The New Indian Express
ಇಸ್ಲಾಮಾಬಾದ್: ವಲಸಿಗರಿಗೆ ಐ-ವೋಟಿಂಗ್ ಮೂಲಕ ಮತ ಚಲಾಯಿಸುವ ಹಕ್ಕು ಮತ್ತು ದೇಶದಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ಬಳಕೆಗೆ ಅವಕಾಶ ನೀಡುವ ಇಮ್ರಾನ್ ಖಾನ್ ಸರ್ಕಾರದ ಚುನಾವಣಾ ಸುಧಾರಣೆಗಳನ್ನು ರದ್ದುಪಡಿಸುವ ಮಸೂದೆಯನ್ನು ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ಗುರುವಾರ ಅಂಗೀಕರಿಸಿದೆ.
ಸಂಸದೀಯ ವ್ಯವಹಾರಗಳ ಸಚಿವ ಮುರ್ತಾಜಾ ಜಾವೇದ್ ಅಬ್ಬಾಸಿ ಅವರು ಮಂಡಿಸಿದ ಚುನಾವಣಾ (ತಿದ್ದುಪಡಿ) ಮಸೂದೆ 2022 ಅನ್ನು ಕೆಳಮನೆಯಲ್ಲಿ ಬಹುಮತದೊಂದಿಗೆ ಅಂಗೀಕರಿಸಲಾಯಿತು, ಇದನ್ನು ಗ್ರ್ಯಾಂಡ್ ಡೆಮಾಕ್ರಟಿಕ್ ಅಲಯನ್ಸ್ (ಜಿಡಿಎ) ಸದಸ್ಯರು ಮಾತ್ರ ವಿರೋಧಿಸಿದರು.
ಅಬ್ಬಾಸಿ ವಿಧೇಯಕ ಮಂಡಿಸುವ ಮೊದಲು, ಸಂಬಂಧಿತ ಸ್ಥಾಯಿ ಸಮಿತಿ ಮೂಲಕ ಮಸೂದೆಯನ್ನು ನೇರವಾಗಿ ಸೆನೆಟ್ಗೆ ಅದರ ಅನುಮೋದನೆಗಾಗಿ ಕಳುಹಿಸಲು ಅನುಮತಿಸುವ ಪ್ರಸ್ತಾಪವನ್ನು ಮಂಡಿಸಿದರು. ಮಸೂದೆಯನ್ನು ಶುಕ್ರವಾರ ಸೆನೆಟ್ಗೆ ಕಳುಹಿಸುವ ನಿರೀಕ್ಷೆಯಿದೆ ಎಂದು ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಮಾಡಿದೆ
For more news update stay with actp news
Android App
Facebook
Twitter
Dailyhunt
Share Chat
Telegram
Koo App