English Tamil Hindi Telugu Kannada Malayalam Google news Android App
Sat. Jan 28th, 2023

The New Indian Express

ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ತಮ್ಮ ಐತಿಹಾಸಿಕ ಸಿನಿಮಾ ‘ವೀರ ಕಂಬಳ’ದ ಶೂಟಿಂಗ್ ಶೀಘ್ರವೇ ಮುಗಿಸಲಿದ್ದಾರೆ. ಸಿನಿಮಾಗಾಗಿ ಕಥೆ ಬರೆಯಲು ನಿರ್ದೇಶಕರು ಸುಮಾರು 2 ವರ್ಷಗಳ ಸಮಯ ತೆಗೆದುಕೊಂಡಿದ್ದಾರೆ.

ದಕ್ಷಿಣ ಕನ್ನಡದ ಅಚ್ಚುಮೆಚ್ಚಿನ ಕಂಬಳದ ಕುರಿತಾಗಿ ಬರುತ್ತಿರುವ, ವೀರ ಕಂಬಳ ಚಿತ್ರದಲ್ಲಿ ಕಂಬಳದ ಪರ ವಕೀಲರಾಗಿ ಪ್ರಕಾಶ್ ರೈ ನಟಿಸಿದ್ದಾರೆ. ಪ್ರತಿವಾದಿಯಾಗಿ ರವಿಶಂಕರ್ ಅಭಿನಯಿಸಿದ್ದಾರೆ. ಈ ಕೋರ್ಟ್ ಸನ್ನಿವೇಶವನ್ನು ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ಸೆರೆ ಹಿಡಿಯಲಾಯಿತು.

ಎರಡು ವರ್ಷ ಸ್ಕ್ರಿಪ್ಟ್​ ಮಾಡಿದ್ದೇವೆ. 16 ಸಾವಿರ ಪುಟಗಳ ಚರ್ಚೆಯಾಗಿದೆ. ಕೋರ್ಟ್ ದೃಶ್ಯಗಳು, ಈ ವಾದಗಳನ್ನು ಯಾವ ರೀತಿ ತರಬೇಕು ಎಂಬುದು ಮುಖ್ಯ. ಏಕೆಂದರೆ, ಕಾಮೆಂಟರಿ ಅಥವಾ ಸಾಕ್ಷ್ಯಚಿತ್ರ ಆಗಬಾರದು. ದೊಡ್ಡ ಸವಾಲಿತ್ತು. ತುಂಬಾ ಜನರ ಸಲಹೆ ಪಡೆದೆ.

ಟಿ.ಎನ್​.ಸೀತಾರಾಮ್ ಅವರಿಂದ ಬೇಕಾದಷ್ಟು ವಿಷಯ ಕಲೆ ಹಾಕಿದೆವು. ಒಂಭತ್ತು ತಿಂಗಳಿನಿಂದ ಇದೊಂದು ಸೀನ್​ ಮೇಲೆ ನಾನು ಮತ್ತು ವಿಜಯ್​ ಕುಮಾರ್​ ಕೊಡಿಯಾಲ್​ಬೈಲ್​ ಕೆಲಸ ಮಾಡುತ್ತಿದ್ದೇವೆ. ಅದೇ ಕಾರಣಕ್ಕೆ ಚಿತ್ರೀಕರಣ ಕೊನೆಯಲ್ಲಿಟ್ಟುಕೊಂಡೆವು.

ಇದನ್ನೂ ಓದಿ: 2,000 ವರ್ಷಗಳಷ್ಟು ಹಳೆಯದಾದ ‘ಕಂಬಳ’ ಕ್ರೀಡೆಯನ್ನು ಇಡೀ ವಿಶ್ವದ ಮುಂದೆ ಪ್ರಸ್ತುತ ಪಡಿಸಲು ಬಯಸುತ್ತೇನೆ: ರಾಜೇಂದ್ರ ಸಿಂಗ್ ಬಾಬು

ಇದನ್ನು ಹೇಗೆ ಹೇಳಬೇಕು ಎಂದು ಯೋಚಿಸಿ, ಇವತ್ತು ಚಿತ್ರೀಕರಣ ಮಾಡುತ್ತಿದ್ದೇವೆ. ನಾವೇನೇ ಬರೆದಿಟ್ಟುಕೊಂಡರೂ ಪ್ರಕಾಶ್​ ರೈ ಮತ್ತು ರವಿ ಶಂಕರ್ ಅವರ ಅಭಿನಯ, ದೃಶ್ಯದ ಮೌಲ್ಯ ಹೆಚ್ಚಿಸಿದೆ. ಇಬ್ಬರೂ ಅಪ್ಪಟ ಪ್ರತಿಭಾವಂತರು.

ಪ್ರಕಾಶ್ ರೈ ಈ ಹಿಂದೆ “ಮುತ್ತಿನ ಹಾರ” ಚಿತ್ರದಲ್ಲಿ ನಟಿಸಿದ್ದರು. ಒಳ್ಳೆಯ ಕ್ಷಣ ಕಳೆದಿದ್ದೇವೆ. ಅದನ್ನು ನೆನಪಿಟ್ಟುಕೊಂಡು ಅವರು ಬಂದು ನಟಿಸುತ್ತಿದ್ದಾರೆ. ಎರಡು ಫೋನ್​​ ಮಾಡಿದೆ. ಅವರು ಒಪ್ಪಿ ನಟಿಸಿದರು. ಹೈದರಾಬಾದ್​ನಿಂದ ನೇರವಾಗಿ ಚಿತ್ರೀಕರಣಕ್ಕೆ ಬಂದರು. ಭಾರತ ಅಲ್ಲ, ಪ್ರಪಂಚದ ಎಲ್ಲ ಭಾಷೆಗಳಲ್ಲೂ ನಟಿಸಲಿ. ಎಲ್ಲಿ ಹೋದರು ಗೆದ್ದು ಬರುತ್ತಾರೆ. ಅವರಿಗೆ ಆ ಪ್ರತಿಭೆ ಇದೆ. ಕನ್ನಡಿಗರ ಆಶೀರ್ವಾದವಿದೆ. ರವಿಶಂಕರ್​ ಬಹಳ ಒಳ್ಳೆಯ ಪಾತ್ರಗಳನ್ನು ಮಾಡುತ್ತಿದ್ದಾರೆ. ಇಲ್ಲೂ ಒಂದೊಳ್ಳೆಯ ಪಾತ್ರವಿದೆ.

ಇದುವರೆಗೂ ಹಲವು ಕೋರ್ಟ್​ ದೃಶ್ಯಗಳಲ್ಲಿ ಭಾಗವಹಿಸಿದ್ದರೂ ಇದು ಬೇರೆ. ಇದು ನನ್ನ ಮಣ್ಣಿನ ಒಂದು ವಿಷಯ. ಎಲ್ಲರೂ ತಿಳಿದುಕೊಳ್ಳಬೇಕಾದ ಒಂದು ವಿಷಯ. ಇಲ್ಲಿ ಸಂಭಾಷಣೆಯ ಮಾತುಗಳಿಗಿಂತ ನನ್ನ ಭಾವನೆಯೂ ಮುಖ್ಯವಾಗುತ್ತದೆ. ತುಂಬಾ ಒಳ್ಳೆಯ ಕತೆ ಮಾಡಿಕೊಂಡಿದ್ದಾರೆ. ಕತೆ ಹಾಗೂ ನಿರ್ದೇಶಕ ರಾಜೇಂದ್ರಸಿಂಗ್‌ ಬಾಬು ಅವರಿಗಾಗಿ ಒಂದು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಇನ್ನೂ ತುಂಬಾ ದಿನಗಳ ನಂತರ ಅಂತೇನು ಇಲ್ಲ. ನಾನು ಕಲಾವಿದ. ಕತೆಗಳಿಗೆ ನನ್ನ ಅಗತ್ಯ ಇದ್ದರೆ ಖಂಡಿತ ಅಂಥ ಚಿತ್ರಗಳ ಜತೆ ನಾನಿರುತ್ತೇನೆ ಎಂದಿದ್ದಾರೆ ಪ್ರಕಾಶ್ ರೈ.

ಇದನ್ನೂ ಓದಿ: ‘ಕಾಂತಾರ’ ಸಿನಿಮಾಗಾಗಿ ಕಂಬಳ ಓಟದ ದೃಶ್ಯ ಚಿತ್ರೀಕರಿಸಿದ ರಿಷಬ್ ಶೆಟ್ಟಿ

ಯಾರೋ ಒಬ್ಬರು ಕಂಬಳದ ನೀರು ಕೆಸರು ಎಂದಾಗ, ಇಲ್ಲ ಅದು ಕೆಸರಲ್ಲ, ಅದು ತೀರ್ಥ ಅಂತ ಹೇಳುವ ದೃಶ್ಯಗಳಿವೆ ಎಂದರು ಪ್ರಕಾಶ್ ರೈ. ನಾನು ಈ ಚಿತ್ರದಲ್ಲಿ ನಟಿಸಲು ಮೂರು ಕಾರಣಗಳಿವೆ. ಮೊದಲು ನನಗೆ  ತುಳು ಭಾಷೆಯ ಚಿತ್ರದಲ್ಲಿ ನಟಿಸುವ ಆಸೆಯಿತ್ತು.‌ ನಂತರ ನಾನು ರಾಜೇಂದ್ರ ಸಿಂಗ್ ಬಾಬು ಅವರ ಅಭಿಮಾನಿ. “ಬಂಧನ”, ” ಮುತ್ತಿನ ಹಾರ” ಚಿತ್ರಗಳನ್ನು ಸಾಕಷ್ಟು ಸಲ ನೋಡಿದ್ದೀನಿ ಮತ್ತು ಭಾರತದ ಶ್ರೇಷ್ಠ ನಟ ಪ್ರಕಾಶ್ ರೈ ಅವರೊಂದಿಗೆ ನಟಿಸುವ ಅವಕಾಶ ಸಿಕ್ಕಿರುವುದು ಈ ಎಲ್ಲಾ ಕಾರಣಕ್ಕೆ “ವೀರ ಕಂಬಳ” ನನಗೆ ವಿಶೇಷ ಎಂದು ರವಿಶಂಕರ್ ತಿಳಿಸಿದ್ದಾರೆ.

ಎಆರ್ ಪ್ರೊಡಕ್ಷನ್ಸ್ ಬ್ಯಾನರ್‌ನ ಅರುಣ್ ರಾವ್ ನಿರ್ಮಾಣದ ಈ ಚಿತ್ರಕ್ಕೆ ಖಾದ್ರಿ ಮಣಿಕಾಂತ್ ಅವರ ಸಂಗೀತ ಮತ್ತು ಆರ್ ಗಿರಿ ಅವರ ಛಾಯಾಗ್ರಹಣವಿದೆ. ಇದರಲ್ಲಿ ಕಂಬಳ ಓಟಗಾರರಾದ ಶ್ರೀನಿವಾಸ್ ಗೌಡ ಮತ್ತು ಸ್ವರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Source link

For more news update stay with actp news

Android App

Facebook

Twitter

Dailyhunt

Share Chat

Telegram

Koo App

Leave a Reply

Your email address will not be published. Required fields are marked *