English Tamil Hindi Telugu Kannada Malayalam Android App
Thu. Dec 1st, 2022

The New Indian Express

ಕ್ರೇಜಿಸ್ಟಾರ್ ಡಾ. ರವಿಚಂದ್ರನ್ ಅವರ ಪುತ್ರ ವಿಕ್ರಮ್ ರವಿಚಂದ್ರನ್ ಜೊತೆಯಲ್ಲಿ ‘ತ್ರಿವಿಕ್ರಮನೊಂದಿಗೆ ಸ್ಯಾಂಡಲ್ ವುಡ್ ಪ್ರವೇಶಿಸಿರುವ ನಟಿ ಆಕಾಂಕ್ಷಾ ಶರ್ಮಾ, ಚಿತ್ರ ಬಿಡುಗಡೆಯ ಬಗ್ಗೆ ಉತ್ಸುಕರಾಗಿದ್ದಾರೆ. ಮಾಡೆಲ್ ಆಗಿ ನಟನೆ ಬಂದಿರುವ ಆಕಾಂಕ್ಷಾ ಶರ್ಮಾ, ತೀರ ಅಪರಿಚಿತ  ಮುಖವೇನಲ್ಲ, ವಾಣಿಜ್ಯ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರತಿಭಾನ್ವಿತ ನೃತ್ಯಗಾರ್ತಿಯೂ ಆಗಿರುವ ಆಕಾಂಕ್ಷಾ ತನ್ನ ಸಿಂಗಲ್ ಮ್ಯೂಸಿಕಲ್ ವೀಡಿಯೋಗಳಾದ ಜುಗ್ನು ವಿಥ್ ಬಾದ್ ಶಾ ಮತ್ತು ಟೈಗರ್ ಶ್ರಾಫ್ ಜೊತೆಗಿನ 2 ಹಾಡುಗಳ ಮೂಲಕ ಗಮನ ಸೆಳೆದಿದ್ದಾರೆ.

ಸಿನಿ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಆಕಾಂಕ್ಷಾ ಶರ್ಮಾ,  ಚಿತ್ರದ ಪ್ರಚಾರಕ್ಕಾಗಿ ಕರ್ನಾಟಕದಾದ್ಯಂತ ಪ್ರಯಾಣಿಸುತ್ತಿದ್ದೇನೆ, ಅಲ್ಲಿ ತಂಡ ಮತ್ತು ಪ್ರೇಕ್ಷಕರಿಂದ ನನಗೆ ಸಮಾನವಾದ ಪ್ರಾಮುಖ್ಯತೆ ಮತ್ತು ಪ್ರೀತಿ ಸಿಕ್ಕಿತು ಎಂದು ಹೇಳಿದರು.  ಈ ದಿನಗಳಲ್ಲಿ ಪ್ರತಿಭೆ ಮಾತ್ರ ಮುಖ್ಯ ಎಂಬುದರಲ್ಲಿ ನಂಬಿಕೆ ಹೊಂದಿರುವ ಆಕಾಂಕ್ಷಾ, ಕಲೆಗೆ ಭಾಷೆಯ ತಡೆಗೋಡೆ ಇಲ್ಲ. ಅದನ್ನು ಈಗಾಗಲೇ ಅರಿತುಕೊಂಡಿದ್ದೇನೆ. ಮುಂಬೈನಿಂದ ಬಂದಿದ್ದರೂ ಅಲ್ಪಸ್ವಲ್ಪ ಕನ್ನಡವನ್ನು ಕಲಿತಿದ್ದೇನೆ. ಅದು ಜನರೊಂದಿಗೆ ಉತ್ತಮವಾಗಿ ಸಂಪರ್ಕ ಸಾಧಿಸಲು ಸಹಾಯ ಮಾಡಿತು. ನಾನು ಬೇರೆ ಸ್ಥಳದಿಂದ ಬರುತ್ತಿದ್ದರೂ ನಾನು ಹೊರಗಿನವಳು ಅಂತಾ ಅನ್ನಿಸುತ್ತಿಲ್ಲ ಎಂದರು.

ನಟಿ ಆಕಾಂಕ್ಷಾ ಶರ್ಮಾ

ಮೊದಲ ಬಾರಿಗೆ ತ್ರಿವಿಕ್ರಮದಲ್ಲಿಯೇ ಅಭಿನಯಿಸಲು ನಿರ್ಧರಿಸಿದನ್ನು ಬಹಿರಂಗ ಪಡಿಸಿದ ಆಕಾಂಕ್ಷಾ “ನನ್ನ ಒಂದು ಡ್ಯಾನ್ಸ್ ವಿಡಿಯೋ ನಿರ್ದೇಶಕರ ಗಮನ ಸೆಳೆದಿದ್ದರಿಂದ ಅವರು ನನ್ನನ್ನು ಚಿತ್ರಕ್ಕೆ ಆಯ್ಕೆ ಮಾಡಿದರು. ನಟಿಯಾಗುವುದಕ್ಕೆ ಯಾವಾಲೂ ಉತ್ಸಾಹವಿತ್ತು. ಬೆಳೆಯುತ್ತಿದ್ದಂತೆ ನಾಟಕಗಳಲ್ಲಿ ಅಭಿನಯಿಸಿ ಪಾತ್ರಗಳ ಮಹತ್ವವನ್ನು ಅರ್ಥಮಾಡಿಕೊಂಡಿದ್ದೇನೆ. ತ್ರಿವಿಕ್ರಮ ಕಥೆಯು ನಾಯಕ ಮತ್ತು ನಾಯಕಿ ಇಬ್ಬರಿಗೂ ಸಮಾನ ಪ್ರಾಮುಖ್ಯತೆಯನ್ನು ಹೊಂದಿತ್ತು. ಆದಕಾರಣ ಈ ಚಿತ್ರ ಒಪ್ಪಿಕೊಂಡೆ.

ನನ್ನ ಪ್ರತಿಭೆ ತೋರಿಸಲು ವೇದಿಕೆಯ ಅಗತ್ಯವಿತ್ತು. ನಟಿಸಲು ತ್ರಿವಿಕ್ರಮ ಅವಕಾಶ ನೀಡಿತು. ನನ್ನ ನೃತ್ಯ ಕೌಶಲ್ಯವನ್ನು ಸಹ ಪ್ರದರ್ಶಿಸಿದ್ದೇನೆ. ರವಿಚಂದ್ರನ್ ಪುತ್ರ ವಿಕ್ರಮ್ ಕೂಡ ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದರಿಂದ ನಾನು ಈ ಪಾತ್ರ ಒಪ್ಪಲು ಮತ್ತೊಂದು ಕಾರಣ ಎಂದು ಅವರು ತಿಳಿಸಿದರು.

ಕಳೆದ ಮೂರು ವರ್ಷಗಳಿಂದ ಚಿತ್ರದಲ್ಲಿ ಕೆಲಸ ಮಾಡುವ ಮೂಲಕ ಸಾಕಷ್ಟು ಆತ್ಮವಿಶ್ವಾಸವನ್ನು ಗಳಿಸಿರುವುದಾಗಿ ಹೇಳುವ ಆಕಾಂಕ್ಷಾ,“ಆರಂಭದಲ್ಲಿ ನಾನು ಅನ್ಯಲೋಕದವನಂತೆ ಭಾವಿಸಿದೆ, ಆದರೆ ನನ್ನನ್ನು ಚೆನ್ನಾಗಿ ಸ್ವೀಕರಿಸಲಾಯಿತು. ಇವತ್ತು, ಎಲ್ಲಿ ಯಾವಾಗ ಬೇಕಾದರೂ ನನ್ನ ಮುಂದೆ ಕ್ಯಾಮರಾ ಇಟ್ಟರೂ ಮ್ಯಾನೇಜ್ ಮಾಡುತ್ತೇನೆ. ತ್ರಿವಿಕ್ರಮ ಸೆಟ್‌ನಲ್ಲಿ ಪಡೆದ ತರಬೇತಿಗೆ ಧನ್ಯವಾದ ಎನ್ನುತ್ತಾರೆ. 

ಇದನ್ನೂ ಓದಿ: ರವಿಚಂದ್ರನ್ ಪುತ್ರನಿಗೆ ನಿರ್ದೇಶನ ಮಾಡುವುದು ಹೆಮ್ಮೆಯ ವಿಷಯ: ತ್ರಿವಿಕ್ರಮ ಡೈರೆಕ್ಟರ್ ಸಹನಾ ಮೂರ್ತಿ

ಇಂದಿನ ಕಾಲದಲ್ಲಿ ಸ್ಟೀರಿಯೊಟೈಪಿಕಲ್ ‘ನಾಯಕಿ’ ಚಿತ್ರಣ ಬದಲಾಗಿದೆ ಎನ್ನುತ್ತಾರೆ ಆಕಾಂಕ್ಷಾ. “ಇದು ಇನ್ನು ಮುಂದೆ ಗ್ಲಾಮರ್ ಮತ್ತು ಅಂದದ ಬಗ್ಗೆ ಅಲ್ಲ. ಇದು ಈ ದಿನಗಳಲ್ಲಿ ಪ್ರತಿಭೆಯೊಂದಿಗೆ ಹೆಚ್ಚು ಸಂಬಂಧಿಸಿದೆ. ತ್ರಿವಿಕ್ರಮ ಸಿನಿಮಾದಲ್ಲಿ ಕೆಲಸ ಮಾಡಿದ ನಂತರ ನನಗೆ ಅನಿಸಿದ್ದು ಹೀಗೆ.

ಇಂದಿನ ದಕ್ಷಿಣ ಭಾರತದ ಚಲನಚಿತ್ರಗಳನ್ನು ‘ಪ್ಯಾನ್-ಇಂಡಿಯನ್ ಸಿನಿಮಾ’ ಎಂದು ಪರಿಗಣಿಸಲಾಗುತ್ತದೆ ಮತ್ತು ಕನ್ನಡದಲ್ಲಿ ಮತ್ತು ವಿಷಯ-ಚಾಲಿತ ಚಿತ್ರದೊಂದಿಗೆ ನನ್ನ ವೃತ್ತಿಜೀವನ ಪ್ರಾರಂಭಿಸಲು ಸಂತೋಷವಾಗಿದೆ. ಗ್ಲಾಮರ್ ಗೊಂಬೆಯಾಗಿ ಮಾತ್ರವಲ್ಲದೆ ಪ್ರದರ್ಶಕ ಮತ್ತು ಉತ್ತಮ ನೃತ್ಯಗಾರ್ತಿಯಾಗಿ ಗಮನ ಸೆಳೆಯುವ ಗುರಿ ಹೊಂದಿದ್ದೇನೆ ಎಂದು ತಿಳಿಸಿದರು.
 

Source link

For more news update stay with actp news

Android App

Facebook

Twitter

Dailyhunt

Share Chat

Telegram

Koo App

Leave a Reply

Your email address will not be published. Required fields are marked *