಕೃತ ಜಿರ್ಕಾನ್ ಪರೀಕ್ಷೆಯು 2020ರ ಅಕ್ಟೋಬರ್ ನಲ್ಲಿ ನಡೆದಿತ್ತು.
ಫೆಬ್ರವರಿ ಅಂತ್ಯದಲ್ಲಿ ಉಕ್ರೇನ್ ತನ್ನ ಆಕ್ರಮಣವನ್ನು ಆರಂಭಿಸಿದ್ದ ರಷ್ಯಾ ಇದೀಗ ಹೈಪರ್ಸಾನಿಕ್ ಶಸ್ತ್ರಾಸ್ತ್ರದ ಪರೀಕ್ಷೆಯು ಮತ್ತಷ್ಟು ಬಿರುಸನ್ನು ನೀಡಿದೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App