The New Indian Express
ನವದೆಹಲಿ: ಜುಲೈ 18 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಮತ್ತು ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾ ಅವರು ಸಲ್ಲಿಸಿರುವ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ರಾಜ್ಯಸಭಾ ಕಾರ್ಯದರ್ಶಿ ಗುರುವಾರ ಹೇಳಿದ್ದಾರೆ.
ರಾಷ್ಟ್ರಪತಿ ಚುನಾವಣೆಗಾಗಿ ಸ್ವೀಕೃತವಾದ 115 ನಾಮಪತ್ರಗಳ ಪೈಕಿ, 28 ನಾಮಪತ್ರಗಳು ತಿರಸ್ಕೃತಗೊಂಡಿವೆ ಎಂದು ಚುನಾವಣಾಧಿಕಾರಿಯೂ ಆಗಿರುವ ರಾಜ್ಯ ಸಭಾ ಪ್ರಧಾನ ಕಾರ್ಯದರ್ಶಿ ಪಿ. ಸಿ ಮೊದಿ ತಿಳಿಸಿದ್ದಾರೆ. 115 ನಾಮಪತ್ರಗಳ ಪೈಕಿ ಉಳಿದಿದ್ದ 72 ಅಭ್ಯರ್ಥಿಗಳ 87 ನಾಮಪತ್ರಗಳಲ್ಲಿ ಅಗತ್ಯ ಅರ್ಹತೆ ಹೊಂದಿಲ್ಲದ ಕಾರಣ 79 ನಾಮಪತ್ರಗಳು ತಿರಸ್ಕೃತಗೊಂಡಿವೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ: ದ್ರೌಪದಿ ಮುರ್ಮುಗೆ ಜೆಡಿಎಸ್ ಬೆಂಬಲ
ಜುಲೈ 2 ರಂದು ನಾಮಪತ್ರ ಹಿಂಪಡೆಯಲು ಕಡೆಯೇ ದಿನವಾಗಿದ್ದು, ತದನಂತರ ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಗೆಜೆಟ್ ನಲ್ಲಿ ಪ್ರಕಟಿಸಲಾಗುವುದು, ಮುರ್ಮು, ಯಶವಂತ ಸಿನ್ಹಾ ಅವರಲ್ಲದೇ, ಮುಂಬೈಯ ಕೊಳಗೇರಿಯ ನಿವಾಸಿ ಸೇರಿದಂತೆ ಜನಸಾಮಾನ್ಯರು ಕೂಡಾ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸುವವರಿಗೆ ಕನಿಷ್ಠ 50 ಚುನಾಯಿತ ಪ್ರತಿನಿಧಿಗಳು ಸೂಚಕರಾಗಿ, ಇತರ 50 ಮಂದಿ ದ್ವಿತೀಯ ಸೂಚಕರಾಗಿ ಇರುವಂತೆ ಚುನಾವಣಾ ಆಯೋಗ ಕಡ್ಡಾಯಪಡಿಸಿದೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App