AFP
ಕುವೈತ್ ಸಿಟಿ: ಭಾರತದ ಆಡಳಿತ ಪಕ್ಷದ ನಾಯಕಿಯೊಬ್ಬರು ಪ್ರವಾದಿ ಮೊಹಮ್ಮದ್ ಕುರಿತು ಆಕ್ಷೇಪಾರ್ಹ ಹೇಳಿಕೆಗೆ ಸಂಬಂಧಿಸಿದಂತೆ ಇರಾನ್ ವಿದೇಶಾಂಗ ಸಚಿವಾಲಯ ಭಾರತದ ರಾಯಭಾರಿಗೆ ಸಮನ್ಸ್ ಜಾರಿ ಮಾಡಿದ ಬೆನ್ನಲ್ಲೇ ಕುವೈತ್ ಸೂಪರ್ ಮಾರ್ಕೆಟ್ ವೊಂದು ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಿದೆ.
ಅಲ್-ಅರ್ದಿಯಾ ಕೋ-ಆಪರೇಟಿವ್ ಸೊಸೈಟಿ ಅಂಗಡಿಯ ಕಾರ್ಮಿಕರು ಪ್ರವಾದಿ ಮೊಹಮ್ಮದ್ ಕುರಿತು ಆಕ್ಷೇಪಾರ್ಹ ಹೇಳಿಕೆಯನ್ನು ಖಂಡಿಸಿದ್ದು, ಭಾರತೀಯ ಚಹಾ ಮತ್ತು ಇತರ ಉತ್ಪನ್ನಗಳನ್ನು ಟ್ರಾಲಿಗಳಲ್ಲಿ ರಾಶಿ ಹಾಕಿ ಪ್ರತಿಭಟಿಸಿದ್ದಾರೆ.
ಇದನ್ನು ಓದಿ: ಪ್ರವಾದಿ ವಿರುದ್ಧ ವಿವಾದಾತ್ಮಕ ಹೇಳಿಕೆ: ಇಸ್ಲಾಮಿಕ್ ಸಂಘಟನೆಯ ಟೀಕೆಗೆ ಭಾರತ ತಿರುಗೇಟು
ಸೌದಿ ಅರೇಬಿಯಾ, ಕತಾರ್ ಮತ್ತು ಇತರ ದೇಶಗಳು, ಕೈರೋದ ಪ್ರಭಾವಿ ಅಲ್-ಅಜರ್ ವಿಶ್ವವಿದ್ಯಾಲಯ, ಬಿಜೆಪಿ ರಾಷ್ಟ್ರೀಯ ವಕ್ತಾರರಾಗಿದ್ದ ನೂಪುರ್ ಶರ್ಮಾ ಅವರ ಹೇಳಿಕೆಯನ್ನು ಖಂಡಿಸಿವೆ.
ಇದನ್ನು ಓದಿ: ಪ್ರವಾದಿ ಮೊಹಮ್ಮದ್ ಬಗ್ಗೆ ಬಿಜೆಪಿ ನಾಯಕರ ಆಕ್ಷೇಪಾರ್ಹ ಹೇಳಿಕೆ; ಭಾರತೀಯ ರಾಯಭಾರಿಗಳಿಗೆ ಕತಾರ್, ಕುವೈತ್ ಸಮನ್ಸ್
ಕುವೈತ್ ಸಿಟಿಯ ಹೊರಗಿರುವ ಸೂಪರ್ ಮಾರ್ಕೆಟ್ನಲ್ಲಿ ಭಾರತದ ಅಕ್ಕಿಯ ಚೀಲಗಳು ಮತ್ತು ಮಸಾಲೆಗಳು, ಮೆಣಸಿನಕಾಯಿ ಹಾಗೂ ಇತರ ಉತ್ಪನ್ನಗಳನ್ನು ಪ್ಲಾಸ್ಟಿಕ್ ಹಾಳೆಗಳಿಂದ ಮುಚ್ಚಲಾಗಿದೆ. ಅಲ್ಲದೆ “ನಾವು ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಿದ್ದೇವೆ” ಎಂದು ಅರೇಬಿಕ್ ಭಾಷೆಯಲ್ಲಿ ಬರೆಯಲಾಗಿದೆ.
VIDEO: Superstores in Kuwait remove Indian products from their shelves after remarks on the Prophet Mohammed by an official in India’s ruling party prompted calls on social media to boycott Indian goods pic.twitter.com/AD1J3wTY2g
— AFP News Agency (@AFP) June 6, 2022
For more news update stay with actp news
Android App
Facebook
Twitter
Dailyhunt
Share Chat
Telegram
Koo App