Online Desk
ಮುಂಬೈ: ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯದ ನೇತೃತ್ವ ವಹಿಸಿದ್ದ ಏಕನಾಥ್ ಶಿಂಧೆ ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ ಎಂದು ಭಾರತೀಯ ಜನತಾ ಪಕ್ಷದ(ಬಿಜೆಪಿ) ನಾಯಕ ದೇವೇಂದ್ರ ಫಡ್ನವಿಸ್ ಅವರು ಘೋಷಣೆ ಮಾಡ್ತಿದ್ದಂತೆ ಗೋವಾದಲ್ಲಿರುವ ರೆಬೆಲ್ ಶಾಸಕರು ಕುಣಿದು ಕುಪ್ಪಳಿಸಿದ್ದಾರೆ. ಹಾಗಾದರೆ ರೆಬೆಲ್ ಶಾಸಕರ ಸಂಭ್ರಮಕ್ಕೆ ಕರಣವಾದ ಈ ಏಕನಾಥ್ ಶಿಂಧೆ ಯಾರು? ಇವರು ಅಷ್ಟೊಂದು ಪ್ರಭಾವಿಯಾ ಅಂತ ನೋಡಿದರೆ…
ಇದನ್ನು ಓದಿ: ರಾಜ್ಯದ ಹಿತಾಸಕ್ತಿಯಿಂದ ಮಹಾರಾಷ್ಟ್ರ ಸರ್ಕಾರದಲ್ಲಿ ದೇವೇಂದ್ರ ಫಡ್ನವೀಸ್ ಸೇರ್ಪಡೆ: ಅಮಿತ್ ಶಾ
- ಏಕನಾಥ್ ಶಿಂಧೆ ಥಾಣೆಯಲ್ಲಿ ಆಟೋರಿಕ್ಷಾ ಚಾಲಕರಾಗಿದ್ದರು. ಮಹಾರಾಷ್ಟ್ರದ ಸತಾರಾದಿಂದ ಹದಿಹರೆಯದಲ್ಲಿ ಮುಂಬೈಗೆ ಆಗಮಿಸಿ ಶಿವಸೇನೆ ಸೇರಿದರು. ಪಕ್ಷಕ್ಕಾಗಿ ಕಾರ್ಮಿಕ ಸಂಘವನ್ನು ಪ್ರಾರಂಭಿಸಿದ ನಂತರ ಅವರು ಪಕ್ಷದಲ್ಲಿ ಉತ್ತುಂಗಕ್ಕೇರಿದರು.
- ಶಿಂಧೆ 1997 ರಲ್ಲಿ ಥಾಣೆ ಮುನ್ಸಿಪಲ್ ಕಾರ್ಪೊರೇಶನ್ಗೆ ಚುನಾಯಿತರಾದರು. ಅವರಿಗೆ ಥಾಣೆಯಲ್ಲಿ ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ತೊಡಗಲು ಶಿವಸೇನೆಯು ಸೂಚಿಸಿತು. ಇದು ಅವರಿಗೆ ಈ ಪ್ರದೇಶದಲ್ಲಿ ನೆಲೆಯನ್ನು ನಿರ್ಮಿಸಲು ಸಹಾಯ ಮಾಡಿತು.
- 2004 ರಲ್ಲಿ ಮಹಾರಾಷ್ಟ್ರ ಅಸೆಂಬ್ಲಿಗೆ ಏಕನಾಥ್ ಶಿಂಧೆ ಚುನಾಯಿತರಾದರು. ಪಕ್ಷದ ಸಂಸ್ಥಾಪಕ ಬಾಳ್ ಠಾಕ್ರೆ ಅವರ ಸೋದರ ಮಗ ರಾಜ್ ಠಾಕ್ರೆ ಪಕ್ಷ ತೊರೆದು ಮಹಾರಾಷ್ಟ್ರ ನವನಿರ್ಮಾಣ ಸೇನೆಯನ್ನು (MNS) ಪ್ರಾರಂಭಿಸಿದ ನಂತರ ಶಿವಸೇನೆಯಲ್ಲಿ ಅವರ ಸ್ಥಾನ ಮತ್ತಷ್ಟು ಬಲವಾಯಿತು.
- ಏಕನಾಥ್ ಶಿಂಧೆ ಅವರ ಪುತ್ರ ಶ್ರೀಕಾಂತ್ ಶಿಂಧೆ ಕಲ್ಯಾಣ್ ಕ್ಷೇತ್ರದಿಂದ ಲೋಕಸಭಾ ಸಂಸದರಾಗಿದ್ದು, ಅವರ ಸಹೋದರ ಪ್ರಕಾಶ್ ಶಿಂಧೆ ಕೌನ್ಸಿಲರ್ ಆಗಿದ್ದಾರೆ.
- ಶಿವಸೇನೆಯ ಪ್ರಧಾನ ಟ್ರಬಲ್ ಶೂಟರ್ ಶಿಂಧೆ ಅವರು ಯಶವಂತರಾವ್ ಚವಾಣ್ ಮಹಾರಾಷ್ಟ್ರ ಮುಕ್ತ ವಿಶ್ವವಿದ್ಯಾನಿಲಯದಿಂದ ತಮ್ಮ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಪಡೆದಿದ್ದಾರೆ. ಅವರು ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಾಲ್ಕು ಅವಧಿಗೆ 2004, 2009, 2014 ಮತ್ತು 2019ರಲ್ಲಿ ಸತತವಾಗಿ ಶಾಸಕರಾಗಿ ಚುನಾಯಿತರಾಗಿದ್ದಾರೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App