The New Indian Express
ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಇದೀಗ ಬಹುದೊಡ್ಡ ತಿರುವು ಪಡೆದಿದ್ದು, ಮಾಲೀಕತ್ವ ತನ್ನದೇ ಎಂದು ಹೇಳಿಕೊಂಡಿದ್ದ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ ಗೂ ವಿವಾದಿತ ಜಾಗಕ್ಕೂ ಯಾವುದೇ ಸಂಬಂಧವಿಲ್ಲ.. ಮೂಲ ದಾಖಲೆಗಳಿಗಾಗಿ ಮಾಲೀಕರು ಅರ್ಜಿ ಸಲ್ಲಿಸಬಹುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ: ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ: ಭೂಮಿ ನಮ್ಮ ಮಾಲೀಕತ್ವದ್ದಲ್ಲ; ಬಿಬಿಎಂಪಿ ಸ್ಪಷ್ಟನೆ
ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದು, ಈದ್ಗಾ ಮೈದಾನದ ಕುರಿತು ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ (ಸಿಎಂಎ) ಭೂಮಿಗೆ ಯಾವುದೇ ರೀತಿಯಲ್ಲಿ ಸಂಬಂಧ ಹೊಂದಿಲ್ಲ.. ದಾಖಲೆಗಳು ಇದ್ದರೆ ಮೂಲ ಮಾಲೀಕರು ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.
ಇದನ್ನೂ ಓದಿ: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಯೋಗ ದಿನಾಚರಣೆಗೆ ಅನುಮತಿಯಿಲ್ಲ: ಬಿಬಿಎಂಪಿ
ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಗಿರಿನಾಥ್, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಮೈದಾನದಲ್ಲಿ ನಮಾಜ್ ಮತ್ತು ಮಕ್ಕಳಿಗೆ ಆಟವಾಡಲು ಮಾತ್ರ ಅನುಮತಿ ನೀಡಲಾಗಿದೆ ಎಂದರು. ಈ ಮೈದಾನ ಬಿಬಿಎಂಪಿ ಆಸ್ತಿಗೆ ಸೇರಿದ್ದಲ್ಲ ಎಂಬ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ಅವರು, ‘ಖಾತಾ’ ಮಾಡಿಕೊಡಲು ದಾಖಲೆಗಳನ್ನು ನೀಡುವಂತೆ ವಕ್ಫ್ ಮಂಡಳಿಗೆ ಸೂಚಿಸಿದ್ದನ್ನು ಮಾತ್ರ ಒತ್ತಿ ಹೇಳಿದರು.
ಇದನ್ನೂ ಓದಿ: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಯೋಗ ದಿನಾಚರಣೆ: ಪೊಲೀಸರೊಂದಿಗೆ ಚರ್ಚಿಸಿ ನಿರ್ಧಾರ- ಬಿಬಿಎಂಪಿ
1965 ರಲ್ಲಿ, ವಕ್ಫ್ ಬೋರ್ಡ್ ಗೆಜೆಟ್ ನೋಟಿಫಿಕೇಶನ್ 2.5 ಎಕರೆ ಭೂಮಿ ಸುನ್ನಿ ಬೋರ್ಡ್ಗೆ ಸೇರಿದೆ ಎಂದು ಹೇಳಿತ್ತು, ಆದರೆ 1965 ರಿಂದ 2022 ರವರೆಗೆ ಮಂಡಳಿಯು ಭೂಮಿಯ ಮೇಲಿನ ಹಕ್ಕು ಪಡೆಯಲು ಮುಂದೆ ಬಂದಿಲ್ಲ. 1974ರಲ್ಲಿಯೂ ಕಂದಾಯ ಇಲಾಖೆ ಸಮೀಕ್ಷೆ ವೇಳೆ ಬೋರ್ಡ್ ಉಪಸ್ಥಿತಿ ಕಾಣಿಸಿರಲಿಲ್ಲ. ಈಗ ಸಂಪೂರ್ಣ ಮಾಲೀಕತ್ವವನ್ನು ನಿರ್ಧರಿಸುವುದು ಸರ್ಕಾರಕ್ಕೆ ಬಿಟ್ಟದ್ದು, ಬಿಬಿಎಂಪಿಗೆ ಖಾತಾ ನೀಡುವ ಅಧಿಕಾರ ಮಾತ್ರ ಇದೆ ಎಂದು ಅವರು ಗಿರಿನಾಥ್ ಹೇಳಿದರು.
ಇದನ್ನೂ ಓದಿ: ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ: ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಬಿಬಿಎಂಪಿ ಆದೇಶ
ಈ ಹಿಂದೆ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ ವಕ್ಫ್ ಮಂಡಳಿಯನ್ನು ಪ್ರತಿನಿಧಿಸುವ ದಾಖಲೆಗಳನ್ನು ಕಳುಹಿಸಿತ್ತು ಮತ್ತು ಭೂಮಿ ವಕ್ಫ್ ಮಂಡಳಿಯ ಸಂಪೂರ್ಣ ಆಸ್ತಿ ಎಂದು ಹೇಳಿತ್ತು. ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರು ಪರಸ್ಪರ ಒಪ್ಪಂದ ಹೊಂದಿದ್ದಾರೆ ಎಂಬ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಆರೋಪಕ್ಕೆ ಸಂಬಂಧಿಸಿದಂತೆ, ನಾವು ಯಾರೊಂದಿಗೂ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಮತ್ತು ಯಾರೂ ಆಧಾರರಹಿತ ಆರೋಪ ಮಾಡಬಾರದು ಎಂದು ತುಷಾರ್ ಗಿರಿನಾಥ್ ಹೇಳಿದರು.
For more news update stay with actp news
Android App
Facebook
Twitter
Dailyhunt
Share Chat
Telegram
Koo App