Online Desk
ಹೈದರಾಬಾದ್: ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ಗೋವು ಸಾಗಿಸುವ ಮುಸ್ಲಿಮರ ಮೇಲಿನ ದಾಳಿಯನ್ನು ಹೋಲಿಸಿ ಮಾತನಾಡಿದ್ದ ನಟಿ ಸಾಯಿ ಪಲ್ಲವಿ ವಿರುದ್ಧ ದೂರು ದಾಖಲಾಗಿದೆ.
ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಬಜರಂಗದಳದ ಮುಖಂಡರು ಹೈದರಾಬಾದ್ನ ಸುಲ್ತಾನ್ ಬಜಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಿಡಿಯೋ ನೋಡಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮುಂಬರುವ ಚಿತ್ರ, ವಿರಾಟ ಪರ್ವಂ ಪ್ರಚಾರದ ಸಂದರ್ಭದಲ್ಲಿ, ನಾನು ಎಡಪಂಥೀಯ ಮತ್ತು ಬಲಪಂಥೀಯರ ಬಗ್ಗೆ ಕೇಳಿದ್ದೇನೆ. ಆದರೆ, ಯಾರು ಸರಿ ಮತ್ತು ಯಾರು ತಪ್ಪು ಎಂದು ನಾನು ಹೇಳಲಾರೆ. ದಿ ಕಾಶ್ಮೀರ್ ಫೈಲ್ಸ್ ಚಿತ್ರ ಕಾಶ್ಮೀರಿ ಪಂಡಿತರ ಹತ್ಯೆ ಹೇಗೆ ನಡೆಯಿತು ಎಂಬುದನ್ನು ತೋರಿಸುತ್ತದೆ.
ಇದನ್ನೂ ಓದಿ: ಕಾಶ್ಮೀರಿ ಪಂಡಿತರದ್ದು ನರಮೇಧವಾದರೆ, ಜೈಶ್ರೀರಾಮ್ ಹೆಸರಲ್ಲಿ ಮುಸ್ಲಿಂರ ಮೇಲೆ ನಡಿತಿರೋದೇನು?: ನಟಿ ಸಾಯಿ ಪಲ್ಲವಿ
ಇತ್ತೀಚೆಗೆ ಮುಸ್ಲಿಂ ಎಂದು ಶಂಕಿಸಿ ಹಸುವನ್ನು ಹೊತ್ತೊಯ್ದಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಕೊಂದ ಘಟನೆ ನಡೆದಿತ್ತು. ಆ ವ್ಯಕ್ತಿಯನ್ನು ಕೊಂದ ಬಳಿಕ ದಾಳಿಕೋರರು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿದರು. ಇದರಲ್ಲಿ ಎಲ್ಲಿ ವ್ಯತ್ಯಾಸ? ಈ ರೀತಿ ನಡೆದುಕೊಳ್ಳುವುದು ಮನುಷ್ಯತ್ವ ಎಂದೆನಿಸಿಕೊಳ್ಳಲ್ಲ. ನಾವು ಉತ್ತಮ ಮನುಷ್ಯರಾಗಬೇಕು ಎಂದು ಹೇಳಿದ್ದರು.
For more news update stay with actp news
Android App
Facebook
Twitter
Dailyhunt
Share Chat
Telegram
Koo App