Online Desk
ಟೆಂಪೆ(ಅಮೆರಿಕಾ): ಅಮೆರಿಕಾ ಟೆಂಪೆಯಲ್ಲಿನ ಚಿಲ್ಲರೆ ಅಂಗಡಿಯೊಂದಕ್ಕೆ ಕಾರೊಂದು ಆಕಸ್ಮಿಕವಾಗಿ ನುಗ್ಗಿದ ನಂತರ ಅಂಗಡಿಯಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳ ವರದಿಯಾಗಿವೆ.
ಅಂಗಡಿಯ ಸಿಸಿಕ್ಯಾಮೆರಾ ದೃಶ್ಯದಲ್ಲಿ ಶಾಪಿಂಗ್ ಮಾರ್ಟ್ನೊಳಗೆ ಇಬ್ಬರು ವ್ಯಕ್ತಿಗಳು ಮಾತನಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಬಿಳಿ ಬಣ್ಣದ ಸೆಡಾನ್ ಅಂಗಡಿಯ ಮುಂಭಾಗದ ಮೂಲಕ ನುಗ್ಗಿ ನಿಂತಿದ್ದವರಿಗೆ ಅಪ್ಪಳಿಸುತ್ತೆ.
Wow check out this close call!! The driver accidentally left the car in drive and tries to put it in park and unintentionally hit the accelerator. Thankfully only minor injuries! pic.twitter.com/03OWUN9o6c
— Tempe Police (@TempePolice) May 26, 2022
ಅಂಗಡಿಯಲ್ಲಿ ನಿಂತಿದ್ದ ಇಬ್ಬರನ್ನು ಕಾರ್ ಸುಮಾರು 25 ಅಡಿಗಳಷ್ಟು ದೂರ ನೂಕಿದೆ. ಸಣ್ಣಪುಟ್ಟ ಗಾಯಗಳಾಗಿದ್ದು ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬ್ರೇಕ್ ಪೆಡಲ್ ಬದಲಿಗೆ ಚಾಲಕ ಅಚಾತುರ್ಯದಿಂದ ಆಕ್ಸಿಲೇಟರ್ ತುಳಿದಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಟೆಂಪೆ ಪೊಲೀಸರು ತಿಳಿಸಿದ್ದಾರೆ.
ಅಚಾನಕ್ಕಾಗಿ ನಡೆದ ಘಟನೆಯಿಂದ ಚಾಲಕನು ಯಾವುದೇ ಕ್ರಿಮಿನಲ್ ಆರೋಪಗಳನ್ನು ಎದುರಿಸುವುದಿಲ್ಲ. ಆದಾಗ್ಯೂಅವರನ್ನು ಬಂಧಿಸಲಾಗಿದೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App