English Tamil Hindi Telugu Kannada Malayalam Google news Android App
Tue. Jan 31st, 2023

The New Indian Express

ಕಾರವಾರ: ಕಾರವಾರದಲ್ಲಿ ನಾಮಫಲಕಗಳಲ್ಲಿ ದೇವನಗರಿ ಲಿಪಿ ಬಳಕೆ ವಿವಾದದ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದಲ್ಲಿ ಮತ್ತೊಂದು ಭಾಷಾ ವಿವಾದ ಭುಗಿಲೆದ್ದಿದೆ. ಭಟ್ಕಳದ ಪಟ್ಟಣ ಪುರಸಭೆ (ಟಿಎಂಸಿ) ಕಚೇರಿಯಲ್ಲಿ ಉರ್ದು ಸೂಚನಾ ಫಲಕ ಕಾಣಿಸಿಕೊಂಡ ನಂತರ, ಕನ್ನಡ ಮತ್ತು ಹಿಂದೂ ಕಾರ್ಯಕರ್ತರು ಅದನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿ ಮುಸ್ಲಿಂ ಸಮುದಾಯದ ಸದಸ್ಯರೊಂದಿಗೆ ವಾಗ್ವಾದ ನಡೆಸಿ ಕಚೇರಿಗೆ ಬೀಗ ಹಾಕಿದ ಪ್ರಸಂಗ ನಡೆದಿದೆ. 

ಇತ್ತೀಚೆಗಷ್ಟೇ ಕಾರವಾರದಲ್ಲಿ ದೇವನಗರಿಯಲ್ಲಿನ ಫಲಕಗಳು ಕನ್ನಡ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದ್ದು, ಅವುಗಳನ್ನು ಅಳಿಸಿ ಹಾಕುವಂತೆ ಪುರಸಭೆಗೆ ಒತ್ತಾಯಿಸಲಾಗಿತ್ತು. ಭಟ್ಕಳ ಟಿಎಂಸಿ ಕಟ್ಟಡವನ್ನು ಇತ್ತೀಚೆಗೆ ನವೀಕರಿಸಿ ಬಣ್ಣ ಬಳಿಯಲಾಗಿದ್ದು, ಕನ್ನಡ ಮತ್ತು ಉರ್ದು ಭಾಷೆಯಲ್ಲಿ ಬೋರ್ಡ್ ಹಾಕಿರುವುದು ಕಾರ್ಯಕರ್ತರನ್ನು ಕೆರಳಿಸಿತು. ಬೋರ್ಡ್‌ನಲ್ಲಿ ಉರ್ದು ಅಕ್ಷರವನ್ನು ಅಧಿಕಾರಿಗಳು ಅಳಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಅಧಿಕಾರಿಗಳು ಒತ್ತಡಕ್ಕೆ ಮಣಿದು ಅದನ್ನು ಅಳಿಸಲು ನಿರ್ಧರಿಸಿದಾಗ ವಿವಾದ ಭುಗಿಲೆದ್ದಿತು. ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಪ್ರತಿಭಟಿಸಿದರು. ಆರೋಪ-ಪ್ರತ್ಯಾರೋಪ ಎರಡರಲ್ಲೂ ಎರಡು ಗುಂಪುಗಳ ನಡುವೆ ವಾಗ್ವಾದಗಳು ನಡೆದವು.

ಇದನ್ನೂ ಓದಿ: ಭಟ್ಕಳ: ನಿರ್ಲಕ್ಷ್ಯಕ್ಕೊಳಗಾದ ವೀರಗಲ್ಲು; ಸ್ಮಾರಕ ಅಪರೂಪದ ದೇವಾಲಯಗಳಿಗೆ ಬೇಕಿದೆ ಪುನಶ್ಚೇತನ

ಈ ವಿಚಾರದಲ್ಲಿ ನಾವು ಸುಮ್ಮನಿರುವುದಿಲ್ಲ. ಉರ್ದು ಬೋರ್ಡ್ ಪ್ರದರ್ಶಿಸಲು ಅವಕಾಶವಿಲ್ಲ. ರಾಜ್ಯದಲ್ಲಿ ಬೋರ್ಡ್‌ಗಳು ಕನ್ನಡ, ಇಂಗ್ಲಿಷ್ ಮತ್ತು ಹಿಂದಿಯಲ್ಲಿರಬಹುದು, ಉರ್ದು ಅಲ್ಲ. ನಾವು ಸ್ಥಳೀಯವಾಗಿ ಮಾತನಾಡುವ ಭಾಷೆಗಳಿಗೆ ಪ್ರಾಮುಖ್ಯತೆ ನೀಡಲು ಪ್ರಾರಂಭಿಸಿದರೆ, ಅಧಿಕಾರಿಗಳು ಕೊಂಕಣಿ, ಮರಾಠಿ, ಉರ್ದು ಮತ್ತು ನವಾಯತ್ ಭಾಷೆಗಳಲ್ಲಿ ಫಲಕಗಳನ್ನು ಪ್ರದರ್ಶಿಸಬೇಕಾಗುತ್ತದೆ. ರಾಜ್ಯದ ಪ್ರಮುಖ ಭಾಷೆಯಾದ ಕನ್ನಡವು ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತದೆ ಎಂದು ಸ್ಥಳೀಯ ಕಾರ್ಯಕರ್ತ ಶ್ರೀಕಾಂತ ನಾಯ್ಕ ಹೇಳುತ್ತಾರೆ.

ಇದಕ್ಕೆ ಪ್ರತಿಯಾಗಿ ಜಾಲಿ ಟಿಎಂಸಿ ಸದಸ್ಯ ಮಿಸ್ತಾ ಉಲ್ ಹಕ್, ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ನಾವು ಹಾಗೆ ಮಾಡಿದ್ದೇವೆ. ನಂತರ ಭಾರತೀಯ ಭಾಷೆಯಾದ ಉರ್ದು ಬೋರ್ಡ್ ಕೂಡ ಹಾಕಿದ್ದೇವೆ. ಇದು ಶತಮಾನಗಳಿಂದ ಬಳಕೆಯಲ್ಲಿದೆ. ಅದಕ್ಕೆ ಮಲತಾಯಿ ಧೋರಣೆ ಏಕೆ, ಇದಲ್ಲದೆ, ಭಟ್ಕಳ ಟಿಎಂಸಿಗೆ ವಸಾಹತುಶಾಹಿ ಕಾಲದಿಂದಲೂ ಇತಿಹಾಸ ಮತ್ತು ವಿಶೇಷ ಜಾಗವಿದೆ. ಅಂದಿನಿಂದ ಉರ್ದು ಬಳಕೆಯಲ್ಲಿದೆ ಎನ್ನುತ್ತಾರೆ.

ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ಮುಂದುವರಿದಾಗ, ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಮಧ್ಯೆಪ್ರವೇಶಿಸಬೇಕಾಯಿತು. ಸಹಾಯಕ ಆಯುಕ್ತೆ  ಮಮತಾ ಅವರು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿದ್ದು, ಉತ್ತರ ಕನ್ನಡ ಜಿಲ್ಲಾಧಿಕಾರಿ ಮೂಲಕ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದರು. ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರನ್ನು ಸಂಪರ್ಕಿಸಿದಾಗ, ನಾನು ಭಟ್ಕಳಕ್ಕೆ ಹೋಗುತ್ತಿದ್ದೇನೆ. ನಾಳೆ ಸಭೆ ನಡೆಸಿ ಸಮಸ್ಯೆ ಬಗೆಹರಿಸುತ್ತೇನೆ ಎಂದರು.

Source link

For more news update stay with actp news

Android App

Facebook

Twitter

Dailyhunt

Share Chat

Telegram

Koo App

Leave a Reply

Your email address will not be published. Required fields are marked *