The New Indian Express
ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್ ನಿರ್ದೇಶನದ ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಸಂದೇಶ್ ಪ್ರೊಡಕ್ಷನ್ ನಲ್ಲಿ ಸಿನಿಮಾ ತಯಾರಾಗುತ್ತಿದೆ.
“ನಾನು ಸಿನಿಮಾ ನಿರ್ಮಾಣದ ಪ್ರತಿಯೊಂದು ವಿಭಾಗದಲ್ಲೂ ತೊಡಗಿಸಿಕೊಳ್ಳುವುದಿಲ್ಲ, ಆದರೆ ಅಗತ್ಯವಿರುವಾಗ ನಾನು ಜವಾಬ್ದಾರಿಗಳನ್ನು ತೆಗೆದುಕೊಂಡಿದ್ದೇನೆ ಏಕೆಂದರೆ ಚಿತ್ರವನ್ನು ನಮ್ಮ ನಿರ್ಮಾಣ ಸಂಸ್ಥೆ ರಿಷಬ್ ಶೆಟ್ಟಿ ಫಿಲ್ಮ್ಸ್ ಅಡಿಯಲ್ಲಿ ತಯಾರು ಮಾಡಲಾಗುತ್ತಿದೆ. ನಿರ್ಮಾಪಕ ಸಂದೇಶ್ ನಾಗರಾಜ್ ಅವರು ಚಿತ್ರದಲ್ಲಿ ನನ್ನ ಉಪಸ್ಥಿತಿ ಇರಬೇಕೆಂದು ಬಯಸಿದ್ದರು, ಹೀಗಾಗಿ ಕೆಲವೊಮ್ಮೆ ನನ್ನ ಮೇಲೆ ಒತ್ತಡವನ್ನು ಹೇರಿತು ಎಂದು ರಿಷಬ್ ಶೆಟ್ಟಿ ತಿಳಿಸಿದ್ದಾರೆ.
ದಿನದ ಕೊನೆಯಲ್ಲಿ, ನಾವೆಲ್ಲರೂ ಒಳ್ಳೆಯ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸಲು ಕೆಲಸ ಮಾಡುತ್ತೇವೆ. ಯುವ ನಿರ್ದೇಶಕ ಜೋಡಿಗೆ ಕೆಲವೊಮ್ಮೆ, ನನ್ನ ಆಲೋಚನೆಗಳನ್ನು ಸಲಹೆಯಾಗಿ ನೀಡಿದ್ದೇನೆ. ನಮ್ಮ ತಂಡದ ಎಲ್ಲಾ ರೀತಿಯ ಬೆಂಬಲದಿಂದಾಗಿ ಹರಿಕಥೆ ಅಲ್ಲ ಗಿರಿಕಥೆ ಸಿನಿಮಾ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಯಿತು. ಪ್ರಮೋದ್ ಶೆಟ್ಟಿ ಮತ್ತು ಸಂದೇಶ್ ನಾಗರಾಜ್ ನಿರ್ಮಾಣ ಜವಾಬ್ದಾರಿ ನಿಭಾಯಿಸಿದ್ದಾರೆ.
ನನ್ನ ಶಾಟ್ಗಾಗಿ ಕಾಯುವುದು ಅಷ್ಟೇ ನನ್ನ ಕೆಲಸವಾಗಿತ್ತು. ಕ್ಯಾಮರಾ ಹಿಂದೆ ಹೆಚ್ಚು ಕೆಲಸ ಮಾಡದಿರುವುದು ನನಗೆ ಆರಂಭದಲ್ಲಿ ಬೇಸರ ತಂದಿತು, ಆದರೆ ನಾನು ನಟನಾಗಿ ಖುಷಿಯಿಂದಿರಲು ಕಲಿತಿದ್ದೇನೆ ಎಂದಿದ್ದಾರೆ. ಇನ್ನೂ ಹರಿಕಥೆಯಲ್ಲ ಗಿರಿಕಥೆ ಸಿನಿಮಾದಲ್ಲಿ ನಿರ್ದೇಶಕನ ಪಾತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ರಿಷಬ್ ಶೆಟ್ಟಿ ನಟನೆಯ ‘ಹರಿಕಥೆ ಅಲ್ಲ ಗಿರಿಕಥೆ’ಯಲ್ಲಿ ತಪಸ್ವಿನಿ ಪೂಣಚ್ಚ ಮತ್ತು ರಚನಾ ಇಂದರ್!
ಸಿನಿಮಾ ರಂಗದ ಆರಂಭದಲ್ಲಿ, ಅವಕಾಶಕ್ಕಾಗಿ ನಾನು ಅನುಭವಿಸಿದ ನೋವುಗಳು, ನಾನು ಭೇಟಿಯಾದ ಜನರು, ಹಾಗೂ ನನಗೆ ಸಹಾಯ ಮಾಡಿದ ಸ್ನೇಹಿತರು ಹಾಗೂ ಉಂಟಾದ ಎಲ್ಲಾ ರೀತಿಯ ಅಡೆತೆಡೆಗಳನ್ನು ನಾನು ನೆನಪಿಸಿಕೊಂಡೆ, ಹೀಗಾಗಿ ಈ ಚಿತ್ರ ನನಗೆ ಯೂನಿಕ್ ಆಗಿದೆ ಎಂದಿದ್ದಾರೆ ರಿಷಬ್ ಶೆಟ್ಟಿ.
ಸಿನಿಮಾದಲ್ಲಿ ಹಲವು ಪಾತ್ರಗಳಿದ್ದು ಪ್ರೇಕ್ಷಕರನ್ನು ರೋಲರ್ ಕೋಸ್ಟರ್ ರೈಡ್ಗೆ ಕರೆದೊಯ್ಯುತ್ತದೆ. ಇಡೀ ಚಿತ್ರವು ಹಾಸ್ಯದಿಂದ ತುಂಬಿದೆ, ಹಾಗೂ ಜನರು ನಮ್ಮ ಚಿತ್ರವನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲವಿದೆ ಎಂದು ಅವರು ಹೇಳಿದರು.
ಹಾಸ್ಯ ಮಾಡುವುದು ಸುಲಭವೆಂದು ತೋರುತ್ತದೆ ಆದರೆ ಅದನ್ನು ಚಿತ್ರೀಕರಿಸುವುದು ಕಷ್ಟಕರ ಪ್ರಕ್ರಿಯೆ. “ನಾನು ಹಾರರ್ ಚಿತ್ರಗಳನ್ನು ಹೊರತುಪಡಿಸಿ ಎಲ್ಲಾ ಪ್ರಕಾರಗಳನ್ನು ಇಷ್ಟಪಡುತ್ತೇನೆ. ನನಗೆ ಹಾರರ್ ಚಿತ್ರಗಳನ್ನು ನೋಡುವುದು ಇಷ್ಟವಿಲ್ಲ, ಹಾಗಾಗಿ ನಾನು ಆ ಪ್ರಕಾರದ ಚಿತ್ರಗಳನ್ನು ಮಾಡುವುದಿಲ್ಲ”ಎಂದು ರಿಷಬ್ ಶೆಟ್ಟಿ ತಿಳಿಸಿದ್ದಾರೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App