English Tamil Hindi Telugu Kannada Malayalam Google news Android App
Sat. Jan 28th, 2023

PTI

ಜೋಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾದಲ್ಲಿ ಕೋಟ್ಯಂತರ ರೂ ವಂಚನೆ ಮಾಡಿ, ಭ್ರಷ್ಟಾಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಭಾರತ  ಮೂಲದ ಗುಪ್ತಾ ಸಹೋದರರನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜೇಕಬ್ ಜುಮಾ ಅವರಿಗೆ ನಿಕಟ ಹಾಗೂ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಗುಪ್ತಾ ಸಹೋದರರನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಬಂಧಿಸಲಾಗಿದೆ. ಇದನ್ನು ದಕ್ಷಿಣ ಆಫ್ರಿಕಾ ಸರ್ಕಾರ ಸೋಮವಾರ ದೃಢಪಡಿಸಿದೆ. ಭ್ರಷ್ಟಾಚಾರ ಆರೋಪ ಹೊತ್ತಿರುವ ಗುಪ್ತಾ ಸಹೋದರರನ್ನು ದಕ್ಷಿಣ ಆಫ್ರಿಕಾಕ್ಕೆ ವಾಪಸ್ ಕರೆತರುವ ಕಸರತ್ತು ತೀವ್ರಗೊಂಡಿದೆ. ಆದರೆ, ಅವರು ವಾಪಸ್ ಬರುತ್ತಾರೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ವಾಸ್ತವವಾಗಿ, ಎರಡೂ ದೇಶಗಳು ಏಪ್ರಿಲ್ 2021 ರಲ್ಲಿ ಹಸ್ತಾಂತರ ಒಪ್ಪಂದಕ್ಕೆ ಸಹಿ ಹಾಕಿದವು. ಉಭಯ ದೇಶಗಳ ನಡುವೆ ಮಾತುಕತೆ ನಡೆಯುತ್ತಿದೆ ಎಂದು ಸರ್ಕಾರ ಹೇಳಿದೆ.

ಗುಪ್ತಾ ಸಹೋದರರ ಹಗರಣಗಳ ಸರಮಾಲೆ: 
2009-2018 ರ ನಡುವೆ, ಗುಪ್ತಾ ಸಹೋದರರಾದ ಅಜಯ್, ಅತುಲ್ ಮತ್ತು ರಾಜೇಶ್ ಗುಪ್ತಾ ಅವರು ಮಾಜಿ ಅಧ್ಯಕ್ಷ ಜಾಕೋಬ್ ಜುಮಾ ಅವರೊಂದಿಗಿನ ನಿಕಟ ಸಂಬಂಧದಿಂದಾಗಿ ಶತಕೋಟಿ ಮೌಲ್ಯದ ಸ್ಥಳೀಯ ಕರೆನ್ಸಿಯನ್ನು ದೊಡ್ಡ ಪ್ರಮಾಣದಲ್ಲಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. 2009ರಿಂದ 2018ರ ನಡುವೆ ಈ ಭ್ರಷ್ಟಾಚಾರ ನಡೆದಿದ್ದು, ಅದಾಗ್ಯೂ, ಹಗರಣಗಳು ಹೊರಬಿದ್ದ ನಂತರ ಗುಪ್ತಾ ಸಹೋದರರು ದಕ್ಷಿಣ ಆಫ್ರಿಕಾದಿಂದ ಪಲಾಯನ ಮಾಡಿದರು. ಅವರ ವಿರುದ್ಧ ಹಲವು ಪ್ರತಿಭಟನೆಗಳೂ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದವು. ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್‌ನೊಳಗಿನ ಭಿನ್ನಾಭಿಪ್ರಾಯಗಳಿಂದಾಗಿ ದೇಶದಲ್ಲಿ ನಡೆದ ಹಗರಣದಲ್ಲಿ ಭಾಗಿಯಾಗಿರುವ ಗುಪ್ತಾ ಕುಟುಂಬದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗಲಿಲ್ಲ ಎಂದು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಮೊದಲ ಬಾರಿಗೆ ಒಪ್ಪಿಕೊಂಡಿದ್ದಾರೆ.

ಗುಪ್ತಾ ಸಹೋದರರ ಮೂಲ ಭಾರತ
ಅಜಯ್, ಅತುಲ್ ಮತ್ತು ರಾಜೇಶ್ ಗುಪ್ತಾ 1994 ರಲ್ಲಿ ತಮ್ಮ ಕುಟುಂಬದೊಂದಿಗೆ ದಕ್ಷಿಣ ಆಫ್ರಿಕಾಕ್ಕೆ ವಲಸೆ ಬಂದರು. ಮಾಜಿ ಅಧ್ಯಕ್ಷ ಜೇಕಬ್ ಜುಮಾ ಅವರಿಗೆ ತುಂಬಾ ಹತ್ತಿರವಾಗಿ ದಕ್ಷಿಣ ಆಫ್ರಿಕಾದಲ್ಲಿ ಬೆಳೆದರು. ದಕ್ಷಿಣ ಆಫ್ರಿಕಾದ ಅಗ್ರ ಐದು ಶ್ರೀಮಂತ ಕುಟುಂಬದ ಪೈಕಿ ಗುಪ್ತಾ ಕುಟುಂಬವೂ ಒಂದಾಯಿತು. ಕೈಗಾರಿಕೋದ್ಯಮಿ ಆಗಿ ಬೆಳೆದ ಗುಪ್ತಾ ಸಹೋದರರು ಮೂಲತಃ ಉತ್ತರಪ್ರದೇಶದ ಸಹರಣ್ ಪುರದವರು. ಅವರ ತಂದೆ ಶಿವಕುಮಾರ್ ಸಹರಣ್ ಪುರದಲ್ಲಿ ಪಡಿತರ ಅಂಗಡಿಗಳನ್ನು ಹೊಂದಿದ್ದರು. ದೆಹಲಿಯಲ್ಲಿ ತೆರೆದಿರುವ ತಮ್ಮ ಕಂಪನಿಯಿಂದ ಸಾಂಬಾರ ಪದಾರ್ಥಗಳನ್ನು ರಫ್ತು ಮಾಡುತ್ತಿದ್ದರು. ಸಹರಣ್ ಪುರದ ರಾಣಿ ಬಜಾರ್ ನಲ್ಲಿ ಪೂರ್ವಜರ ಮನೆಯನ್ನು ಹೊಂದಿರುವ ಗುಪ್ತಾ ಸಹೋದರರು, ತಮ್ಮ ಇನ್ನೊಂದು ಕಂಪನಿಯು ಟಾಲ್ಕಂ ಪೌಡರ್‌ನಲ್ಲಿ ಬಳಸುವ ಸೋಪ್‌ಸ್ಟೋರ್ ಪೌಡರ್ ಅನ್ನು ವಿತರಣೆ ಮಾಡುತ್ತಿದ್ದರು ಎನ್ನಲಾಗಿದೆ.

Source link

For more news update stay with actp news

Android App

Facebook

Twitter

Dailyhunt

Share Chat

Telegram

Koo App

Leave a Reply

Your email address will not be published. Required fields are marked *