The New Indian Express
ನವದೆಹಲಿ: ಫ್ರಾನ್ಸ್ ನಲ್ಲಿ ಪ್ಯಾರಾ ಶೂಟಿಂಗ್ ವಿಶ್ವಕಪ್ ನಲ್ಲಿ ಭಾಗವಹಿಸಲು ಭಾರತೀಯ ತಂಡಕ್ಕೆ ವಿಸಾ ನಿರಾಕರಣೆ ಮಾಡಲಾಗಿದೆ.
ಭಾರತೀಯ ಪ್ಯಾರಾ ಶೂಟಿಂಗ್ ತಂಡದಲ್ಲಿ ಪ್ಯಾರಾಲಂಪಿಕ್ಸ್ ನಲ್ಲಿ ಪದಕ ಗೆದ್ದಿದ್ದ ಸಿಂಘರಾಜ್ ಅಧಾನ ಸೇರಿ 6 ಮಂದಿ ಇದ್ದರು. ಭಾರತ ಸರ್ಕಾರದ ಮಧ್ಯಪ್ರವೇಶದ ನಡುವೆಯೂ ತಂಡಕ್ಕೆ ವಿಸಾ ನಿರಾಕರಣೆಯಾಗಿದ್ದು ಕ್ರೀಡಾಪಟುಗಳು ಹೋಗಲು ಸಾಧ್ಯವಾಗಿಲ್ಲ.
ಟೋಕಿಯೋ ಪಾರಾಲಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದ ಶೂಟರ್ ಅವನಿ ಲೆಖಾರ ಅವರು ಟ್ವಿಟರ್ ನಲ್ಲಿ ಈ ಬಗ್ಗೆ ಟ್ವೀಟ್ ಮಾಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.
ಏರ್ ಪೋರ್ಟ್ ನಲ್ಲಿ ಪಿಟಿಐ ಜೊತೆ ಮಾತನಾಡಿರುವ ಭಾರತೀಯ ಪ್ಯಾರಾ ಶೂಟಿಂಗ್ ಮುಖ್ಯ ರಾಷ್ಟ್ರೀಯ ತರಬೇತುದಾರ ಮತ್ತು ಅಧ್ಯಕ್ಷ ಜೈ ಪ್ರಕಾಶ್ ನೌಟಿಯಲ್, ಲೆಖಾರ ಹಾಗೂ ಆಕೆಯ ಕೋಚ್ ಮನ್ಪತ್ ಅವರ ವೀಸಾಗಳಿಗೆ ಅನುಮತಿ ನೀಡಲಾಗಿದೆ. ಆದರೆ ಅವರ ಎಸ್ಕಾರ್ಟ್ ಕೂಡ ಆಗಿರುವ ಆಕೆಯ ತಾಯಿಯ ವೀಸಾಗೆ ಅನುಮತಿ ಸಿಕ್ಕಿಲ್ಲ ಎಂದು ಹೇಳಿದ್ದಾರೆ.
I am sad, not able to go to France since the visa of my escort Ms. Shweta Jewaria & my coach Mr.Rakesh Manpat have not been released. It’s an important match for me on 7th June.Can anyone help? @DrSJaishankar @ianuragthakur @KirenRijiju @Media_SAI @ParalympicIndia @FranceinIndia https://t.co/bPcz8O5EPC
— Avani Lekhara अवनी लेखरा PLY (@AvaniLekhara) June 4, 2022
ಇದರ ಹೊರತಾಗಿ ಮೂವರು ಪ್ಯಾರಾ ಶೂಟರ್ಗಳಾದ-ಸಿಂಘರಾಜ್, ರಾಹುಲ್ ಜಾಖರ್ ಹಾಗೂ ದೀಪೇಂದ್ರ ಸಿಂಗ್ ಹಾಗೂ ಇಬ್ಬರು ಕೋಚ್- ಸುಭಾಷ್ ರಾಣ (ರಾಷ್ಟ್ರೀಯ ಕೋಚ್) ಹಾಗೂ ವಿವೇಕ್ ಸೈನಿ (ಸಹಾಯಕ ಕೋಚ್) ಗೆ ವೀಸಾ ಲಭ್ಯವಾಗಿಲ್ಲ.
ಫ್ರೆಂಚ್ ರಾಯಭಾರಿ ಕಚೇರಿ ಅಧಿಕಾರಿಗಳು ವೀಸಾ ನಿರಾಕರಣೆಗೆ ಯಾವುದೇ ಕಾರಣವನ್ನೂ ನೀಡಿಲ್ಲ. ಕೇವಲ ವೀಸಾಗಳ ಬೇಡಿಕೆ ಹೆಚ್ಚಿದೆ ಎಂದಷ್ಟೇ ಹೇಳಿದ್ದಾರೆ. ಕ್ರೀಡಾಪಟುಗಳ ವೀಸಾಗಳಿಗಾಗಿ ಏ.23 ರಂದು ಅರ್ಜಿ ಸಲ್ಲಿಸಲಾಗಿತ್ತು ಹಾಗೂ ವೀಸಾಗೆ ಅನುಮೋದನೆ ನೀಡುವ ವಿಶ್ವಾಸವೂ ಇತ್ತು.
ವೀಸಾ ಕೊಡಿಸಲು ಎಂಇಎ ಸಹ ಮಧ್ಯಪ್ರವೇಶಿಸಿತ್ತು. ಆದರೂ 6 ಮಂದಿಯ ವೀಸಾ ತಿರಸ್ಕೃತಗೊಂಡಿದೆ. ಜೂ.4 ರಿಂದ 13 ವರೆಗೆ ನಡೆಯಲಿರುವ ಕ್ರೀಡಾ ಕೂಟ ಪ್ಯಾರಿಸ್ ಪ್ಯಾರಾಲಂಪಿಕ್ಸ್ ಕೋಟಾ ದೃಷ್ಟಿಯಿಂದ ಭಾರತೀಯ ಪ್ಯಾರಾಶೂಟರ್ ಗಳಿಗೆ ಮಹತ್ವದ್ದಾಗಿದೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App