English Tamil Hindi Telugu Kannada Malayalam Android App
Sat. Dec 3rd, 2022

ANI

ಬಾಕು: ISSF ವಿಶ್ವಕಪ್ 2022ರಲ್ಲಿ ಭಾರತ ಮಹಿಳಾ ಶೂಟರ್ ಗಳು ಇತಿಹಾಸ ಬರೆದಿದ್ದು, ಇದೇ ಮೊದಲ ಬಾರಿಗೆ ವಿಶ್ವಕಪ್ ಟೂರ್ನಿಯಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.

ಅಜೆರ್ಬೈಜಾನ್ ನ ಬಾಕುನಲ್ಲಿ ನಡೆಯುತ್ತಿರುವ ISSF (International Shooting Sport Federation- ಅಂತರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಶನ್) ವಿಶ್ವಕಪ್ 2022ರಲ್ಲಿ ಭಾರತ ಮಹಿಳಾ ಶೂಟರ್ ಗಳಾದ ಎಲವೆನಿಲ್ ವಲರಿವನ್, ಶ್ರೇಯಾ ಅಗರ್ವಾಲ್ ಮತ್ತು ರಮಿತಾ ಅವರು ಚಿನ್ನದ ಪದಕ ಜಯಿಸಿದ್ದಾರೆ. 

ಇದನ್ನೂ ಓದಿ: ಭಾರತೀಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ನರೀಂದರ್ ಬಾತ್ರಾ ರಾಜೀನಾಮೆ

10 ಮೀಟರ್ ಏರ್ ರೈಫಲ್ ಮಹಿಳಾ ವಿಭಾಗದಲ್ಲಿ ಭಾರತ ಮಹಿಳಾ ತಂಡ ಈ ಸಾಧನೆ ಮಾಡಿದ್ದು, ಇದು 10 ಮೀಟರ್ ಏರ್ ರೈಫಲ್ ಶೂಟಿಂಗ್ ವಿಭಾಗದಲ್ಲಿ ಭಾರತದ ಮೊದಲ ಚಿನ್ನದ ಪದಕ ಸಾಧನೆಯಾಗಿದ್ದು, ಅಂತೆಯೇ ಇದು ಬಾಕುದಲ್ಲಿ ನಡೆಯುತ್ತಿರುವ ISSF ವಿಶ್ವಕಪ್‌ನಲ್ಲಿ ಭಾರತಕ್ಕೆ ಸಿಕ್ಕ ಮೊದಲ ಪದಕವಾಗಿದೆ. ಚಿನ್ನದ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತದ ಮೂವರು ಶೂಟರ್ ಗಳು ಡೆನ್ಮಾರ್ಕ್ ತಂಡವನ್ನು 17-5 ಅಂತರದಿಂದ ಸೋಲಿಸಿದರು. ಟೋಕಿಯೊ ಒಲಿಂಪಿಯನ್ ಎಲವೆನಿಲ್ ವಲರಿವನ್ ಅವರು ಫೈನಲ್‌ನಲ್ಲಿ ಎಲ್ಲಾ 11 ಸರಣಿಗಳಲ್ಲಿ 10 ಕ್ಕಿಂತ ಹೆಚ್ಚು ಗುರಿಗಳನ್ನು ಯಶಸ್ವಿಯಾಗಿ ಭೇದಿಸಿದರು.

ಇದನ್ನೂ ಓದಿ: ವಿಶ್ವ ಬಾಕ್ಸಿಂಗ್ ಚಾಂಪಿಯನ್ ಷಿಪ್: ಭಾರತದ ನಿಖತ್ ಜರೀನ್ ಚಾಂಪಿಯನ್!

ಭಾರತದ ಈ ಮೂವರು ಶೂಟರ್ ಗಳೂ ಈ ಮೊದಲು ಅರ್ಹತಾ ಹಂತ 1 ರಲ್ಲಿ ದಕ್ಷಿಣ ಕೊರಿಯಾಕ್ಕಿಂತ 944.4 – 0.2 ಅಂಕಗಳ ಅಂತರದಲ್ಲಿ ಅಗ್ರಸ್ಥಾನದಲ್ಲಿದ್ದರು.

ವ್ಯರ್ಥವಾದ ಪುರುಷರ ತಂಡದ ಹೋರಾಟ
ಏತನ್ಮಧ್ಯೆ, ಭಾರತ ಪುರುಷರ ತಂಡದ ಪದಕಕ್ಕಾಗಿ ಹೋರಾಟ ವ್ಯರ್ಥವಾಗಿದ್ದು, ರುದ್ರಾಂಕ್ಷ್ ಬಾಳಾಸಾಹೇಬ್ ಪಾಟೀಲ್, ಪಾರ್ಥ್ ಮಖಿಜಾ ಮತ್ತು ಹಾಲಿ ಚಾಂಪಿಯನ್ ಧನುಷ್ ಶ್ರೀಕಾಂತ್ ಒಳಗೊಂಡ ಪುರುಷರ 10 ಮೀಟರ್ ಏರ್ ರೈಫಲ್ ತಂಡವು ಕಂಚಿನ ಪದಕಕ್ಕಾಗಿ ಕ್ರೊಯೇಷಿಯಾ ವಿರುದ್ಧ 16-10 ರ ಅಂತರದಲ್ಲಿ ಪದಕ ಬೇಟೆ ತಪ್ಪಿಸಿಕೊಂಡಿದೆ.

Source link

For more news update stay with actp news

Android App

Facebook

Twitter

Dailyhunt

Share Chat

Telegram

Koo App

Leave a Reply

Your email address will not be published. Required fields are marked *