The New Indian Express
ದಿಯಾ ಸಿನಿಮಾದಲ್ಲಿ ಕಾಣಿಸಿಕೊಂಡ ನಂತರ ನಟ ಪೃಥ್ವಿ ಅಂಬರ್ ಗೆ ಹಿಂದಿಂದೆಯೇ ಹಲವು ಸಿನಿಮಾಗಳ ಆಫರ್ ಬಂದಿವೆ, ಅದರಲ್ಲಿ ವಿಜಯ್ ಮಿಲ್ಟನ್ ನಿರ್ದೇಶಿಸುತ್ತಿರುವ ಬೈರಾಗಿ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಮತ್ತು ಧನಂಜಯ್ ಜೊತೆ ಪೃಥ್ವಿ ಅಂಬರ್ ಕೂಡ ಅಭಿನಯಿಸಿದ್ದಾರೆ.
“ದಿಯಾ ಬಿಡುಗಡೆಯಾಗಿ ಎರಡೂವರೆ ವರ್ಷಗಳಾಗಿದೆ. ಅಂದಿನಿಂದ ನಾನು ಬೆರಳೆಣಿಕೆಯಷ್ಟು ಚಿತ್ರಗಳ ಚಿತ್ರೀಕರಣದಲ್ಲಿದ್ದೆ, ಆದರೆ ಅವುಗಳಲ್ಲಿ ಯಾವುದೂ ದೊಡ್ಡ ಪರದೆಗೆ ಬಂದಿಲ್ಲ. ದಿಯಾ ನಂತರ ಬೈರಾಗಿ ನನ್ನ ಎರಡನೇ ಬಿಡುಗಡೆಗೆ ಸಿದ್ದಾಗಿರುವ ಸಿನಿಮಾವಾಗಿದೆ, ಇದರಿಂದ ನನಗೆ ಖುಷಿಯಾಗಿದೆ. ಶಿವಣ್ಣ ಮತ್ತು ಧನಂಜಯ್ ಅಭಿಮಾನಿಗಳು ನನ್ನ ನಟನೆಯನ್ನು ಹೇಗೆ ಸ್ವೀಕರಿಸುತ್ತಾರೆ ಎಂದು ತಿಳಿಯುವ ಕುತೂಹಲವಿದೆ ಎಂದು ಹೇಳಿದ್ದಾರೆ.
ಶಿವರಾಜ್ ಕುಮಾರ್ ಮತ್ತು ಧನಂಜಯ್ ಅವರಿದ್ದ ಕಾರಣ ನಾನು ಮಲ್ಟಿ ಸ್ಟಾರ್ ಸಿನಿಮಾಗೆ ಸಹಿ ಮಾಡಿದೆ, ಶಿವಣ್ಣ ಅವರ ಜೊತೆಗಿನ ಬಾಂಧವ್ಯದಿಂದಾಗಿ ನನಗೆ ಈ ಸಿನಿಮಾ ಹೆಚ್ಚು ಸ್ಮರಣೀಯವಾಗಿದೆ.
ಇದನ್ನೂ ಓದಿ: ‘ಬೈರಾಗಿ’ ಚಿತ್ರ ಶಿವಣ್ಣ ಜನ್ಮ ದಿನದ ಅಡ್ವಾನ್ಸ್ ಉಡುಗೊರೆ: ನಿರ್ಮಾಪಕ ಕೃಷ್ಣ ಸಾರ್ಥಕ್
ಪ್ರಚಾರದ ವಿಷಯದಲ್ಲೂ ಹೀಗೇ ಆಗಿತ್ತು. ಇಬ್ಬರು ಸ್ಟಾರ್ಗಳು ನನ್ನನ್ನು ಕನ್ನಡದ ಮಾಸ್ ಪ್ರೇಕ್ಷಕರಿಗೆ ಪರಿಚಯಿಸುತ್ತಿದ್ದಾರೆ ಎಂದು ನನಗೆ ಅನಿಸಿತು. ಇಬ್ಬರೂ ಉತ್ತಮ ಬೆಂಬಲ ಮತ್ತು ಪ್ರೋತ್ಸಾಹವನ್ನು ನೀಡಿದ್ದಾರೆ ಮತ್ತು ಅವರೊಂದಿಗೆ ಕೆಲಸ ಮಾಡುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ.
123 ಚಲನಚಿತ್ರಗಳಲ್ಲಿ ನಟಿಸಿರುವ ಪ್ರತಿ ಬಾರಿ ಕ್ಯಾಮೆರಾ ಎದುರಿಸುವಾಗ ಎಕ್ಸೈಟ್ ಆಗಿರುತ್ತಾರೆ ಎಂದು ಪೃಥ್ವಿ ಹೇಳಿದ್ದಾರೆ. ಶಿವಣ್ಣ ಅವರ ಉತ್ಸಾಹವನ್ನು ನಾನು ಅನುಕರಿಸಲು ಬಯಸುತ್ತೇನೆ. ಸೆಟ್ಗಳಲ್ಲಿ ಇಬ್ಬರು ನಟರಿಂದ ನಾನು ಸಾಕಷ್ಟು ಕಲಿತಿದ್ದೇನೆ. ನಿರ್ದೇಶಕ ವಿಜಯ್ ಮಿಲ್ಟನ್ ಅವರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುವ ಪೃಥ್ವಿ, “ಅವರು ಜ್ಞಾನದ ಬಂಡಲ್ ಮತ್ತು ಅವರು ನಮ್ಮಿಂದ ಏನು ಬಯಸುತ್ತಾರೆ ಎಂಬುದರ ಬಗ್ಗೆ ಸ್ಪಷ್ಟತೆ ಹೊಂದಿದ್ದಾರೆ ಎಂದು ಪೃಥ್ವಿ ಅಂಬರ್ ತಿಳಿಸಿದ್ದಾರೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App