Online Desk
ಇಸ್ಲಾಮಾಬಾದ್: ಪಂಜಾಬಿ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಅವರ ಸಾವಿಗೆ ಸಂತಾಪ ಸೂಚಿಸಿದ್ದಕ್ಕಾಗಿ ತೀವ್ರ ಟೀಕೆಗೆ ಗುರಿಯಾಗಿರುವ ಪಾಕಿಸ್ತಾನಿ ಗಾಯಕಿ ಶೇ ಗಿಲ್ ಅವರು ಆನ್ಲೈನ್ ಟ್ರೋಲ್ಗಳಿಗೆ ತಿರುಗೇಟು ನೀಡಿದ್ದಾರೆ. ತಾನು ಕ್ರಿಶ್ಚಿಯನ್ ಆಗಿರುವುದರಿಂದ ವಿವಿಧ ಧರ್ಮಗಳ ಜನರಿಗೆ ಪ್ರಾರ್ಥನೆ ಸಲ್ಲಿಸಬಹುದು ಎಂದು ಹೇಳಿದ್ದಾರೆ.
ಈ ವರ್ಷದ ಆರಂಭದಲ್ಲಿ ಕೋಕ್ ಸ್ಟುಡಿಯೋ ಸೀಸನ್ 14 ಹಾಡು ‘ಪಸೂರಿ’ ನಲ್ಲಿ ಕಾಣಿಸಿಕೊಂಡ ನಂತರ ಖ್ಯಾತಿ ಪಡೆದ ಶೇ ಗಿಲ್, ಸಿಧು ಮೂಸೆವಾಲಾ ಅವರ ದುರಂತ ಸಾವಿನ ನಂತರ ಇನ್ ಸ್ಟಾಗ್ರಾಂ ಪೋಸ್ಟ್ ನಲ್ಲಿ ಸಂತಾಪ ಸೂಚಿಸಿದ್ದರು.
‘ಹೃದಯವಿದ್ರಾವಕ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬ ಮತ್ತು ಸ್ನೇಹಿತರಿಗೆ ಈ ನಷ್ಟವನ್ನು ಭರಿಸುವ ಶಕ್ತಿ ಸಿಗಲಿ’ ಎಂದು ಶೇ ಗಿಲ್ ಬರೆದಿದ್ದಾರೆ.
ಇದನ್ನೂ ಓದಿ: ಸಿಧು ಮೂಸೆವಾಲಾ ಹತ್ಯೆ ಪ್ರಕರಣ: ಪಂಜಾಬ್ ಪೊಲೀಸರಿಂದ ಮೊದಲ ಬಂಧನ
ಆದಾಗ್ಯೂ, ಮುಸ್ಲಿಮೇತರರಿಗೆ ಸಂತಾಪ ಸೂಚಿಸಿದ್ದಕ್ಕಾಗಿ ಗಾಯಕಿ ಸಾಕಷ್ಟು ಟೀಕೆಗಳನ್ನ ಎದುರಿಸಿದ್ದಾರೆ.
ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಕೆಲವು ಪ್ರತ್ಯುತ್ತರಗಳ ಸ್ಕ್ರೀನ್ಶಾಟ್ಗಳನ್ನು ಪೋಸ್ಟ್ ಮಾಡಿದ ಗಾಯಕಿ ಗಿಲ್, ‘ನನಗೆ ಇಂತಹ ಸಂದೇಶಗಳು ಬಹಳಷ್ಟು ಬರುತ್ತಿವೆ. ನಾನು ಮುಸ್ಲಿಂ ಅಲ್ಲ ಎಂದು ಎಲ್ಲರಿಗೂ ತಿಳಿಸಲು ಬಯಸುತ್ತೇನೆ. ನಾನು ಕ್ರಿಶ್ಚಿಯನ್ ಮತ್ತು ಕ್ರಿಶ್ಚಿಯನ್ ಕುಟುಂಬಕ್ಕೆ ಸೇರಿದವಳು. ನಾನು ವಿವಿಧ ಧರ್ಮಗಳ ಜನರಿಗೆ ಪ್ರಾರ್ಥನೆಗಳನ್ನು ಮಾಡಬಹುದು.
‘ನೀವು ನನಗೆ ಈ ರೀತಿಯ ಸಂದೇಶಗಳನ್ನು ಕಳುಹಿಸಿದರೆ, ನಿಮ್ಮನ್ನು ಬ್ಲಾಕ್ ಮಾಡಲಾಗುತ್ತದೆ’ ಎಂದು ತಿರುಗೇಟು ನೀಡಿದ್ದಾರೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App