The New Indian Express
ಬೆಂಗಳೂರು: ರಾಜ್ಯ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಮತ್ತು ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆಓಎ) ಜಂಟಿಯಾಗಿ ಬೆಂಗಳೂರಿನಲ್ಲಿ ಆಯೋಜಿಸಿರುವ ರಾಜ್ಯ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳಗಾವಿಯ ಜೂಡೋ ಆಟಗಾರರು ಅತ್ತುತ್ತಮ ಪ್ರದರ್ಶನ ನೀಡಿದ್ದಾರೆ.
ಜಿಲ್ಲೆಯ ಜೂಡೋ ಆಚಗಾರರು 11 ಚಿನ್ನ, 2 ಬೆಳ್ಳಿ ಹಾಗೂ 2 ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಬಾಲಕಿಯರ ಜೂಡೋ ಕ್ರೀಡೆಯಲ್ಲಿ ಭೂಮಿಕಾ (32 ಕೆಜಿ ವಿಭಾಗ) ಚಿನ್ನ, ಅಮೃತಾ ನಾಯಕ್ (36 ಕೆಜಿ)– ಚಿನ್ನ, ಶ್ವೇತಾ ಅಲಕನೂರ್ (40 ಕೆಜಿ)– ಚಿನ್ನ, ಸೋನಾಲಿಕಾ ಸಿ ಎಸ್ (44 ಕೆಜಿ)– ಚಿನ್ನ, ಶಗುಫ್ತಾ ವಾಲಿಕರ್ (48 ಕೆಜಿ)– ಚಿನ್ನ, ಅಲಿಯಾ (52 ಕೆಜಿ) – ಚಿನ್ನ, ಆಫ್ರಿನ್ (57 ಕೆಜಿ) – ಚಿನ್ನ ಮತ್ತು ನಿಶಾ ಕಂಗ್ರಾಲ್ಕರ್ (+57 ಕೆಜಿ) – ಕಂಚಿನ ಪದಕ ಗೆದ್ದಿದ್ದಾರೆ.
ಬಾಲಕರ ಜೂಡೋ ಕ್ರೀಡೆಯಲ್ಲಿ ಸೂರಜ್ ಸಾವಂತ್ (40 ಕೆಜಿ) ಚಿನ್ನ, ಪ್ರೀತಮ್ (45 ಕೆಜಿ) ಬೆಳ್ಳಿ, ಅಮಿತ್ ಕುಮಾರ್ (50 ಕೆಜಿ) ಬೆಳ್ಳಿ, ರಿಯಾಜ್ ಕಿಲ್ಲೇಕರ್ (55 ಕೆಜಿ) ಚಿನ್ನ, ಅಬ್ದುಲ್ (60 ಕೆಜಿ) ಕಂಚು, ಇರ್ಷಾದ್ (66 ಕೆಜಿ) ಚಿನ್ನ ಮತ್ತು ಆರ್ಯನ್ ಡೊಂಗಲೆ (+66 ಕೆಜಿ) ಚಿನ್ನದ ಪದಕ ಗೆದ್ದಿದ್ದಾರೆ.
ವಿಜೇತರಿಗೆ ಬೆಳಗಾವಿಯ ಯುವ ಸಬಲೀಕರಣ ಇಲಾಖೆ ಮತ್ತು ಕ್ರೀಡಾ ಜೂಡೋ ಕೇಂದ್ರದಲ್ಲಿ ತರಬೇತಿ ನೀಡಲಾಗಿತ್ತು. ಜೂಡೋ ಕೋಚ್ ರೋಹಿಣಿ ಪಾಟೀಲ್ ಮತ್ತು ಕುತುಜಾ ಮುಲ್ತಾನಿಯವರು ಆಟಗಾರರಿಗೆ ತರಬೇತಿ ನೀಡಿ, ಯಶಸ್ಸಿನತ್ತ ಮುನ್ನಡೆಸಿದ್ದಾರೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App