PTI
ನಟಿ ಸಮಂತಾರಿಂದ ವಿಚ್ಛೇದನ ಪಡೆದು ದೂರಾದ ಮೇಲೆ ನಾಗ ಚೈತನ್ಯ ಶೋಭಿತಾ ಧುಲಿಪಲ ಜೊತೆ ಡೇಟ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನಾಗ ಚೈತನ್ಯ ಅಥವಾ ಶೋಭಿತಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದನ್ನು ಗಮನಿಸಿದ ಚೈತನ್ಯ ಅಭಿಮಾನಿಗಳು ಸಮಂತಾ ಅವರೇ ಈ ರೀತಿ ಸುದ್ದಿ ಹಬ್ಬಿಸುತ್ತಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ನಟಿ ಶೋಭಿತಾ ಧುಲಿಪಾಲ ಅವರೊಂದಿಗೆ ತಮ್ಮ ವಿಚ್ಛೇದಿತ ಪತಿ ನಾಗ ಚೈತನ್ಯ ಡೇಟಿಂಗ್ ಮಾಡುತ್ತಿರುವ ಕುರಿತು ಸಮಂತಾ ಮೌನ ಮುರಿದಿದ್ದಾರೆ. ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನ ಪಡೆದು 1 ವರ್ಷ ಆಗುತ್ತಿದೆ. ಸದ್ಯ ಇಬ್ಬರೂ ತಮ್ಮದೇ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇದರ ನಡುವೆ ಶೋಭಿತಾ ಧುಲಿಪಾಲ ಅವರೊಂದಿಗೆ ನಾಗ ಚೈತನ್ಯ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವದಂತಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಈ ವಿಚಾರಕ್ಕೆ ಸಂಬಂಧಿಸಿ ನಾಗ ಚೈತನ್ಯ ಅಭಿಮಾನಿಗಳು ಸಮಂತಾ ಅವರ ಹೆಸರನ್ನು ಎಳೆದು ತಂದಿದ್ದರು. ಸದ್ಯ ಈ ಕುರಿತು ಟ್ವೀಟ್ ಮಾಡುವ ಮೂಲಕ ಸಮಂತಾ ಟೀಕಾಕಾರರಿಗೆ ಖಡಕ್ ಉತ್ತರ ನೀಡಿದ್ದಾರೆ. ‘ಹೆಣ್ಣು ಮಕ್ಕಳ ಬಗ್ಗೆ ವದಂತಿ ಹಬ್ಬಿದರೆ ಅದು ನಿಜ ಎನ್ನುತ್ತೀರಿ. ಗಂಡು ಮಕ್ಕಳ ಬಗ್ಗೆ ವದಂತಿ ಹಬ್ಬಿದರೆ ಇದು ಹೆಣ್ಣಿನ ಕೆಲಸ ಎನ್ನುತ್ತೀರಿ. ಇದರಲ್ಲಿ ಭಾಗಿಯಾದವರೇ ಎಲ್ಲವನ್ನು ಬಿಟ್ಟು ಮುಂದೆ ಸಾಗಿದ್ದಾರೆ. ನೀವೂ ಇದನ್ನು ಬಿಟ್ಟು ಮುಂದೆ ಸಾಗಿ. ನಿಮ್ಮ ಕೆಲಸ ನೋಡಿಕೊಳ್ಳಿ, ನಿಮ್ಮ ಕುಟುಂಬದ ಕಡೆ ಗಮನ ನೀಡಿ’ ಎಂದು ಟೀಕಾಕಾರರಿಗೆ ಸಮಂತಾ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಜೀವನ, ವಿಚ್ಛೇದನ, ಅವಮಾನ, ಸಾವು ಕುರಿತು ನಟಿ ಸಮಂತಾ ವೇದಾಂತ!
ತ್ತೀಚೆಗೆ ಜುಬ್ಲೀ ಹಿಲ್ಸ್ನಲ್ಲಿರುವ ನಾಗ ಚೈತನ್ಯ ಅಪಾರ್ಟ್ಮೆಂಟ್ನಲ್ಲಿ ಶೋಭಿತಾ ಧುಲಿಪಲ ಕಾಣಿಸಿಕೊಂಡಿದ್ದರು. ಒಂದೇ ಕಾರ್ನಲ್ಲಿ ಅವರಿಬ್ಬರು ಆ ಮನೆಯಿಂದ ಹೊರಬಂದಿದ್ದಾರೆ. ಅವರಿಬ್ಬರ ನಡುವಿನ ಬಾಂಧವ್ಯ ತುಂಬ ಚೆನ್ನಾಗಿದೆ. ಇನ್ನು ಆ ಮನೆಯ ಕೆಲಸ ಕೂಡ ಇನ್ನೂ ನಡೆಯುತ್ತಿದೆ. ‘ಮೇಜರ್’ ಸಿನಿಮಾ ವೇಳೆ ಸಾಕಷ್ಟು ಬಾರಿ ನಾಗ ಚೈತನ್ಯ, ಶೋಭಿತಾ ಭೇಟಿಯಾಗಿದ್ದರು” ಸಿನಿ ಮೂಲಗಳು ಹೇಳಿವೆ.
Rumours on girl – Must be true !!
Rumours on boy – Planted by girl !!
Grow up guys ..
Parties involved have clearly moved on .. you should move on too !! Concentrate on your work … on your families .. move on!! https://t.co/6dbj3S5TJ6— Samantha (@Samanthaprabhu2) June 21, 2022
For more news update stay with actp news
Android App
Facebook
Twitter
Dailyhunt
Share Chat
Telegram
Koo App