English Tamil Hindi Telugu Kannada Malayalam Android App
Fri. Dec 2nd, 2022

The New Indian Express

ಈ ಹಿಂದೆ ಜಯ ಹೇ ಮತ್ತು ಮೈ ಫ್ರೆಂಡ್ ಸಾಂಗ್ ರಿಲೀಸ್ ಮಾಡಿದ್ದ ಅವರು ಹೊಸ ಹಾಡು ಕಾಲೇಜಿನ ಪ್ರೇಮ ಕಥೆ ಕುರಿತದ್ದಾಗಿದೆ.

ಕಾಲೇಜು ಜೀವನದಲ್ಲಿ ನಡೆಯುವ  ಪ್ರೀತಿಯ ಕುರಿತ ಸುಂದರ ಲಿರಿಕಲ್ ಹಾಡು ಇದಾಗಿದೆ. ಪ್ರತಿಯೊಬ್ಬರು ಕಾಲೇಜು ಹಂತದಲ್ಲಿ ಅನುಭವಿಸುವ ಪ್ರೀತಿಯ ಭಾವನೆಗಳನ್ನು ಹಾಡಿನ ಮೂಲಕ ಹೆಣೆಯಲಾಗಿದೆ, ಇದೊಂದು ಪ್ರಾಮಾಣಿಕ ಪ್ರಯತ್ನವಾಗಿದೆ ಎಂದು ಆದರ್ಶ್ ತಿಳಿಸಿದ್ದಾರೆ.

ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ ಈ ಚಿತ್ರಕ್ಕೆ ದರ್ಶನ್ ಕುಮಾರ್ ಸಂಗೀತವಿದೆ. ಚಿತ್ರದಲ್ಲಿ ಆದರ್ಶ್ ಅಯ್ಯಂಗಾರ್ ಮತ್ತು ಸಿರಿ ಪ್ರಹ್ಲಾದ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇದರಲ್ಲಿ ಸುಮನ್ ರಾಜ್ ಮತ್ತು ದರ್ಶನ್ ಕುಮಾರ್ ಕೂಡ ಕಾಣಿಸಿಕೊಂಡಿದ್ದಾರೆ.

ಆದರ್ಶ್ ಅಯ್ಯಂಗಾರ್ ಮೂಲತಃ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದವರು. ಸದ್ಯ ಅಮೇರಿಕಾದಲ್ಲಿ ಪ್ರತಿಷ್ಟಿತ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸ್ಟಾರ್ ಸುವರ್ಣ “ಸ್ಟಾರ್ ಸಿಂಗರ್” ಕಾರ್ಯಕ್ರಮದಲ್ಲಿ ಸ್ಪರ್ಧಿ ಭಾಗಿಯಾಗಿ ಅಪಾರ ಜನಪ್ರಿಯತೆ ಪಡೆದುಕೊಂಡರು. ಅಮೇರಿಕಾದಲ್ಲೇ ತಮ್ಮದೊಂದು ಚಿಕ್ಕ ಸ್ಟುಡಿಯೋ ಮಾಡಿ ಬಿಡುವಿನ ಸಮಯದಲ್ಲಿ ಕೆಲವು ಪ್ರಯೋಗಗಳನ್ನು ಮಾಡುತ್ತಾ ಬಂದರು. ಇದೀಗ ಜಯ ಹೇ ಹಾಡನ್ನು ಭಾರತದ ಸೈನಿಕರಿಗೆ ಅರ್ಪಿಸಿದ್ದಾರೆ.

ನನ್ನ ಎಲ್ಲಾ ಹಾಡುಗಳನ್ನು ಪ್ರೇಕ್ಷಕರು ಉತ್ಸಾಹದಿಂದ ಕೇಳಬೇಕು ಎಂದು ನಾನು ಬಯಸುತ್ತೇನೆ, ಅವರಿಗಾಗಿ ಉತ್ತಮವಾದದ್ದನ್ನು ನೀಡಬೇಕೆಂಬುದು ನನ್ನ ಬಯಕೆ, ಕೇಳುಗರು ಸುಲಭವಾಗಿ ಇಷ್ಟ ಪಡುವ ಸಂಗೀತ ನೀಡಬೇಕು ಎಂದು ಆದರ್ಶ್ ತಿಳಿಸಿದ್ದಾರೆ.

Source link

For more news update stay with actp news

Android App

Facebook

Twitter

Dailyhunt

Share Chat

Telegram

Koo App

Leave a Reply

Your email address will not be published. Required fields are marked *