The New Indian Express
ಮಂಗಳೂರು: ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷರಾಗಿದ್ದ ರೋಹಿತ್ ಚಕ್ರತೀರ್ಥ ಸನ್ಮಾನ ಕಾರ್ಯಕ್ರಮವನ್ನು ವ್ಯಾಪಕ ವಿರೋಧದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಜೂ.25 ರಂದು ಶಾಸಕ ವೇದವ್ಯಾಸ ಕಾಮತ್ ಅವರ ಸೇವಾಂಜಲಿ ಟ್ರಸ್ಟ್ ನ ಸಹಯೋಗದಲ್ಲಿ ಚಿಂತನ ಗಂಗಾ ಮಂಗಳೂರಿನ ಕೆನರಾ ಶಾಲೆ ಆವರಣದಲ್ಲಿ ನಾಗರಿಕ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಗೆ ಚಕ್ರತೀರ್ಥ ನೇಮಕ ಮಾಡಿದ್ದೇ ಸರ್ಕಾರ ಮಾಡಿದ ಮೊದಲ ತಪ್ಪು: ದೇವೇಗೌಡ
ಕೆಲವು ಸಂಘಟನೆಗಳು ಸ್ಥಳದಲ್ಲಿ ಘೇರಾವ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಈ ಕಾರ್ಯಕ್ರಮಕ್ಕೆ ಮಂಗಳೂರು ವಿವಿ ಉಪಕುಲಪತಿಗಳಾದ ಪ್ರೊ.ಪಿ.ಎಸ್. ಯಡಪಡಿತ್ತಾಯ ಅವರನ್ನು ಅತಿಥಿಗಳನ್ನಾಗಿ ಆಹ್ವಾನಿಸಲಾಗಿತ್ತು.
ಇದನ್ನೂ ಓದಿ: ಕುವೆಂಪು ವಿವಾದ: ರೋಹಿತ್ ಚಕ್ರತೀರ್ಥ ಪದಚ್ಯುತಗೊಳಿಸುವಂತೆ ಸಿಎಂ ಮೇಲೆ ಲೇಖಕರು, ರಾಜಕೀಯ ನಾಯಕರು, ಸಾಹಿತಿಗಳಿಂದ ಒತ್ತಡ
ಕಾಂಗ್ರೆಸ್, ಡಿವೈಎಫ್ಐ, ಜೆಡಿಎಸ್, ಸಿಪಿಐಎಂ ಸೇರಿದಂತೆ ಇತರ ಸಂಘಟನೆಗಳನ್ನೊಳಗೊಂಡ ದೇಶಪ್ರೇಮಿ ಸಂಘಟನೆಗಳ ಒಕ್ಕೂಟ ಸನ್ಮಾನ ಕಾರ್ಯಕ್ರಮವನ್ನು ವಿರೋಧಿಸಿ ನಗರದಲ್ಲಿ ಮೆರವಣಿಗೆ ನಡೆಸಲು ನಿರ್ಧರಿಸಿದ್ದವು. ಅಷ್ಟೇ ಅಲ್ಲದೇ ನಾರಾಯಣಗುರು, ಕುವೆಂಪು, ಅಂಬೇಡ್ಕರ್ ಅವರಿಗೆ ಅಗೌರವ ತೋರಿದ್ದ ರೋಹಿತ್ ಚಕ್ರತೀರ್ಥ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಎಂಯು ವಿಸಿ ಗೆ ಒತ್ತಾಯಿಸಿದ್ದರು.
For more news update stay with actp news
Android App
Facebook
Twitter
Dailyhunt
Share Chat
Telegram
Koo App