The New Indian Express
ಬೆಂಗಳೂರು: ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಗುರುವಾರ ಬೆಂಗಳೂರಿನಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದ್ದ ಇಂಡಿಗೋ ವಿಮಾನಕ್ಕೆ ಲ್ಯಾಂಡ್ ಆಗಲು ಅನುಮತಿ ನೀಡದ ಕಾರಣ ವಿಮಾನ ವಾಪಸ್ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರಳಿದೆ.
ವಿಮಾನ ಸಂಖ್ಯೆ 6E 131, KIA ಯಿಂದ ನಿಗದಿತ ಸಮಯಕ್ಕಿಂತ 15 ನಿಮಿಷಗಳ ಮುನ್ನ 6.30 ಕ್ಕೆ ನಿರ್ಗಮಿಸಿತು. ಅದು ನಿಗದಿತ ಆಗಮನದ ಸಮಯವಾದ 7.10 ಕ್ಕೆ ಮಂಗಳೂರನ್ನು ತಲುಪಿತು. ಆದರೆ ವಿಮಾನ ಲ್ಯಾಂಡ್ ಮಾಡಲು ಸಾಧ್ಯವಾಗಲಿಲ್ಲ. “ವಿಮಾನ ನಿಲ್ದಾಣದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ವಿಮಾನ ಲ್ಯಾಂಡ್ ಮಾಡಲು ಅನುಮತಿ ಸಿಕ್ಕಿಲ್ಲ. ಹೀಗಾಗಿ ಮಂಗಳೂರು ವಿಮಾನ ನಿಲ್ದಾಣದ ಮೇಲೆ ಕೆಲಕಾಲ ಹಾರಾಡಿದ ಇಂಡಿಗೋ ವಿಮಾನ ವಾಪಸ್ ಬೆಂಗಳೂರಿಗೆ ಮರಳಿದೆ” ಎಂದು ಇಂಡಿಗೋ ವಕ್ತಾರರು ತಿಳಿಸಿದ್ದಾರೆ.
ಇದನ್ನು ಓದಿ: ಇಂಡಿಗೋ ವಿಮಾನಗಳ ಘರ್ಷಣೆ ಸ್ವಲ್ಪದರಲ್ಲೇ ಮಿಸ್: ಕೆಐಎಯ ಎಟಿಸಿ ಅಧಿಕಾರಿಗಳ ವಿರುದ್ಧ ಡಿಜಿಸಿಎ ಕ್ರಮ
ಈ ವಿಮಾನವು ಮಂಗಳೂರಿನ ಆಕಾಶದಲ್ಲಿ ಸುಮಾರು 30 ನಿಮಿಷಗಳ ಕಾಲ ಹಾರಾಡುತ್ತಿತ್ತು ಎಂದು ಮೂಲಗಳು ತಿಳಿಸಿವೆ.
6E 131 ವಿಮಾನವನ್ನು ವಾಪಸ್ ಕಳುಹಿಸಲಾಗಿದೆ ಎಂದು ಮಂಗಳೂರು ವಿಮಾನ ನಿಲ್ದಾಣದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App