The New Indian Express
ಹ್ಯಾಟ್ರಿಕ್ ಹೀರೋ ಶಿವ ರಾಜಕುಮಾರ್ ಅಭಿನಯದ 125ನೇ ಚಿತ್ರ ವೇದಾ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ವಿಶೇಷ ಎಂದರೆ ಈ ಚಿತ್ರದ ಮೂಲಕ ಶಿವರಾಜ್ ಕುಮಾರ್ ಸ್ಯಾಂಡಲ್ವುಡ್ಗೆ ನಿರ್ಮಾಪಕರಾಗಿ ಅಡಿಯಿಡುತ್ತಿದ್ದಾರೆ.
ವೇದಾ ಚಿತ್ರವನ್ನು ಝೀ ಸ್ಟುಡಿಯೋಸ್ ಜೊತೆಗೂಡಿ ಗೀತಾ ಸ್ಟುಡಿಯೋಸ್ ಮೂಲಕ ಗೀತಾ ಶಿವರಾಜ್ ಕುಮಾರ್ ನಿರ್ಮಿಸುತ್ತಿದ್ದು, ಚಿತ್ರಕ್ಕೆ ಭಜರಂಗಿ ಹರ್ಷ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಹಾಗೆಯೇ ಇದು ಶಿವಣ್ಣ-ಹರ್ಷ ಜೋಡಿಯ 4ನೇ ಚಿತ್ರ ಎಂಬುದು ಮತ್ತೊಂದು ವಿಶೇಷ. ಇದೇ ಕಥೆಯ ಮೂಲಕ ಗೀತಾ ಶಿವರಾಜ್ ಕುಮಾರ್ ನಿರ್ಮಾಪಕಿಯಾಗಿ ಹೊಸ ಹೆಜ್ಜೆಯಿಡಲು ಮುಂದಾಗಿದ್ದಾರೆ.
ಇನ್ನು ವೇದಾ ಚಿತ್ರವು 1960ರ ದಶಕದಲ್ಲಿ ನಡೆಯುವ ಕಥೆಹಂದರ ಹೊಂದಿದೆ. ಮೋಷನ್ ಪೋಸ್ಟರ್ ಅನ್ನು ಕಿಚ್ಚಿನ ನಡುವೆ ರೂಪಿಸಲಾಗಿದ್ದು, ಇದಾಗ್ಯೂ ಚಿತ್ರಕಥೆ ಹೇಗೆ ಸಾಗಲಿದೆ ಎಂಬುದರ ಬಗ್ಗೆ ನಿರ್ದೇಶಕರು ಯಾವುದೇ ಗುಟ್ಟನ್ನೂ ಬಿಟ್ಟುಕೊಟ್ಟಿಲ್ಲ. ಈ ಚಿತ್ರದಲ್ಲಿ ಶಿವಣ್ಣನ ಮಗಳಾಗಿ ಅರುಣ್ ಸಾಗರ್ ಅವರ ಪುತ್ರಿ ಅದಿತಿ ಸಾಗರ್ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೆಯೇ ನಾಯಕಿಯಾಗಿ ಮಗಳು ಜಾನಕಿ ನಟಿ ಗಾನವಿ ಬಣ್ಣ ಹಚ್ಚಲಿದ್ದಾರೆ. ಇನ್ನುಳಿದಂತೆ ಕುರಿ ಪ್ರತಾಪ್, ಜಗ್ಗಪ್ಪ, ಉಮ್ರಾಶ್ರೀ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಚೊಚ್ಚಲ ನಿರ್ದೇಶನದ ಸಿನಿಮಾದಲ್ಲಿ ಶಿವಣ್ಣನಿಗೆ ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಆ್ಯಕ್ಷನ್ ಕಟ್!
ಎ. ಹರ್ಷ ನಿರ್ದೇಶನದ ಚಿತ್ರವಿದು. ಶಿವಣ್ಣ ಜೊತೆ ವಜ್ರಕಾಯ, ಭಜರಂಗಿ ಮತ್ತು ಭಜರಂಗಿ 2 ನಿರ್ದೇಶನ ಮಾಡಿ ಮೂರೂ ಚಿತ್ರಗಳಲ್ಲಿ ಗೆದ್ದಿರುವ ಹರ್ಷ ಈಗನ ಅವರ 4ನೇ ಚಿತ್ರ ನಿರ್ದೇಶಿಸುತ್ತಿದ್ದಾರೆ. 1960ರ ದಶಕದಲ್ಲಿ ನಡೆಯುವ ಕಥೆಯೊಂದನ್ನು ಹೆಣೆದಿದ್ದಾರೆ ಹರ್ಷ. ಭರ್ಜರಿ ಸ್ಟುಡಿಯೋ ಸೆಟ್ ಹಾಕಿರುವ ಹರ್ಷ, ಚಿತ್ರದ ಯಾವೊಂದು ಗುಟ್ಟನ್ನೂ ಬಿಟ್ಟುಕೊಟ್ಟಿಲ್ಲ. ವೇದಾ ಬಹುಭಾಷಾ ಚಿತ್ರವಾಗಿದ್ದು, ಕನ್ನಡ, ತಮಿಳು ಮತ್ತು ತೆಲುಗು ಮೂರು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App