IANS
ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆ ಔರಂಗಾಬಾದ್, ಉಸ್ಮಾನಾಬಾದ್ ಮತ್ತು ಮುಂಬರುವ ಹೊಸ ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರನ್ನು ಮರುನಾಮಕರಣ ಮಾಡುವ ವಿವಾದಾತ್ಮಕ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.
ಔರಂಗಾಬಾದ್ ಅನ್ನು ಸಂಭಾಜಿ ನಗರ ಎಂದು ಮತ್ತು ಉಸ್ಮಾನಾಬಾದ್ ಅನ್ನು ಧರಾಶಿವ್ ಎಂದು ಮರುನಾಮಕರಣ ಮಾಡಲು ಮಹಾರಾಷ್ಟ್ರ ಸಚಿವ ಸಂಪುಟ ಇಂದು ಒಪ್ಪಿಗೆ ನೀಡಿದೆ.
ಇದನ್ನು ಓದಿ: ಮಹಾ ರಾಜಕೀಯ ಬಿಕ್ಕಟ್ಟು: ವಿಶ್ವಾಸಮತಯಾಚನೆಗೂ ಮುನ್ನವೇ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ
ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ದಟ್ಟಣೆಯನ್ನು ಕಡಿಮೆ ಮಾಡಲು ಅದಾನಿ ಗ್ರೂಪ್ ಪ್ರಸ್ತುತ ರಾಯಗಢದಲ್ಲಿ ನಿರ್ಮಿಸುತ್ತಿರುವ ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರಾವಳಿ ಕೊಂಕಣ ಪ್ರದೇಶದ ಪ್ರಮುಖ ನಾಯಕ ದಿವಂಗತ ‘ದಿನಕರ್ ಬಾಲು ಪಾಟೀಲ್’ ಅವರ ಹೆಸರಿಡಲಾಗುತ್ತಿದೆ. ಇದಕ್ಕು ಮುನ್ನ ಶಿವಸೇನೆ ಸಂಸ್ಥಾಪಕ, ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರ ಹೆಸರಿಡಲು ಯೋಚಿಸಲಾಗಿತ್ತು.
ಮಹಾ ವಿಕಾಸ್ ಅಘಾಡಿ(MVA) ಸರ್ಕಾರದ ಕೊನೆಯ ಕ್ಯಾಬಿನೆಟ್’ ಸಭೆಯಲ್ಲಿ ಈ ಮೂರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App