The New Indian Express
ಬೆಂಗಳೂರು: ಜೂನ್ 19 ರಂದು ನಡೆದಿದ್ದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 5 ನೇ ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಮಳೆ ಕಾರಣದಿಂದಾಗಿ ರದ್ದಾದ ಹಿನ್ನಲೆಯಲ್ಲಿ ಪ್ರೇಕ್ಷಕರ ಟಿಕೆಟ್ ಹಣದಲ್ಲಿ ಶೇ.50ರಷ್ಟು ಮರು ಪಾವತಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ನಿರ್ಧರಿಸಿದೆ.
ಇದನ್ನೂ ಓದಿ:ಚಿನ್ನಸ್ವಾಮಿ ಸ್ಟೇಡಿಯಂ ಛಾವಣಿಯಿಂದ ಮಳೆ ನೀರು ಸೋರಿಕೆ: ಬಿಸಿಸಿಐನ ಗೇಲಿ ಮಾಡಿದ ನೆಟ್ಟಿಗರು, ವಿಡಿಯೋ!
ಈ ಕುರಿತು ಸಂಸ್ಥೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಟಿಕೆಟ್ ಹೊಂದಿರುವವರಿಗೆ ಎಲ್ಲರಿಗೂ ಟಿಕೆಟ್ನ ಮುಖಬೆಲೆಯ ಶೇಕಡಾ 50 ರಷ್ಟು ಹಣ ಮರುಪಾವತಿ ನೀಡಲು ನಿರ್ಧರಿಸಿದೆ.
ಆನ್ಲೈನ್ನಲ್ಲಿ ಮತ್ತು ಬಾಕ್ಸ್ ಆಫೀಸ್ನಲ್ಲಿ ಟಿಕೆಟ್ಗಳನ್ನು ಖರೀದಿಸಿದ ಪ್ರೇಕ್ಷಕರು ಜುಲೈ 1, 2 ಮತ್ತು 3 ರಂದು ಬೆಳಿಗ್ಗೆ 10 ರಿಂದ ಸಂಜೆ 7 ರವರೆಗೆ ಮರುಪಾವತಿಯನ್ನು ಕ್ಲೈಮ್ ಮಾಡಬಹುದು ಎಂದು ಸಂಸ್ಥೆ ಹೇಳಿದೆ.
ಇದನ್ನೂ ಓದಿ:ಭಾರತ vs ದಕ್ಷಿಣ ಆಫ್ರಿಕಾ: 5ನೇ ಟಿ20 ಪಂದ್ಯ ರದ್ದು; ಶೇ.50ರಷ್ಟು ಟಿಕೆಟ್ ಹಣ ಮರುಪಾವತಿ ಎಂದ KSCA
ಆದರೆ ಹಣ ಮರುಪಾವತಿಗೆ ಷರತ್ತು ವಿಧಿಸಲಾಗಿದ್ದು, ತಮ್ಮ ಮೂಲ ಟಿಕೆಟ್ ಅನ್ನು ಉಳಿಸಿಕೊಂಡವರಿಗೆ ಮಾತ್ರ ಮರುಪಾವತಿ ಮಾಡಲಾಗುತ್ತದೆ ಮತ್ತು ಇದು ಪರಿಶೀಲನೆಯಂತಹ ಷರತ್ತುಗಳಿಗೆ ಒಳಪಟ್ಟಿರುತ್ತದೆ. ಟಿಕೆಟ್ನ ಭದ್ರತಾ ವೈಶಿಷ್ಟ್ಯಗಳು ಅಂದರೆ ಟಿಕೆಟ್ಗಳನ್ನು ಹಾಳು ಮಾಡಿರಬಾರದು / ವಿರೂಪಗೊಳಿಸಬಾರದು / ಹರಿದಿರುವುದು / ತಿದ್ದಿ ಬರೆಯಬಾರದು ಮತ್ತು ಟಿಕೆಟ್ ಗೋಚರತೆಯನ್ನು ಕಡಿಮೆ ಮಾಡಿರಬಾರದು ಎಂದು ಸೂಚಿಸಲಾಗಿದೆ. ಮರುಪಾವತಿಯನ್ನು ಕ್ಲೈಮ್ ಮಾಡಲು ಪ್ರತಿ ವ್ಯಕ್ತಿಗೆ ಗರಿಷ್ಠ ಐದು ಟಿಕೆಟ್ಗಳನ್ನು ಅನುಮತಿಸಲಾಗಿದೆ ಮತ್ತು ಯಾವುದೇ ಕಾಂಪ್ಲಿಮೆಂಟರಿ ಟಿಕೆಟ್ಗಳು ಈ ಮರುಪಾವತಿಗೆ ಅರ್ಹವಾಗಿರುವುದಿಲ್ಲ ಎಂದೂ ಸ್ಪಷ್ಟಪಡಿಸಲಾಗಿದೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App