The New Indian Express
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ನಿಧಾನವಾಗಿ ಮತ್ತೆ ಏರಿಕೆಯಾಗುತ್ತಿದ್ದು, ಈ ನಡುವೆ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ತಿಳಿದುಬಂದಿದೆ.
ಮಳೆಗಾರ ಹಾಗೂ ಶಾಲೆಗಳಲ್ಲಿ ಕೋವಿಡ್ ಕ್ಲಸ್ಟರ್ ಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಹಾಜರಾತಿ ಸಂಖ್ಯೆ ಇಳಿಕೆಯಾಗುತ್ತಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಕೊರೋನಾ ಮತ್ತಷ್ಟು ಹೆಚ್ಚಳ: ಇಂದು ಬೆಂಗಳೂರಿನಲ್ಲಿ 1109 ಸೇರಿ ರಾಜ್ಯದಲ್ಲಿ 1249 ಮಂದಿಗೆ ಪಾಸಿಟಿವ್; ಇಬ್ಬರು ಸಾವು
“ಶಾಲೆಗಳಾಗಿ, ನಾವು ಹೆಚ್ಚು ಜಾಗರೂಕರಾಗಿರಲು ಪ್ರಯತ್ನಿಸುತ್ತಿದ್ದೇವೆ, ಹೀಗಾಗಿ ನೆಗಡಿ, ಕೆಮ್ಮ, ಜ್ವರದ ಲಕ್ಷಣವುಳ್ಳ ಮಕ್ಕಳನ್ನು ಮನೆಗಳಿಗೆ ಮರಳಿ ಕಳುಹಿಸುತ್ತಿದ್ದೇವೆ. ಅನಾರೋಗ್ಯ ಪೀಡಿತ ಮಕ್ಕಳನ್ನು ಔಷಧಿಗಳೊಂದಿಗೆ ಪೋಷಕರು ಶಾಲೆಗೆ ಕಳುಹಿಸುತ್ತಿದ್ದಾರೆ. ಆದರೆ, ನಾವು ಈ ಬಗ್ಗೆ ಎಚ್ಚರ ವಹಿಸಿ ಮಕ್ಕಳನ್ನು ಮನೆಗಳಿಗೆ ಕಳುಹಿಸುತ್ತಿದ್ದೇವೆ ಎಂದು ಕರ್ನಾಟಕ ಅಸೋಸಿಯೇಟ್ ಮ್ಯಾನೇಜ್ಮೆಂಟ್ ಆಫ್ ಸ್ಕೂಲ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಅವರು ಹೇಳಿದ್ದಾರೆ.
ನಗರದ ಬಹುತೇಕ ಶಾಲೆಗಳು ಇಂತಹ ಮುನ್ನೆಚ್ಚರಿಕೆ ವಹಿಸಿದ್ದು, ಹಾಜರಾತಿಯಲ್ಲಿನ ಕುಸಿತಕ್ಕೆ ಇದೇ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮಾಸ್ಕ್ ಧರಿಸದೆ ನಿಯಮ ಉಲ್ಲಂಘಿಸುತ್ತಿದ್ದೀರಾ? ಶೀಘ್ರದಲ್ಲೇ ರೂ.250 ದಂಡ ಕಟ್ಟಲು ಸಿದ್ಧರಾಗಿ…
ಏತನ್ಮಧ್ಯೆ, ಆರ್ಕಿಡ್ ಇಂಟರ್ನ್ಯಾಷನಲ್ ಶಾಲೆಯಂತಹ ಶಾಲಗಳಲ್ಲಿ ನಿಯಮಿತವಾಗಿ ಶೇ.15ಷ್ಟು ಹಾಜರಾತಿ ಕುಸಿತವಾಗಿದೆ. ಶಿಕ್ಷಕರು ಪ್ರತಿ ವಿದ್ಯಾರ್ಥಿಯ ಮೇಲೆ ನಿಗಾ ಇಡುತ್ತಿದ್ದಾರೆ. ವಿದ್ಯಾರ್ಥಿ ಅಸ್ವಸ್ಥರಾದರೆ ಪೋಷಕರಿಗೆ ಮಾಹಿತಿ ನೀಡಿ ಮನೆಗೆ ಕಳುಹಿಸಲಾಗುತ್ತಿದೆ. ದಿನದಿಂದ ದಿನಕ್ಕೆ ಮೂಗು ಸೋರುವ ಮತ್ತು ಉಸಿರಾಟದ ಸಮಸ್ಯೆ ಇರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದು, ಕೂಡಲೇ ಈ ಸಂಬಂಧ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಶಾಲೆಯ ಪ್ರಾಂಶುಪಾಲರಾದ ನಾಗವೇಣಿ ರೆಡ್ಡಿ ತಿಳಿಸಿದ್ದಾರೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App