The New Indian Express
ಮಾಸ್ಕೋ: ಉಕ್ರೇನ್ ವಿರುದ್ಧ ಯುದ್ಧ ನಡೆಸುತ್ತಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆರೋಗ್ಯ ವಿಚಾರ ಜಗತ್ತಿನಾದ್ಯಂತ ವ್ಯಾಪಕ ಚರ್ಚೆಯಾಗುತ್ತಿರುವ ಹೊತ್ತಿನಲ್ಲೇ ಅವರ ಅಂಗರಕ್ಷಕರು ಪುಟಿನ್ ರ ಮಲ ಮತ್ತು ಮೂತ್ರವನ್ನು ಸಂಗ್ರಹಿಸಿ ಸೂಟ್ ಕೇಸ್ ನಲ್ಲಿ ಸಾಗಿಸುತ್ತಿದ್ದಾರೆ.
ಹೌದು.. ಇಂತಹುದೊಂದು ಅಚ್ಚರಿ ಸುದ್ದಿಯನ್ನು ಅಂತಾರಾಷ್ಟ್ರೀಯ ಸುದ್ದಿಸಂಸ್ಥೆಯೊಂದು ವರದಿ ಮಾಡಿದ್ದು, ಪುಟಿನ್ ಆರೋಗ್ಯದ ವಿಚಾರವಾಗಿ ಹಲವು ಅಚ್ಚರಿದಾಯಕ ಅಂಶಗಳನ್ನು ವಿದೇಶಿ ಮಾಧ್ಯಮಗಳು ಬಹಿರಂಗಪಡಿಸುತ್ತಿವೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಅಂತರಾಷ್ಟ್ರೀಯ ಪ್ರವಾಸಕ್ಕೆ ಹೋದಾಗ ಅವರ ಮಲ ಮತ್ತು ಮೂತ್ರವನ್ನು ಸಂಗ್ರಹಿಸುವ ಅಂಗರಕ್ಷಕರ ತಂಡವನ್ನು ಹೊಂದಿದ್ದಾರೆ ಎನ್ನಲಾಗಿದೆ. ಈ ತಂಡವು ವಿಶೇಷ ಸೂಟ್ಕೇಸ್ನಲ್ಲಿ ಪುಟಿನ್ ರ ಮಲ ಮತ್ತು ಮೂತ್ರವನ್ನು ರಾಜಧಾನಿ ಮಾಸ್ಕೋಗೆ ಹಿಂತಿರುಗಿಸುತ್ತದೆ. ರಷ್ಯಾದ ಫೆಡರಲ್ ಗಾರ್ಡ್ ಸೇವೆಯೊಂದಿಗೆ ಈ ಗಾರ್ಡ್ಗಳು ಅಧ್ಯಕ್ಷರ ಪ್ರಯಾಣದ ಸಮಯದಲ್ಲಿ ಅವರ ವಾಶ್ರೂಮ್ಗೆ ಹೋಗಿ ಅಲ್ಲಿ ಅವರ ಮಲ-ಮೂತ್ರಗಳನ್ನು ಸಂಗ್ರಹಿಸಿ ಸೀಕ್ರೇಚ್ ಬ್ರೀಫ್ ಕೇಸ್ ನಲ್ಲಿ ಹಾಕಿ ರವಾನಿಸುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇನ್ನು ಮೂರೇ ವರ್ಷ ಬದುಕೋದಾಗಿ ವೈದ್ಯರ ಸಲಹೆ- ವರದಿಗಳು
ಮೂಲಗಳ ಪ್ರಕಾರ, ಪುಟಿನ್ ಅವರ ಆರೋಗ್ಯ ಮತ್ತು ಅವರ ಸಂಭಾವ್ಯ ಕಾಯಿಲೆಗಳ ಬಗೆಗಿನ ರಹಸ್ಯ ಮಾಹಿತಿಯನ್ನು ಜಗತ್ತಿನ ಕಣ್ಣಿನಿಂದ ಮರೆಮಾಚಲು ಈ ವಿಲಕ್ಷಣ ಅಭ್ಯಾಸವನ್ನು ನಡೆಸಲಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 2017 ರಲ್ಲಿ ಅವರ ಫ್ರಾನ್ಸ್ ಪ್ರವಾಸದ ಸಮಯದಲ್ಲಿ ಈ ಚಟುವಟಿಕೆಯನ್ನು ಆರಂಭದಲ್ಲಿ ಗಮನಿಸಲಾಗಿತ್ತು. ಬಳಿಕ 2019 ರಲ್ಲಿ ಸೌದಿ ಅರೇಬಿಯಾಕ್ಕೆ ಅವರ ಪ್ರವಾಸದ ಸಮಯದಲ್ಲಿ ಇದೇ ರೀತಿಯ ವಿದ್ಯಮಾನವನ್ನು ಗಮನಿಸಲಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.
So I’m counting 6 people accompanying Vladimir Putin to the toilet… pic.twitter.com/BjG5N5IpDR
— Jonah Fisher (@JonahFisherBBC) December 9, 2019
ಆದರೆ ಈ ಕುರಿತ ವರದಿಗಳನ್ನು ರಷ್ಯಾ ಸರ್ಕಾರ ತಿರಸ್ಕರಿಸಿತ್ತು. ಆದರೆ ಈ ಊಹಾಪೋಹಕ್ಕೆ ಪುರಾವೆ ಎಂಬಂತೆ ಹಲವು ವೀಡಿಯೊಗಳು ನಂತರ ಆನ್ಲೈನ್ನಲ್ಲಿ ಕಾಣಿಸಿಕೊಂಡಿತು. ವೀಡಿಯೊದಲ್ಲಿ, ರಷ್ಯಾ ಅಧ್ಯಕ್ಷ ಪುಟಿನ್ ಶೌಚಾಲಯಕ್ಕೆ ಹೋದಾಗ ಅವರೊಂದಿಗೆ ಇಬ್ಬರು ಗಾರ್ಡ್ ಗಳು ಕೂಡ ಒಳಗೆ ಹೋಗಿ ಬರುವುದು ಮತ್ತು ನಂತರ ಇನ್ನೊಬ್ಬ ಸಿಬ್ಬಂದಿ ವಿಶೇಷ ಸೂಟ್ಕೇಸ್ ಅನ್ನು ಹೊತ್ತು ಬರುವುದನ್ನು ವಿಡಿಯೋದಲ್ಲಿ ದಾಖಲಾಗಿತ್ತು.
ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧ ಈಗ ಯೂರೋಪಿಯನ್ ಆಂತರಿಕ ವಿಚಾರವಾಗಿ ಉಳಿದಿಲ್ಲ.. ಜಾಗತಿಕ ಸಮಸ್ಯೆಯಾಗಿದೆ: ಅಮೆರಿಕ ಅಧ್ಯಕ್ಷ ಜೋ ಬೈಡನ್
ರಷ್ಯಾದ ರಾಯಭಾರ ಕಚೇರಿಯಲ್ಲಿರುವ ಅಧಿಕಾರಿಗಳು ಈ ಅಭ್ಯಾಸದ ಬಗ್ಗೆ ತೀವ್ರ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಎಫ್ಎಸ್ಒ ಕಟ್ಟುನಿಟ್ಟಾಗಿ ನಿರ್ದೇಶಿಸಿದ್ದಾರೆ ಎನ್ನಲಾಗಿದೆ. ಪುಟಿನ್ ಕುರಿತ ‘ಕುರುಹುಗಳನ್ನು ಎಲ್ಲಿಯೂ’ ಬಿಡಬಾರದು ಮತ್ತು ಎಲ್ಲವನ್ನೂ ಈ ತಾಯ್ನಾಡಿಗೆ ಸಾಗಿಸುವುದನ್ನು ಖಚಿತಪಡಿಸಿಕೊಳ್ಳಲು ಇದನ್ನು ಮಾಡಲಾಗಿದ್ದರೂ, ಇದೇ ಅಭ್ಯಾಸವು ಕೆಲವು ಸಾಕ್ಷಿಗಳನ್ನು ಬಿಟ್ಟಿರುವುದು ಇದೀಗ ರಷ್ಯಾ ಅಧಿಕಾರಿಗಳ ಚಿಂತೆಗೆ ಕಾರಣವಾಗಿದೆ.
ಇಷ್ಟೇ ಅಲ್ಲ.. ಪುಟಿನ್ ರ ಕುರಿತು ಈಗಾಗಲೇ ಜಗತ್ತಿನ ಹಲವು ಲೇಖಕರು ಹಲವು ಬಗೆಯ ಮಾಹಿತಿಗಳನ್ನು ಹಂಚಿಕೊಂಡಿದ್ದು, ಈ ಪೈಕಿ ರಷ್ಯಾದ ಕುರಿತು ಎರಡು ಪುಸ್ತಕಗಳನ್ನು ಬರೆದಿರುವ ಲೇಖಕ ರೆಗಿಸ್ ಗೆಂಟೆ ಹಾಗೂ ಕಳೆದ ಒಂದು ದಶಕದಿಂದ ರಷ್ಯಾದಲ್ಲಿ ಬೀಡುಬಿಟ್ಟಿರುವ ಮಿಖಾಯಿಲ್ ರೂಬಿನ್ ಅವರು ಈ ಈ ಮಲ-ಮೂತ್ರ ರಹಸ್ಯ ರವಾನೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ. ಪುಟಿನ್ ಅವರು 2017 ಮೇ 29ರಲ್ಲಿ ಫ್ರಾನ್ಸ್ಗೆ ಭೇಟಿ ನೀಡಿದ್ದಾಗ ಹಾಗೂ 2019ರ ಅಕ್ಟೋಬರ್ನಲ್ಲಿ ಸೌದಿ ಅರೇಬಿಯಾ ಪ್ರವಾಸ ಕೈಗೊಂಡಿದ್ದಾಗ ಹೀಗೆ ಮಾಡಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ನನ್ನ ದೇಶ ಕುರಿತು ನನಗೆ ನಾಚಿಕೆಯಾಗುತ್ತಿದೆ: ಉಕ್ರೇನ್ ಯುದ್ಧದಿಂದಾಗಿ ರಷ್ಯಾದ ರಾಯಭಾರಿ ರಾಜೀನಾಮೆ
ಉಕ್ರೇನ್ ವಿರುದ್ಧ ಯುದ್ಧ ಸಾರಿದಾಗಿನಿಂದ ಪುಟಿನ್ ಆರೋಗ್ಯದ ವಿಚಾರದ ಬಗ್ಗೆಯೂ ಪ್ರಮುಖ ಚರ್ಚೆಗಳಾಗುತ್ತಿವೆ. ಪುಟಿನ್ ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ ಎಂದು ಅವರ ಆಪ್ತರಾದ ಒಲಿಗಾರ್ಚ್ ಈಚೆಗೆ ತಿಳಿಸಿದ್ದರು.
For more news update stay with actp news
Android App
Facebook
Twitter
Dailyhunt
Share Chat
Telegram
Koo App