ANI
ಲಂಡನ್: ಬ್ರಿಟನ್ನಲ್ಲಿ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಪೂರ್ಣ ಬೆಂಬಲದಿಂದಾಗಿ ಪ್ರಧಾನಿ ಬೋರಿಸ್ ಜಾನ್ಸನ್, ಅವಿಶ್ವಾಸ ನಿರ್ಣಯ ಮತದಲ್ಲಿ ಗೆಲುವು ಸಾಧಿಸಿದ್ದಾರೆ.
ಸಂಸತ್ನಲ್ಲಿ ತಮ್ಮ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ನಿರ್ಣಯದಲ್ಲಿ ಜಾನ್ಸನ್ 211 ಮತಗಳನ್ನು ಗಳಿಸಿದರು. ಆದರೆ, ಅವರದ್ದೇ ಪಕ್ಷದ (ಕನ್ಸರ್ವೇಟಿವ್ ಪಾರ್ಟಿ) 148 ಮಂದಿ ಸಂಸದರು ಬೋರಿಸ್ ವಿರುದ್ಧ ಮತ ಚಲಾಯಿಸಿದ್ದಾರೆ.
ಕೋವಿಡ್ ಸಾಂಕ್ರಾಮಿಕದ ವೇಳೆ ಲಾಕ್ಡೌನ್ ಇದ್ದರೂ ಪಾರ್ಟಿಗಳಲ್ಲಿ ಭಾಗವಹಿಸಿದ್ದು, ಕೋವಿಡ್ ನಿರ್ವಹಣೆಯಲ್ಲಿ ವಿಫಲರಾಗಿದ್ದು ಪಕ್ಷದ ಘನತೆಗೆ ಸಾರ್ವಜನಿಕವಾಗಿ ಧಕ್ಕೆ ತಂದಿದೆ ಎಂದು ಸ್ವಪಕ್ಷೀಯರೇ ಬೋರಿಸ್ ಅವರ ವಿರುದ್ಧ ಆರೋಪಿಸಿದ್ದರು. ಹೀಗಾಗಿ ಅವರ ರಾಜೀನಾಮೆಗೆ ಆಗ್ರಹಿಸಿದ್ದರು.
ಕನ್ಸರ್ವೇಟಿವ್ ಪಾರ್ಟಿಯ ಹಲವು ಸದಸ್ಯರು ಬ್ರಿಟನ್ ಸಂಸತ್ನಲ್ಲಿ ಬೋರಿಸ್ ಜಾನ್ಸನ್ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ ಎಂದು ‘ಬ್ಯಾಕ್ಬೆಂಚ್ 1922 ಕಮಿಟಿ ( ಕನ್ಸರ್ವೇಟಿವ್ ಪಕ್ಷದ ಸದಸ್ಯರ ಸಮಿತಿ)’ಯ ಮುಖ್ಯಸ್ಥ ಸರ್ ಗ್ರಹಮ್ ಬ್ರಾಡಿ ಇತ್ತೀಚೆಗೆ ಹೇಳಿದ್ದರು. ಅಂತಿಮವಾಗಿ ಜಾನ್ಸನ್ ಅವರು ಶೇ 58.6 ಮತ ಪಡೆಯುವ ಮೂಲಕ ವಿಶ್ವಾಸಮತ ಗೆದ್ದಿದ್ದಾರೆ.
ಇದನ್ನೂ ಓದಿ: ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ಮುಂದಿನ ಬ್ರಿಟನ್ ಪ್ರಧಾನಿ?
ಈ ಫಲಿತಾಂಶವನ್ನು ಒಳ್ಳೆ ಸುದ್ದಿ ಮತ್ತು ನಿರ್ಣಾಯಕ ಎಂದು ಬೋರಿಸ್ ಜಾನ್ಸನ್ ವಿಶ್ಲೇಷಿಸಿದ್ದು, ಒಗ್ಗಟ್ಟಿನಿಂದ ಮುನ್ನಡೆಯಲು ಫಲಿತಾಂಶ ಅವಕಾಶ ಕಲ್ಪಿಸಿದೆ ಎಂದು ಹೇಳಿದ್ದಾರೆ.
ಮೂರು ವರ್ಷಗಳ ಹಿಂದೆ ಇತ್ತೀಚಿನ ದಶಕಗಳಲ್ಲೇ ಕನ್ಸರ್ವೇಟಿವ್ ಪಕ್ಷದ ಅಭೂತಪೂರ್ವ ವಿಜಯಕ್ಕೆ ಜಾನ್ಸನ್ ಕಾರಣರಾಗಿದ್ದರು. ಆದರೆ ಇದೀಗ ಪಕ್ಷದಲ್ಲಿ ಗಂಭೀರ ಒಡಕು ಸ್ಪಷ್ಟವಾಗಿ ಕಾಣಿಸಿಕೊಂಡಿದೆ.
2018ರ ಡಿಸೆಂಬರ್ ನಲ್ಲಿ ಅಂದಿನ ಪ್ರಧಾನಿ ಥೆರೇಸಾ ಮೇ ಇಂಥದ್ದೇ ಮತದಾನದಲ್ಲಿ ಪಡೆದ ಮತಕ್ಕಿಂತ ಜಾನ್ಸನ್ ಪಡೆದ ಮತಗಳು ಕಡಿಮೆ. ಆರು ತಿಂಗಳ ಬಳಿಕ ಅವರು ಅನಿವಾರ್ಯವಾಗಿ ರಾಜೀನಾಮೆ ನೀಡಿದ್ದರು.
For more news update stay with actp news
Android App
Facebook
Twitter
Dailyhunt
Share Chat
Telegram
Koo App