The New Indian Express
ಹುಬ್ಬಳ್ಳಿ: ಪರಿಸರ ಮತ್ತು ಇತರೆ ಅನುಮತಿಗಳು ದೊರೆತ ನಂತರ ಶೀಘ್ರದಲ್ಲೇ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಹೇಳಿದರು.
34 ಕೋಟಿ ವೆಚ್ಚದ ವಿವಿಧ ಮೂಲಸೌಕರ್ಯಗಳ ಲೋಕಾರ್ಪಣೆ ನೆರವೇರಿಸಿ ಮಾತನಾಡಿದ ಬೊಮ್ಮಾಯಿ ಅವರು, ಯೋಜನೆಗೆ ಅನುಮತಿ ಸಿಗುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ, ಈ ವರ್ಷಾಂತ್ಯದ ಒಳಗೆ ಯೋಜನೆ ಅರಣ್ಯ ಹಾಗೂ ಪರಿಸರ ಮಂತ್ರಾಲಯದ ನಿರಾಕ್ಷೇಪಣೆ ಪಡೆಯುವ ಹಂತದಲ್ಲಿದೆ. ಶೀಘ್ರ ಯೋಜನೆ ಕೈಗೆತ್ತಿಕೊಳ್ಳುವ ಇಚ್ಛಾಶಕ್ತಿ ನಮ್ಮಲ್ಲಿದೆ ಎಂದು ಹೇಳಿದರು.
ಉತ್ತರ ಕರ್ನಾಟಕವನ್ನು ಉತ್ತರ ಕನ್ನಡದ ಬಂದರುಗಳೊಂದಿಗೆ ಸಂಪರ್ಕಿಸುವ ಯೋಜನೆಯನ್ನು ದಶಕಗಳ ಹಿಂದೆಯೇ ಪ್ರಸ್ತಾಪಿಸಲಾಗಿತ್ತು. ಹುಬ್ಬಳ್ಳಿಯಿಂದ ಕಲಘಟಗಿವರೆಗೆ ಕಾಮಗಾರಿ ಆರಂಭಿಸಲಾಗಿದ್ದು, ಆಕ್ಷೇಪಣೆ ಹಿನ್ನೆಲೆಯಲ್ಲಿ ಕಲಘಟಗಿಯಿಂದ ಯಲ್ಲಾಪುರ ಮಾರ್ಗವಾಗಿ ಅಂಕೋಲಾ ನಡುವೆ ಕಾಮಗಾರಿ ಆರಂಭಿಸಿಲ್ಲ. ಪ್ರಸ್ತಾವಿತ ರೈಲು ಮಾರ್ಗವು ಪಶ್ಚಿಮ ಘಟ್ಟಗಳ ಮೂಲಕ ಹಾದುಹೋಗುತ್ತದೆ, ಅಲ್ಲಿ ಆನೆ ಕಾರಿಡಾರ್ ಮತ್ತು ಕಾಳಿ ಹುಲಿ ಸಂರಕ್ಷಿತ ಪ್ರದೇಶವಿದೆ. ಈ ವರ್ಷ ಯೋಜನೆಗೆ ಅನುಮತಿ ಪಡೆಯುವ ಭರವಸೆಯಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಧಾರವಾಡ-ಬೆಳಗಾವಿ ರೈಲು ಯೋಜನೆ ಶೀಘ್ರದಲ್ಲೇ ಆರಂಭ : ಸಿಎಂ ಬೊಮ್ಮಾಯಿ
ಅಂಕೋಲಾದ ಪರಿಸರ ಪ್ರೇಮಿ ವಿ.ಎನ್.ನಾಯಕ್ ಮಾತನಾಡಿ, ಈಗಿರುವ ಅಂಕೋಲಾ-ಹುಬ್ಬಳ್ಳಿ ರಸ್ತೆಯನ್ನು ನಾಲ್ಕು ಪಥವನ್ನಾಗಿ ಮಾಡುವ ಬದಲು ಪರಿಸರ ಸ್ನೇಹಿಯಾಗಿರುವ ರೈಲ್ವೆ ಯೋಜನೆ ಕೈಗೆತ್ತಿಕೊಳ್ಳುವುದು ಒಳ್ಳೆಯದು. “ರೈಲ್ವೆ ವಿನ್ಯಾಸವನ್ನು ಮಾರ್ಪಡಿಸುವ ಅವಶ್ಯಕತೆಯಿದೆ ಮತ್ತು ಆನೆ ಕಾರಿಡಾರ್ ಇರುವಲ್ಲಿ ಸುರಂಗಗಳನ್ನು ನಿರ್ಮಿಸಬೇಕು. ಪರಿಸರ ಮತ್ತು ವನ್ಯಜೀವಿಗಳಿಗೆ ಹಾನಿಯಾಗದಂತೆ ಸುರಂಗಗಳನ್ನು ನಿರ್ಮಿಸುವ ಪಶ್ಚಿಮದಂತೆಯೇ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು ಎಂದು ಹೇಳಿದ್ದಾರೆ.
ಈ ನಡುವೆ ಕೆಲವು ಪರಿಸರವಾದಿಗಳು ಈ ಯೋಜನೆಯನ್ನು ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಹಾದುಹೋಗುತ್ತದೆ ಎಂದು ವಿರೋಧಿ ವ್ಯಕ್ತಪಡಿಸುತ್ತಿದ್ದಾರೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App