The New Indian Express
ಚೆನ್ನೈ: ಇತ್ತೀಚಿಗೆ ಬಿಡುಗಡೆಯಾದ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರ ‘ವಿಕ್ರಮ್ ಚಿತ್ರ’ ಬಾಕ್ಸ್ ಆಫೀಸ್ ನಲ್ಲಿ ಈ ವಾರವೂ ಉತ್ತಮ ಕಲೆಕ್ಷನ್ ಮಾಡಿದೆ. ಮೂರನೇ ವಾರಾಂತ್ಯದಲ್ಲಿ ಈ ಚಿತ್ರ ಅಂದಾಜು ರೂ. 39 ಕೋಟಿ ದೋಚಿದೆ, ಈ ಮೂಲಕ ದೇಶದಲ್ಲಿ ಇಲ್ಲಿಯವರೆಗೂ 276 ಕೋಟಿ ರೂ. ಭರ್ಜರಿ ಕಲೆಕ್ಷನ್ ಮಾಡಿದೆ.
ದೇಶದಲ್ಲಿ ರೂ. 300 ಕೋಟಿ ಕಲೆಕ್ಷನ್ ನತ್ತ ದಾಪುಗಾಲು ಇಟ್ಟಿರುವ ವಿಕ್ರಮ್, ವಿಶ್ವದಾದ್ಯಂತ 400 ಕೋಟಿ ರೂ. ಸನ್ನಿಹದಲ್ಲಿದೆ. ವಿಶ್ವದಾದ್ಯಂತ ಇಷ್ಟು ಹಣ ದೋಚಿದ ಎರಡನೇ ಕಾಲಿವುಡ್ ಸಿನಿಮಾ ಇದಾಗಿದೆ.
ಇದನ್ನೂ ಓದಿ: ವಿಕ್ರಮ್ ಸಕ್ಸಸ್: ಸಲ್ಮಾನ್ ಖಾನ್ ಸಮ್ಮುಖದಲ್ಲಿ ಕಮಲ್ ಹಾಸನ್ ಸನ್ಮಾನಿಸಿದ ಚಿರಂಜೀವಿ
ಬಿಡುಗಡೆಯಾದ ಮೊದಲ ವಾರ ರೂ. 164.75 ಕೋಟಿ ಗಳಿಕೆ ಕಂಡಿದ್ದ ವಿಕ್ರಮ್, ಎರಡನೇ ವಾರದಲ್ಲಿ ಒಟ್ಟಾರೇ 72. 50 ಕೋಟಿ ಬ್ಯುಸಿನೆಸ್ ಮಾಡಿತ್ತು. ಜುಲೈ 8 ರಂದು ಡಿಸ್ನಿ+ ಹಾಟ್ ಸ್ಟಾರ್ ಒಟಿಟಿ ವೇದಿಕೆ ಮೂಲಕವೂ ಚಿತ್ರ ಬಿಡುಗಡೆಯಾಗಲಿದ್ದು, ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.
ಇದನ್ನೂ ಓದಿ: ನಟ ಸೂರ್ಯಗೆ 44 ಲಕ್ಷ ರು. ಬೆಲೆಯ ರೊಲೆಕ್ಸ್ ವಾಚ್ ಗಿಫ್ಟ್ ನೀಡಿದ ಕಮಲ್ ಹಾಸನ್!
ಲೋಕೇಶ್ ಕನಗರಾಜ್ ನಿರ್ದೇಶನದ ವಿಕ್ರಮ್ ಚಿತ್ರದಲ್ಲಿ ಕಮಲ್ ಹಾಸನ್, ವಿಜಯ್ ಸೇತುಪತಿ, ಎಫ್ ಫಾಸಿಲ್ ಪ್ರಮುಖ ಪಾತ್ರದಲ್ಲಿದ್ದು, ನಟರಾಜ ಚೆಂಬನ್ ವಿನೋದ್ ಜೋಸ್, ಕಾಳಿದಾಸ್ ಜಯರಾಮ್, ಅಂಟೋನಿ ವರ್ಗೀಸ್ ಮತ್ತಿತರರು ಅಭಿನಯಿಸಿದ್ದಾರೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App