Online Desk
ಲಂಡನ್: 23 ಬಾರಿ ಗ್ರ್ಯಾಂಡ್ ಸ್ಲಾಮ್ ವಿಜೇತೆ ಅಮೆರಿಕದ ಸೆರೆನಾ ವಿಲಿಯಮ್ಸ್ ವಿಂಬಲ್ಡನ್ನ ಮೊದಲ ಸುತ್ತಿನಲ್ಲೇ ಫ್ರಾನ್ಸ್ನ ಹಾರ್ಮನಿ ಟಾನ್ ವಿರುದ್ಧ ಸೋತು ಹೊರಬಿದ್ದಿದ್ದಾರೆ.
ಸೆಂಟರ್ ಕೋರ್ಟ್ ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾನ್, 7-5, 1-6, 7-6(7) ಸೆಟ್ ಗಳಿಂದ ಸೆರೆನಾ ಅವರನ್ನು ಸೋಲಿಸಿದರು.
ಅಮೆರಿಕದ ಸೆರೆನಾ, ಕಳೆದ ವರ್ಷ ವಿಂಬಲ್ಡನ್ ಚಾಂಪಿಯನ್ಶಿಪ್ನ ಆರಂಭಿಕ ಸುತ್ತಿನಲ್ಲಿ ಗಾಯದ ಕಾರಣದಿಂದ ಹಿಂದೆ ಸರಿದಿದ್ದರು. ಸುಮಾರು ಒಂದು ವರ್ಷದ ನಂತರ, 40 ವರ್ಷದ ಸೆರೆನಾ ಲಂಡನ್ನ ಗ್ರಾಸ್-ಕೋರ್ಟ್ಗೆ ಮರಳಿದ್ದರು. ಸೋಲಿನ ನಡುವೆಯೂ ಸೆರೆನಾ ಗ್ರೌಂಡ್ ನಲ್ಲಿ ನಗೆ ಬೀರಿದರು.
It’s always a pleasure, @serenawilliams #Wimbledon | #CentreCourt100 pic.twitter.com/ALkCMy1sFD
— Wimbledon (@Wimbledon) June 28, 2022
ಸೆರೆನಾ ಅವರನ್ನು ಮಣಿಸಿ ಎರಡನೇ ಸುತ್ತು ತಲುಪಿದ್ದ ಟಾನ್, ಮೊದಲ ಬಾರಿಗೆ ವಿಂಬಲ್ಡನ್ನ ಮುಖ್ಯ ಪಂದ್ಯದಲ್ಲಿ ಆಡುತ್ತಿದ್ದಾರೆ. ಸೆರೆನಾ ಅವರನ್ನು ಸೋಲಿಸಿದ್ದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಪಂದ್ಯದ ನಂತರ ಅವರು ಹೇಳಿದ್ದಾರೆ.
ಮೊದಲ ಸುತ್ತಿನ ನಿರ್ಗಮನದ ನಂತರ ಸೆರೆನಾ ಅವರು ಪ್ರ್ಯಾಕ್ಟಿಸ್ ಕೋರ್ಟ್ ಗೆ ಹೋಗುವುದಾಗಿ ಹೇಳಿದ್ದಾರೆ. ಅಲ್ಲದೆ, ಸೆಪ್ಟೆಂಬರ್ನಲ್ಲಿ ಯುಎಸ್ ಓಪನ್ನಲ್ಲಿ ಭಾಗವಹಿಸುವ ಭರವಸೆ ಇದೆ ಎಂದು ತಿಳಿಸಿದ್ದಾರೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App