PTI
ಮುಂಬೈ: ಮಹಾರಾಷ್ಟ್ರದ ಶಿವಸೇನೆಯ ಬಂಡಾಯ ಶಾಸಕರು ಕಳೆದ ವಾರದಿಂದ ಅಸ್ಸಾಂನ ಗುವಾಹಟಿಯ ಹೊಟೇಲ್ ನಲ್ಲಿ ಬೀಡುಬಿಟ್ಟಿದ್ದು, ಈ ಸಂದರ್ಭದಲ್ಲಿ ಅಸ್ಸಾಂ ಪ್ರವಾಹದಿಂದ ಸಂಕಷ್ಟಕ್ಕೀಡಾಗಿರುವವರ ಪರಿಹಾರ ಕಾರ್ಯಕ್ಕಾಗಿ 51 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ.
ಮಹಾ ವಿಕಾಸ್ ಅಘಾಡಿ ಸರ್ಕಾರದ ಹಿರಿಯ ಸಚಿವ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಶಾಸಕರು ತಮ್ಮ ಪಕ್ಷದ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದು ಮೈತ್ರಿ ಸರ್ಕಾರ ಬಿದ್ದು ಹೋಗುವ ಹಂತಕ್ಕೆ ತಲುಪಿದೆ. ಈ ಶಾಸಕರು ಜೂನ್ 22 ರಂದು ಗುವಾಹಟಿಗೆ ಬಂದಿದ್ದರು. ಗುಜರಾತ್ನ ಸೂರತ್ನಿಂದ ಹಲವಾರು ತಂಡಗಳಲ್ಲಿ ಚಾರ್ಟರ್ಡ್ ವಿಮಾನಗಳಲ್ಲಿ ಬಂದಿದ್ದರು.
ಅಸ್ಸಾಂನ ಕೆಲವು ಭಾಗಗಳು ಭೀಕರ ಪ್ರವಾಹದಿಂದ ತತ್ತರಿಸುತ್ತಿರುವಾಗಲೂ ಶಿವಸೇನಾ ಭಿನ್ನಮತೀಯರು ಗುವಾಹಟಿಯ ಐಷಾರಾಮಿ ಹೋಟೆಲ್ನಲ್ಲಿ ತಂಗಿದ್ದಾರೆ ಎಂಬ ಟೀಕೆಗಳ ನಡುವೆ ಬಂಡಾಯ ಶಾಸಕರು ಪ್ರವಾಹಪೀಡಿತರಿಗೆ ಸಹಾಯಹಸ್ತ ಚಾಚುವ ಮೂಲಕ ಟೀಕಾಕಾರರ ಬಾಯಿಮುಚ್ಚಿಸಲು ಹೊರಟಿದ್ದಾರೆ.
PHOTOS: ಅಸ್ಸಾಂನಲ್ಲಿ ಭೀಕರ ಪ್ರವಾಹ: 33 ಜಿಲ್ಲೆಗಳಲ್ಲಿ ನೆರೆ: ಸಂಕಷ್ಟದಲ್ಲಿ 43 ಲಕ್ಷ ಜನ
ಬಂಡಾಯ ಶಾಸಕರ ಪರವಾರಿ ವಕ್ತಾರ ದೀಪಕ್ ಕೇಸರ್ಕರ್ ಪಿಟಿಐ ಸುದ್ದಿಸಂಸ್ಥೆಯ ಜೊತೆ ಮಾತನಾಡಿ, ಶಿಂಧೆ ಅವರು ಅಸ್ಸಾಂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 51 ಲಕ್ಷ ರೂಪಾಯಿ ನೀಡಿದ್ದಾರೆ. ಅಸ್ಸಾಂ ಜನತೆಯ ಸಂಕಷ್ಟಕ್ಕೆ ಈ ಕ್ಷಣ ನಾವು ಜೊತೆಯಾಗುತ್ತೇವೆ ಎಂದರು.
ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರ ನಾಳೆ ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲ ಬಿ ಎಸ್ ಕೊಶ್ಯಾರಿ ಸೂಚಿಸಿದ್ದಾರೆ. ಬಂಡಾಯ ಶಾಸಕರು ಗುವಾಹಟಿಯಿಂದ ನಾಳೆ ಮುಂಬೈಗೆ ಹೋಗಲು ನಿರ್ಧರಿಸಿದ್ದಾರೆ. ಸದ್ಯ ಶಿಂಧೆ ಅವರ ಆಪ್ತರು ಗೋವಾ ಮೂಲದ ಹೋಟೆಲ್ನಲ್ಲಿ ತಂಗಿದ್ದು, ನಾಳೆ ಬೆಳಗ್ಗೆ 9.30 ಕ್ಕೆ ಮುಂಬೈ ತಲುಪಲಿದ್ದಾರೆ.
ಇದನ್ನೂ ಓದಿ: ನಿಮ್ಮಿಂದಾಗಿ ಅಸ್ಸಾಂ ಮರ್ಯಾದೆ ಹೋಗುತ್ತಿದೆ; ಮೊದಲು ಪ್ರವಾಹ ಪೀಡಿತ ರಾಜ್ಯ ತೊರೆಯಿರಿ: ಏಕನಾಥ್ ಶಿಂಧೆಗೆ ಅಸ್ಸಾಂ ಕಾಂಗ್ರೆಸ್ ಪತ್ರ
ನಾವು ಮುಂಬೈನಿಂದ ಒಂದು ಗಂಟೆ ವಾಯುದೂರದಲ್ಲಿರುವ ಸ್ಥಳದಲ್ಲಿ ತಂಗುತ್ತೇವೆ, ಇದರಿಂದ ನಾವು ನಾಳೆ ಸದನ ಪರೀಕ್ಷೆ ಸಮಯದಲ್ಲಿ ಮುಂಬೈಗೆ ತಲುಪಬಹುದು ಎಂದು ಕೇಸರ್ಕರ್ ಹೇಳಿದ್ದಾರೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App