The New Indian Express
ಬೆಂಗಳೂರು: ನಗರದ ಪ್ರಧಾನ ಅಂಚೆ ಕಚೇರಿಯ ಮುಖ್ಯ ಅಂಚೆ ಸಹಾಯಕ ಟಿ ಧನಂಜಯ ಅವರಿಗೆ ಸಿಕ್ಕಿರುವ ಸನ್ಮಾನದಿಂದ ಪುಳಕಿತರಾಗಿದ್ದಾರೆ. 39 ವರ್ಷ ವಯಸ್ಸಿನ ಅವರಿಗೆ 2021 ರ ಮೇಘದೂತ ಪ್ರಶಸ್ತಿ ಸಿಕ್ಕಿದೆ. ಭಾರತೀಯ ಅಂಚೆ ಇಲಾಖೆಯಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ತೋರಿದ ಉದ್ಯೋಗಿಗೆ ನೀಡುವ ಅತ್ಯುನ್ನತ ಗೌರವವಾಗಿದೆ.
ತುಮಕೂರಿನ ಚೆಂದಗೆ ಗ್ರಾಮದವರಾದ ಧನಂಜಯ ಅವರು ಈ ಪ್ರಶಸ್ತಿಗೆ ಭಾಜನರಾದ ಕರ್ನಾಟಕದ ಏಕೈಕ ವ್ಯಕ್ತಿ ಮತ್ತು ದೇಶದ ಎಂಟು ಜನರಲ್ಲಿ ಒಬ್ಬರು. ಕೇಂದ್ರ ಸಂವಹನ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಮತ್ತು ಸಂವಹನ ರಾಜ್ಯ ಸಚಿವ ದೇವುಸಿನ್ಹ ಚೌಹಾಣ್ ಅವರು ಮೇಘದೂತ ಪ್ರಶಸ್ತಿಯನ್ನು ಹಸ್ತಾಂತರಿಸಿದರು.
ಪ್ರಶಸ್ತಿ ಸ್ವೀಕರಿಸಿದ ಬಳಿಕ ದೆಹಲಿಯಿಂದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಧನಂಜಯ, ನನ್ನ ಕಠಿಣ ಪರಿಶ್ರಮಕ್ಕೆ ಸಿಕ್ಕಿರುವ ಗೌರವ ಇದಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಬಿಕಾಂ ಪದವೀಧರರಾಗಿರುವ ಧನಂಜಯ 2009 ರಲ್ಲಿ ಶಿವಮೊಗ್ಗ ವಿಭಾಗದಲ್ಲಿ ಅಂಚೆ ಸಹಾಯಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಎರಡು ವರ್ಷಗಳ ನಂತರ ದಕ್ಷಿಣ ಕರ್ನಾಟಕ ಪ್ರದೇಶದ ಅಂಚೆ ಜೀವ ವಿಮಾ ಘಟಕಕ್ಕೆ ಸ್ಥಳಾಂತರಗೊಂಡರು.
ಕೋವಿಡ್ ಲಾಕ್ಡೌನ್ ಅವಧಿಯಲ್ಲಿ ಅವರು ವಿನ್ಯಾಸಗೊಳಿಸಿದ ವೆಬ್ ಆಧಾರಿತ ಅಪ್ಲಿಕೇಶನ್ ಗೆ ಶ್ಲಾಘನೆ ಸಿಕ್ಕಿದೆ. ಅಂಚೆ ಮಿತ್ರ ಅಪ್ಲಿಕೇಶನ್ ಗ್ರಾಹಕರಿಗೆ ಡಿಜಿಟಲ್ ಸೇವೆಯ ಸಹಾಯ ಮಾಡಿದೆ. ಧನಂಜಯ ಅವರು ವಿನ್ಯಾಸಗೊಳಿಸಿದ ‘ಗೆಟ್ ವೆಲ್ ಸೂನ್’ ಅಪ್ಲಿಕೇಶನ್ ಸಾಂಕ್ರಾಮಿಕ ಸಮಯದಲ್ಲಿ ಅಂಚೆ ಭ್ರಾತೃತ್ವ ಮತ್ತು ಅವರ ಕುಟುಂಬಗಳಿಗೆ ಸಹಾಯ ಮಾಡಿದೆ.
ಇದನ್ನೂ ಓದಿ: ಅಂಚೆ ಇಲಾಖೆಯಲ್ಲಿ ಖಾತೆದಾರರಿಗೆ ಆನ್ ಲೈನ್ ವಹಿವಾಟು ಸೌಲಭ್ಯ: ಇಂಡಿಯಾ ಪೋಸ್ಟ್ ಮೊಬೈಲ್ ಬ್ಯಾಂಕಿಂಗ್ ಆಪ್ ಬಿಡುಗಡೆ
ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ್ ಎಸ್, ಅಂಚೆ ಸೇವೆಯ ಗುಣಮಟ್ಟವನ್ನು ಸುಧಾರಿಸಲು PLI ತಂತ್ರಜ್ಞಾನಕ್ಕೆ ಧನಂಜಯ ಅವರು ಅಪಾರ ಕೊಡುಗೆ ನೀಡಿದ್ದಾರೆ. ಕರ್ನಾಟಕದಲ್ಲಿನ ಮಾರಾಟಗಾರರ ಖಾತೆಗಳಿಗೆ ನೇರವಾಗಿ ಕಮಿಷನ್ ಪಾವತಿಯ ಕೇಂದ್ರೀಕೃತ ವ್ಯವಸ್ಥೆಯನ್ನು ವಿನ್ಯಾಸಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದಿದ್ದಾರೆ.
ಧನಂಜಯ ಅವರು ಬೆಂಗಳೂರಿನ ಟಿ ದಾಸರಹಳ್ಳಿಯಲ್ಲಿ ಅವರ ಪೋಷಕರು, ಅವರ ಪತ್ನಿ ಮಾನಸಾ ಜಿ ಮತ್ತು ಮಕ್ಕಳಾದ ಸೋಹನ್ ಶೆಟ್ಟಿ ಮತ್ತು ಅನುಕ್ಷಾ ಶೆಟ್ಟಿ ಅವರೊಂದಿಗೆ ವಾಸಿಸುತ್ತಿದ್ದಾರೆ.
डाक कर्मयोगी ई-लर्निंग पोर्टल के शुभारंभ और मेघदूत पुरस्कार समारोह की कुछ झलकियाँ। देखें #MissionKarmayogi #MeghdootAward2021 #AapkaDostIndiaPost@AshwiniVaishnaw @devusinh pic.twitter.com/A0TjtCM6lB
— India Post (@IndiaPostOffice) June 29, 2022
For more news update stay with actp news
Android App
Facebook
Twitter
Dailyhunt
Share Chat
Telegram
Koo App