PTI
ನವದೆಹಲಿ: ರಾಜಸ್ತಾನದ ಉದಯಪುರದಲ್ಲಿ ದರ್ಜಿಯ ಹತ್ಯೆ ಪ್ರಕರಣವನ್ನು ಭಯೋತ್ಪಾದಕ ಕೃತ್ಯವೆಂದು ಪರಿಗಣಿಸಿರುವ ಕೇಂದ್ರ ಗೃಹ ಇಲಾಖೆ ಘಟನೆಗೆ ಸಂಬಂಧಪಟ್ಟಂತೆ ಸಮಗ್ರ ಹಾಗೂ ವಿಸ್ತಾರವಾಗಿ ತನಿಖೆ ನಡೆಸಲು ರಾಷ್ಟ್ರೀಯ ತನಿಖಾ ಸಂಸ್ಥೆ(NIA)ಗೆ ವಹಿಸಿದೆ.
ರಾಜಸ್ತಾನದ ಉದಯಪುರದಲ್ಲಿ ಟೈಲರ್ ನ ಹತ್ಯೆ ಪ್ರಕರಣವನ್ನು ಅತ್ಯಂತ ಭಯಾನಕ ಎಂದು ಬಣ್ಣಿಸಿರುವ ಗೃಹ ಇಲಾಖೆ ಇದರ ಹಿಂದೆ ಯಾವುದಾದರೂ ಸಂಘಟನೆಯ ಅಥವಾ ಅಂತಾರಾಷ್ಟ್ರೀಯ ಸಂಘಟನೆಗಳು, ವ್ಯಕ್ತಿಗಳ ಕೈವಾಡವಿದೆಯೇ ಎಂದು ಸಹ ತನಿಖೆ ನಡೆಸಲಿದೆ.
ರಾಜಸ್ತಾನದ ಉದಯಪುರದಲ್ಲಿ ನಿನ್ನೆ ಕನ್ನಯ್ಯ ಲಾಲ್ ತೆಲಿ ಎಂಬ ದರ್ಜಿಯ ಅತ್ಯಂತ ಭೀಕರ ಕೊಲೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಲಾಗಿದೆ. ಕುಕೃತ್ಯದ ಹಿಂದೆ ಯಾವುದಾದರೂ ಸಂಘಟನೆಯ ಅಥವಾ ಅಂತಾರಾಷ್ಟ್ರೀಯ ಸಂಘಟನೆಯ ಕೈವಾಡವಿದೆಯೇ ಎಂದು ಸಮಗ್ರವಾಗಿ ತನಿಖೆ ಮಾಡಲಾಗುತ್ತದೆ ಎಂದರು.
ರಾಜಸ್ಥಾನ ಪೊಲೀಸರು ಬಂಧಿಸಿರುವ ಇಬ್ಬರು ಆರೋಪಿಗಳು ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಐಸಿಸ್ನಿಂದ ಪ್ರಭಾವಿತರಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯ ನಂತರ ಗೃಹ ಸಚಿವಾಲಯ ನಿನ್ನೆ ಮಂಗಳವಾರ ರಾತ್ರಿ ತನಿಖಾ ತಂಡವನ್ನು ಸ್ಥಳಕ್ಕೆ ಕಳುಹಿಸಿತ್ತು.
ಇದನ್ನೂ ಓದಿ: ಟೈಲರ್ ಹತ್ಯೆ ಪ್ರಕರಣ: ಇದು ಸಾಮಾನ್ಯ ಘಟನೆಯಲ್ಲ, ಹತ್ಯೆ ಹಿಂದಿನ ಪಿತೂರಿ ಶೀಘ್ರದಲ್ಲೇ ಬಹಿರಂಗ: ರಾಜಸ್ಥಾನ ಸಿಎಂ
ಉದಯಪುರ ಪಟ್ಟಣವು ನಿನ್ನೆ ಆಘಾತಕಾರಿ ಘಟನೆಗೆ ಸಾಕ್ಷಿಯಾಗಿದ್ದು, ಆರೋಪಿಗಳಲ್ಲಿ ಒಬ್ಬನಾದ ರಿಯಾಜ್ ಅಖ್ತರಿ, ತೆಲಿ ಅವರ ಕತ್ತು ಸೀಳಿದ್ದನು. ಮತ್ತೊಬ್ಬ ಆರೋಪಿ ಘೌಸ್ ಮೊಹಮ್ಮದ್ ಮೊಬೈಲ್ ಫೋನ್ನಲ್ಲಿ ಕೃತ್ಯವನ್ನು ರೆಕಾರ್ಡ್ ಮಾಡಿದ್ದಾನೆ.
ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ವೀಡಿಯೊ ಕ್ಲಿಪ್ನಲ್ಲಿ, ಆಕ್ರಮಣಕಾರರಲ್ಲಿ ಒಬ್ಬ ಆ ವ್ಯಕ್ತಿಯನ್ನು ತಲೆ ಕತ್ತರಿಸಿ ಎಂದು ಹೇಳಿಕೊಂಡಿದ್ದಾನೆ. ನಂತರ ಚಾಕು ತೋರಿಸಿ ಪ್ರಧಾನಿ ಮೋದಿಗೂ ಬೆದರಿಕೆ ಹಾಕಿದ್ದಾರೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App