The New Indian Express
ನೀನಾಸಂ ಸತೀಶ್ ನಾಯಕನಾಗಿ ನಟಿಸಿರುವ ಡಿಯರ್ ವಿಕ್ರಮ್ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಓಟಿಟಿಯಲ್ಲಿ ಈ ಸಿನಿಮಾ ನೇರವಾಗಿ ಬಿಡುಗಡೆ ಆಗುತ್ತಿದ್ದು, ಅದಕ್ಕೂ ಮುನ್ನ ಟ್ರೈಲರ್ ಅನ್ನು ಇಂದು ಖಾಸಗಿ ಹೋಟೆಲ್ ನಲ್ಲಿ ಬಿಡುಗಡೆ ಮಾಡಲಾಯಿತು. ಪ್ರೇಮಕಥೆಯ ಜೊತೆಗೆ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಸಿನಿಮಾ ಇದಾಗಿದೆ.
ನೀನಾಸಂ ಸತೀಶ್ ಜೊತೆ ಈ ಸಿನಿಮಾದಲ್ಲಿ ಶ್ರದ್ಧಾ ಶ್ರೀನಾಥ್ ನಾಯಕಿಯಾಗಿ ನಟಿಸಿದ್ದು, ವಸಿಷ್ಠ ಸಿಂಹ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಂದೀಶ್ ನಿರ್ದೇಶನದಲ್ಲಿ ಈ ಸಿನಿಮಾ ತಯಾರಾಗಿದೆ. ಈ ಸಿನಿಮಾಗೆ ಹಿಂದೆ ಗೋಧ್ರಾ ಎಂದು ಹೆಸರಿಡಲಾಗಿತ್ತು. ಸೆನ್ಸಾರ್ ಮಂಡಳಿಯ ಸಲಹೆ ಮೇರೆಗೆ ಡಿಯರ್ ವಿಕ್ರಮ್ ಎಂದು ಟೈಟಲ್ ಬದಲಾಯಿಸಲಾಗಿದೆ. ಈಗಾಗಲೇ ಟ್ರೈಲರ್ ರಿಲೀಸ್ ಆಗಿದ್ದು, ಟ್ರೈಲರ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ..
ಸತೀಶ್ ವೃತ್ತಿ ಜೀವನದ ಮಹತ್ವದ ಸಿನಿಮಾ ಇದಾಗಿದ್ದು, ಈ ಸಿನಿಮಾದಲ್ಲಿ ಸತೀಶ್ ಹೋರಾಟಗಾರನ ಪಾತ್ರ ಮಾಡಿದ್ದಾರೆ. ಉಳಿದ ಪಾತ್ರಗಳ ಹಿನ್ನೆಲೆಯಲ್ಲಿ ಗೌಪ್ಯವಾಗಿ ಇಡಲಾಗಿದೆ. ಸಮಾಜದಲ್ಲಿ ನಡೆದ ಅನೇಕ ನೈಜ ಘಟನೆಗಳಿಗೆ ಹೋಲಿಕೆ ಆಗುವಂತಹ ದೃಶ್ಯಗಳನ್ನು ಕೂಡ ಈ ಸಿನಿಮಾದಲ್ಲಿ ಹೆಣೆಯಲಾಗಿದೆಯಂತೆ.
‘ಸಿನಿಮಾ ರಿಲೀಸ್ ಆಗುತ್ತಿರುವುದು ನನಗೆ ತುಂಬ ಖುಷಿ ಆಗಿದೆ. 2017ರಲ್ಲಿ ಈ ಸಿನಿಮಾದ ಕಥೆ ಕೇಳುವಾಗ ನಾನು ಎಕ್ಸೈಟ್ ಆಗಿದ್ದೇನೋ, ಈಗಲೂ ಅಷ್ಟೇ ಎಕ್ಸೈಟ್ಮೆಂಟ್ ಇದೆ. ಐದು ವರ್ಷದಿಂದಲೂ ಈ ಸಿನಿಮಾ ಬಂದೇ ಬರುತ್ತದೆ ಎಂದು ಎಲ್ಲರಿಗೂ ಹೇಳಿದ್ದೇನೆ. ಈ ಸಿನಿಮಾ ಒಪ್ಪಿಕೊಳ್ಳಲು ಕಥೆಯೇ ಕಾರಣ. ನಾವೆಲ್ಲರೂ ತುಂಬ ತಾಳ್ಮೆಯಿಂದ ಕಾದಿದ್ದೇವೆ. ಈ ತಂಡದೊಂದಿಗೆ ತುಂಬ ಕಂಫರ್ಟಬಲ್ ಆಗಿ ಕೆಲಸ ಮಾಡಿದ್ದೇನೆ. ನನಗೆ ಈ ಪಾತ್ರಕ್ಕೆ ಕೊಟ್ಟಿದ್ದಕ್ಕೆ ನಿರ್ದೇಶಕ ನಂದೀಶ್ಗೆ ಧನ್ಯವಾದಗಳು’ ಎಂದು ಶ್ರದ್ಧಾ ಹೇಳಿದ್ದಾರೆ.
ಇದನ್ನೂ ಓದಿ: ಸತೀಶ್ ನಿನಾಸಂ ನಟನೆಯ ಮುಂದಿನ ಸಿನಿಮಾ ಟೈಟಲ್ ‘ಅಶೋಕ ಬ್ಲೇಡ್’!
ಇದಲ್ಲದೆ, ನಾವು ಕುಕ್ಕೆ ಸುಬ್ರಹ್ಮಣ್ಯ, ಕರ್ನೂಲ್, ಹಾಸನ, ಬೆಂಗಳೂರು, ಭಟ್ಕಳ, ಮಲೇಷ್ಯಾ ಮತ್ತು ಇನ್ನೂ ಅನೇಕ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ಈ ಚಿತ್ರಕ್ಕಾಗಿ ನಾವೆಲ್ಲರೂ ಸಾಕಷ್ಟು ಶ್ರಮ ಹಾಕಿದ್ದೇವೆ, ನಾನು ಕನ್ನಡ ಸಿನಿಮಾ ಮಾಡಿ ಬಹಳ ದಿನಗಳಾಗಿವೆ. ಅದರ ಬಿಡುಗಡೆಗಾಗಿ ನಾನು ತುಂಬಾ ಉತ್ಸುಕನಾಗಿದ್ದೇನೆ.
ಇದು ತುಂಬಾ ತೀವ್ರವಾದ ಚಿತ್ರವಾಗಿದ್ದು, ಬಿಡುಗಡೆಯಾದ ನಂತರ ಜನರು ಇದರ ಬಗ್ಗೆ ಸಾಕಷ್ಟು ಚರ್ಚಿಸುತ್ತಾರೆ ಎಂದು ನಾನು ನಿರೀಕ್ಷಿಸಿದ್ದೇನೆ. 10 ವರ್ಷಗಳ ನಂತರ ಹಿಂತಿರುಗಿ ನೋಡಿದಾಗ, ಡಿಯರ್ ವಿಕ್ರಮ್ನಂತಹ ಚಿತ್ರದಲ್ಲಿ ನಟಿಸಿದ್ದಕ್ಕೆ ಮತ್ತು ಕೆಲಸ ಮಾಡಿದ್ದಕ್ಕೆ ನನಗೆ ಹೆಮ್ಮೆಯಾಗುತ್ತದೆ ಎಂದು ಶ್ರದ್ಧಾ ತಿಳಿಸಿದ್ದಾರೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App