PTI
ಮುಂಬೈ: ತಮ್ಮ ಸರ್ಕಾರ ಕೈಗೊಂಡಿದ್ದ ಮೆಟ್ರೋ ಶೆಡ್ ಸ್ಥಳ ತೀರ್ಮಾನ ಬದಲಾವಣೆ ಬೇಡ ಎಂದು ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ನೂತನ ಶಿಂದೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಮುಂಬೈನ ವಿವಾದಿತ ಮೆಟ್ರೋ ಕಾರ್ ಶೆಡ್ ಯೋಜನೆಯಲ್ಲಿ ಉದ್ಧವ್ ಠಾಕ್ರೆ ಸರ್ಕಾರದ ತೀರ್ಮಾನವನ್ನು ಬದಲಾಯಿಸಲು ಸಿಎಂ ಶಿಂಧೆ ಮುಂದಾಗಿದ್ದು, 2019 ರಲ್ಲಿ ದೇವೇಂದ್ರ ಫಡ್ನವಿಸ್ ಸರ್ಕಾರದ ಅಡಿಯಲ್ಲಿ ಯೋಜಿಸಿದಂತೆ ಆರೆ ಕಾಲೋನಿಯಲ್ಲಿ ಮೆಟ್ರೋ ಕಾರ್ ಶೆಡ್ ನಿರ್ಮಿಸಲಾಗುವುದು ಎಂದು ನ್ಯಾಯಾಲಯದಲ್ಲಿ ಸಲ್ಲಿಸುವಂತೆ ಶಿಂಧೆ ಅವರು ಅಡ್ವೊಕೇಟ್ ಜನರಲ್ ಅಶುತೋಷ್ ಕುಂಭಕೋಣಿ ಅವರಿಗೆ ಸೂಚಿಸಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಇದೇ ವಿಚಾರವಾಗಿ ಸಿಎಂ ಏಕನಾಥ್ ಶಿಂಧೆ ನೇತೃತ್ವದ ನೂತನ ಸರ್ಕಾರಕ್ಕೆ ಮಾಜಿ ಸಿಎಂ ಉದ್ದವ್ ಠಾಕ್ರೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಸಿಎಂ ಆದ ಬೆನ್ನಲ್ಲೇ ಉದ್ಧವ್ ಠಾಕ್ರೆ ಕೈಗೊಂಡಿದ್ದ ಯೋಜನೆ ಬದಲಿಸಲು ಮುಂದಾದ ಏಕನಾಥ್ ಶಿಂಧೆ
ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ ಅವರು, ‘ನಿನ್ನೆ ನಡೆದ ಘಟನೆಯ ಬಗ್ಗೆ, ನಾನು ಅಮಿತ್ ಶಾ ಅವರಿಗೆ 2.5 ವರ್ಷಗಳ ಕಾಲ (ಶಿವಸೇನೆ-ಬಿಜೆಪಿ ಮೈತ್ರಿಯ ಸಮಯದಲ್ಲಿ) ಶಿವಸೇನೆ ಸಿಎಂ ಆಗಿರಬೇಕು ಎಂದು ಹೇಳಿದ್ದೆ, ಅವರು ಇದನ್ನು ಮೊದಲೇ ಮಾಡಿದ್ದರೆ, ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಅಸ್ತಿತ್ವಕ್ಕೇ ಬರುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಉದ್ಧವ್ ಠಾಕ್ರೆ ಕೆಳಗಿಳಿಸಿ, ಫಡ್ನವಿಸ್ ‘ರೆಕ್ಕೆ’ ಕತ್ತರಿಸಿದ ಬಿಜೆಪಿ: ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದು ಕಮಲ ನಾಯಕರ ‘ಟ್ರಿಕಿ’ ಗೇಮ್!
ಅಂತೆಯೇ, ಕಳೆದ ಕೆಲವು ದಿನಗಳಿಂದ ನನಗೆ ಜನರಿಂದ ಅಪಾರ ಪ್ರೀತಿಯ ಸಂದೇಶಗಳು ಬಂದಿವೆ ಮತ್ತು ದಿಢೀರ್ ಸಿಎಂ ಸ್ಥಾನವನ್ನು ಅಲಂಕರಿಸಿದ ವ್ಯಕ್ತಿಗೆ ಅವರು ರಾಜೀನಾಮೆ ನೀಡಿದಾಗ ತುಂಬಾ ಪ್ರೀತಿ ಮತ್ತು ಗೌರವವನ್ನು ನೀಡಿರುವುದು ನನಗೆ ಸಂತೋಷ ತಂದಿದೆ. ನನ್ನ ಮೇಲಿನ ಕೋಪವನ್ನು ಮುಂಬೈ ಜನರ ಮೇಲೆ ತೋರಿಸಬೇಡಿ. ಮುಂಬೈನ ಪರಿಸರದೊಂದಿಗೆ ಆಟವಾಡಬೇಡಿ… ಮೆಟ್ರೋ ಶೆಡ್ನ ಪ್ರಸ್ತಾಪವನ್ನು ಬದಲಾಯಿಸಬೇಡಿ ಎಂದು ಶಿಂಧೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಬೆನ್ನಿಗೆ ಚೂರಿ ಹಾಕಿದ ಬಿಜೆಪಿ, ಶಿಂಧೆ ಶಿವಸೇನೆ ಸಿಎಂ ಅಲ್ಲ.. ಬಿಜೆಪಿ ಸಿಎಂ
ಇದೇ ವೇಳೆ ಬಿಜೆಪಿ ಅಧಿಕಾರಕ್ಕಾಗಿ ನನ್ನ ಬೆನ್ನಿಗೆ ಚೂರಿ ಹಾಕಿದೆ ಎಂದು ಹೇಳಿದ ಉದ್ಧವ್ ಠಾಕ್ರೆ, ಏಕನಾಥ್ ಶಿಂದೆ ಶಿವಸೇನೆ ಸಿಎಂ ಅಲ್ಲ.. ಬಿಜೆಪಿ ಸಿಎಂ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಿಎಂ ಏಕನಾಥ್ ಶಿಂಧೆ ಸೇರಿ ಬಂಡಾಯ ಶಾಸಕರ ಅನರ್ಹಗೊಳಿಸುವಂತೆ ಕೋರಿ ಅರ್ಜಿ: ಜುಲೈ 11ಕ್ಕೆ ಸುಪ್ರೀಂ ಕೋರ್ಟ್ ವಿಚಾರಣೆ
ಮಹಾರಾಷ್ಟ್ರ ಚುನಾವಣೆಯಲ್ಲಿ ಗೆದ್ದ ನಂತರ 2019 ರಲ್ಲಿ ಬಿಜೆಪಿಯೊಂದಿಗಿನ ತನ್ನ ಪಕ್ಷದ 25 ವರ್ಷಗಳ ಮೈತ್ರಿಯನ್ನು ಕೊನೆಗೊಳಿಸಿದ ಕಾರಣವನ್ನು ಠಾಕ್ರೆ ಉಲ್ಲೇಖಿಸಿದ ಠಾಕ್ರೆ, ‘2.5 ವರ್ಷಗಳ ಕಾಲ (ಶಿವಸೇನೆ-ಬಿಜೆಪಿ ಮೈತ್ರಿಯ ಸಂದರ್ಭದಲ್ಲಿ) ಶಿವಸೇನೆ ಮುಖ್ಯಮಂತ್ರಿಯಾಗಿರಬೇಕೆಂದು ನಾನು ಅಮಿತ್ ಶಾಗೆ ಮೊದಲೇ ಹೇಳಿದ್ದೆ, ಅವರು ಇದನ್ನು ಮೊದಲೇ ಮಾಡಿದ್ದರೆ, ಮಹಾ ವಿಕಾಸ್ ಅಘಾಡಿ ಆಗುತ್ತಿರಲಿಲ್ಲ. ಅಮಿತ್ ಶಾ ಅವರು 5 ವರ್ಷದ ಸರ್ಕಾರದ ಅವಧಿಯಲ್ಲಿ ರೊಟೇಷನಲ್ ಆಧಾರದ ಮೇಲೆ ಬಿಜೆಪಿ ಮತ್ತು ಶಿವಸೇನೆಯ ಮುಖ್ಯಮಂತ್ರಿಗಳನ್ನ ಮಾಡಲು ಒಪ್ಪಲೇ ಇಲ್ಲ. ಬಿಜೆಪಿಯೊಂದಿಗೆ ಬೇರ್ಪಟ್ಟ ನಂತರ, ಸರ್ಕಾರವನ್ನು ರಚಿಸಲು ಮತ್ತು ಬಿಜೆಪಿಯನ್ನು ಅಧಿಕಾರ ಹಿಡಿಯದಂತೆ ಮಾಡಲು ಸೈದ್ಧಾಂತಿಕವಾಗಿ ವಿರುದ್ಧ ಪಕ್ಷಗಳಾದ ಎನ್ಸಿಪಿ ಮತ್ತು ಕಾಂಗ್ರೆಸ್ನೊಂದಿಗೆ ಸಹಕರಿಸಲು ಒಪ್ಪಿಕೊಳ್ಳಬೇಕಾಯಿತು ಎಂದು ಉದ್ಧವ್ ಠಾಕ್ರೆ ಹೇಳಿದರು.
ಇದನ್ನೂ ಓದಿ: ಅವನತಿಯ ಕಡೆಗೆ ಪ್ರಯಾಣ ಪ್ರಾರಂಭ: ಉದ್ಧವ್ ರಾಜೀನಾಮೆ ಬಳಿಕ ಟ್ವೀಟ್ ನಲ್ಲಿ ಕೆಣಕಿದ ರಾಜ್ ಠಾಕ್ರೆ!
ಇದೇ ವೇಳೆ ಮುಂಬೈಗೆ ದ್ರೋಹ ಮಾಡಿದಂತೆ ಬಿಜೆಪಿಗೆ ದ್ರೋಹ ಮಾಡಬೇಡಿ ಎಂದು ನೂತನ ಸಿಎಂ ಏಕನಾಥ್ ಶಿಂಧೆಗೆ ಕುಟುಕಿದರು.
For more news update stay with actp news
Android App
Facebook
Twitter
Dailyhunt
Share Chat
Telegram
Koo App