The New Indian Express
ಮುಂಬೈ: ಮುಂಬೈಗೆ ವಾಪಸ್ಸಾಗಿ ನನ್ನೊಂದಿಗೆ ಮಾತನಾಡಿ ಎಂದು ಗುವಾಹಟಿಯಲ್ಲಿರುವ ತಮ್ಮ ಪಕ್ಷದ ಬಂಡಾಯ ಶಾಸಕರಿಗೆ ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಮಂಗಳವಾರ ಮನವಿ ಮಾಡಿದ್ದಾರೆ.
ಇದು ಮತ್ತಷ್ಟ ವಿಳಂಬವಾರದು. ನೀವು ಮುಂಬೈಗೆ ವಾಪಸ್ಸಾಗಿ ನನ್ನೊಂದಿಗೆ ಕುಳಿತು ಮಾತನಾಡುವುದರೊಂದಿಗೆ ಶಿವಸೇನಾ ಕಾರ್ಯಕರ್ತರು ಹಾಗೂ ಸಾರ್ವಜನಿಕರಲ್ಲಿ ಮೂಡಿರುವ ಗೊಂದಲವನ್ನು ತೊಡೆದುಹಾಕಬೇಕೆಂದು ಠಾಕ್ರೆ ಉಲ್ಲೇಖಿಸಿರುವುದಾಗಿ ಅವರ ಆಪ್ತರೊಬ್ಬರು ತಿಳಿಸಿದ್ದಾರೆ.
ನೀವು ವಾಪಸ್ಸಾಗಿ ನನನ್ನು ಭೇಟಿಯಾದರೆ, ಕೆಲವೊಂದು ಪರ್ಯಾಯ ಆಯ್ಕೆಗಳನ್ನು ಹುಡುಕಬಹುದು. ಪಕ್ಷದ ಅಧ್ಯಕ್ಷನಾಗಿ ಮತ್ತು ಕುಟುಂಬದ ಮುಖ್ಯಸ್ಥನಾಗಿ ಈಗಲೂ ನಿಮ್ಮ ಬಗ್ಗೆ ಕಾಳಜಿಯಿದೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
ಇದನ್ನೂ ಓದಿ: ‘ನಮ್ಮ ಜೊತೆ 50 ಶಾಸಕರು ಇದ್ದಾರೆ, ಸದ್ಯದಲ್ಲೇ ಮುಂಬೈಗೆ ಹೋಗುತ್ತೇವೆ’: ಗುವಾಹಟಿ ಹೊಟೇಲ್ ನಲ್ಲಿ ಏಕನಾಥ್ ಶಿಂಧೆ ಹೇಳಿಕೆ
ಗುವಾಹಟಿಯಲ್ಲಿರುವ ಬಂಡಾಯ ಶಾಸಕರ ಗುಂಪಿನಲ್ಲಿರುವ ಕೆಲ ಶಾಸಕರು ಶಿವಸೇನಾ ನಾಯಕರೊಂದಿಗೆ ಸಂಪರ್ಕದಲ್ಲಿದ್ದು, ಏಕನಾಥ್ ಶಿಂಧೆ ಅವರಲ್ಲಿಯೂ ಆತಂಕವಿದೆ ಎಂಬ ವರದಿಗಳ ಬೆನ್ನಲ್ಲೇ, ಉದ್ದವ್ ಠಾಕ್ರೆ ಈ ರೀತಿಯ ಹೇಳಿಕೆ ನೀಡಿದ್ದಾರೆ.
ತಮ್ಮೊಂದಿಗೆ 50 ಶಾಸಕರಿದ್ದಾರೆ. ನಿಮ್ಮೊಂದಿಗೆ ಎಷ್ಟು ಸಂಖ್ಯೆಯ ಶಾಸಕರಿದ್ದಾರೆ ಎಂಬುದನ್ನು ಬಹಿರಂಗಪಡಿಸುವಂತೆ ಏಕನಾಥ್ ಶಿಂಧೆ ಮಂಗಳವಾರ ಸವಾಲು ಹಾಕಿದ್ದ ಏಕನಾಥ್ ಶಿಂಧೆ, ನಾವು ಶಿವಸೇನಾದಲ್ಲಿದ್ದೇವೆ. ಪಕ್ಷವನ್ನು ಮುನ್ನಡೆಸಿಕೊಂಡು ಹೋಗುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದ್ದಾರೆ.
ಇಲ್ಲಿ ಎಲ್ಲ ಶಾಸಕರು ಸಂತೋಷದಿಂದ ಇದ್ದಾರೆ. ಶಾಸಕರು ನಮ್ಮೊಂದಿಗೆ ಇದ್ದಾರೆ. ಒಂದು ವೇಳೆ ಶಿವಸೇನಾ ನಾಯಕರು ಇಲ್ಲಿರುವ ಶಾಸಕರೊಂದಿಗೆ ಸಂಪರ್ಕದಲ್ಲಿರುವುದಾಗಿ ಹೇಳುವುದಾದರೆ ಅವರ ಹೆಸರನ್ನು ಬಹಿರಂಗಪಡಿಸಲಿ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ಅವಿದ್ಯಾವಂತರು, ನಡೆದಾಡುವ ಶವಗಳು’; ರೆಬೆಲ್ ಶಾಸಕರ ವಿರುದ್ಧ ಶಿವಸೇನೆ ವಕ್ತಾರ ಸಂಜಯ್ ರಾವತ್ ವಾಗ್ದಾಳಿ
ಈ ಮಧ್ಯೆ ಮಹಾ ಆಘಾದಿ ಸರ್ಕಾರ ಅಗತ್ಯ ಶಾಸಕರ ಕೊರತೆಯನ್ನು ಘೋಷಿಸುವುದಕ್ಕಾಗಿ ಕೇಸರಿ ಪಕ್ಷ ಕಾಯುತ್ತಿರುವುದಾಗಿ ಹಿರಿಯ ಬಿಜೆಪಿ ಮುಖಂಡ ಸುಧೀರ್ ಮುಂಗಂಟಿವಾರ್ ಮಂಗಳವಾರ ಸಲಹೆ ನೀಡಿದ್ದಾರೆ. ಬಿಜೆಪಿ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದು, ಸದನದಲ್ಲಿ ಬಹುಮತವನ್ನು ಸಾಬೀತುಪಡಿಸುವ ಅಗತ್ಯವಿಲ್ಲ ಎಂದು ಅವರು ಪುನರುಚ್ಚರಿಸಿದ್ದಾರೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App