English Tamil Hindi Telugu Kannada Malayalam Google news Android App
Sat. Jan 28th, 2023

The New Indian Express

ನವದೆಹಲಿ: ಏಷ್ಯನ್ ಚಾಂಪಿಯನ್‌ಶಿಪ್‌ನ ಕಂಚಿನ ಪದಕ ವಿಜೇತೆ ನಿಖತ್ ಝರೀನ್ ಇಸ್ತಾನ್‌ಬುಲ್‌ನಲ್ಲಿ ನಡೆದ ಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ 52 ಕೆಜಿ ವಿಭಾಗದಲ್ಲಿ ಭರ್ಜರಿ ಗೆಲುವಿನೊಂದಿಗೆ ಸೆಮಿಫೈನಲ್ ತಲುಪುವ ಮೂಲಕ ಭಾರತಕ್ಕೆ ಮೊದಲ ಪದಕವನ್ನು ಖಚಿತಪಡಿಸಿದ್ದಾರೆ.

ನಿಖತ್ ಹೊರತಾಗಿ, ಮನೀಶಾ(57 ಕೆಜಿ) ಮತ್ತು ಪರ್ವೀನ್(63 ಕೆಜಿ) ಕೂಡ ಪದಕಗಳನ್ನು ಖಚಿತಪಡಿಸಿದ್ದಾರೆ. ಪ್ರತಿಷ್ಠಿತ ‘ಸ್ಟ್ರಾಂಡ್ಜಾ ಮೆಮೋರಿಯಲ್’ ಟೂರ್ನಿಯಲ್ಲಿ ಚಿನ್ನದ ಪದಕ ಗೆದ್ದಿದ್ದ ನಿಖತ್, ಇಂಗ್ಲೆಂಡ್‌ನ ಚಾರ್ಲಿ-ಸೀನ್ ಡೇವಿಸನ್ ವಿರುದ್ಧ 5-0 ಅಂತರದಿಂದ ಜಯ ಸಾಧಿಸುವ ಮೂಲಕ ತಮ್ಮ ಅಬ್ಬರದ ಓಟ ಮುಂದುವರಿಸಿದರು.

ತೆಲಂಗಾಣದ 25ರ ಹರೆಯದ ಬಾಕ್ಸರ್ ಕ್ವಾರ್ಟರ್ ಫೈನಲ್ ನಲ್ಲಿ ಡೇವಿಸನ್ ಅವರ ಆಕ್ರಮಣಕಾರಿ ಆಟಕ್ಕೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದರು. ಮೊದಲ ಸುತ್ತಿನಲ್ಲಿ ಇಬ್ಬರೂ ಬಾಕ್ಸರ್‌ಗಳು ಪರಸ್ಪರ ತೀವ್ರ ದಾಳಿ ನಡೆಸಿದರು. ಆದಾಗ್ಯೂ, ನಿಖತ್ ಎರಡನೇ ಸುತ್ತಿನಲ್ಲಿ ಪ್ರಾಬಲ್ಯ ಸಾಧಿಸಿದರು.

ಇದನ್ನೂ ಓದಿ: ಅಂತಾರಾಷ್ಟ್ರೀಯ ಬಾಕ್ಸಿಂಗ್ ಪಂದ್ಯದಲ್ಲಿ ಚಿನ್ನದ ಪದಕ ಗೆದ್ದ ಭಾರತದ ನಿಖತ್ ಝರೀನ್

ಮತ್ತೊಂದೆಡೆ ಮನೀಶಾ ಅವರು ಮಂಗೋಲಿಯಾದ ನಮುನ್ ಮೊಂಖೋರ್ ಅವರನ್ನು 4-1 ಅಂತರದಿಂದ ಸೋಲಿಸಿ ಸೆಮಿಫೈನಲ್ ತಲುಪಿದರು. ಪರ್ವೀನ್ ತಜಕಿಸ್ತಾನದ ಶೋರಾ ಜುಲ್ಕೆನರೋವಾ ಅವರನ್ನು 5-0 ಅಂತರದಿಂದ ಸೋಲಿಸಿದರು.

Source link

For more news update stay with actp news

Android App

Facebook

Twitter

Dailyhunt

Share Chat

Telegram

Koo App

Leave a Reply

Your email address will not be published. Required fields are marked *