AFP
ಯಾಂಗೋನ್: ಇದುವರೆಗೆ ರಹಸ್ಯ ಸ್ಥಳದಲ್ಲಿ ಗೃಹ ಬಂಧನದಲ್ಲಿದ್ದ ಉಚ್ಚಾಟಿತ ಮ್ಯಾನ್ಮಾರ್ ನಾಯಕಿ ಆಂಗ್ ಸಾನ್ ಸೂಕಿ ಅವರನ್ನು ಮ್ಯಾನ್ಮಾರ್ ರಾಜಧಾನಿ ನೇಪಿಡಾವ್ನಲ್ಲಿರುವ ಜೈಲಿಗೆ ಸ್ಥಳಾಂತರಿಸಲಾಗಿದೆ ಎಂದು ಜುಂಟಾ ವಕ್ತಾರರು ಗುರುವಾರ ತಿಳಿಸಿದ್ದಾರೆ.
ಕಳೆದ ವರ್ಷ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿದ್ದ ಸೂಕಿ ಅವರನ್ನು ಪದಚ್ಯುತಗೊಳಿಸಿ ಸೇನೆ ದೇಶವನ್ನು ತನ್ನ ಸ್ವಾಧೀನಕ್ಕೆ ಪಡೆದುಕೊಂಡಿತ್ತು. ಬಳಿಕ ಭ್ರಷ್ಟಾಚಾರ ಆರೋಪದ ಮೇಲೆ ಸೂಕಿ ಅವರನ್ನು ವಶಕ್ಕೆ ಪಡೆದ ಸೇನೆ ನೇಪಿಡಾವ್ನಲ್ಲಿ ಅಜ್ಞಾತ ಸ್ಥಳದಲ್ಲಿ ಗೃಹಬಂಧನದಲ್ಲಿರಿಸಿತ್ತು.
ಈವರೆಗೆ ಗೋಪ್ಯ ಕಾರಾಗೃಹದಲ್ಲಿ ಇರಿಸಲಾಗಿದ್ದ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷದ ನಾಯಕಿ ಆಂಗ್ ಸಾನ್ ಸೂಕಿ ಅವರನ್ನು ಇದೀಗ ಜೈಲಿಗೆ ಸ್ಥಳಾಂತರಿಸಲಾಗಿದೆ ಎಂದು ಕಾನೂನು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ: ಮ್ಯಾನ್ಮಾರ್: ಆನ್ ಸಾನ್ ಸೂಕಿ ಪಕ್ಷದ ಸಚಿವನಿಗೆ ಮರಣದಂಡನೆ
ಯ್ಕೆಯಾಗಿದ್ದ ಸೂಕಿ ಅವರ ಸರ್ಕಾರವನ್ನು 2021ರ ಫೆಬ್ರುವರಿ 1ರಂದು ಸೇನೆ ತನ್ನ ಸ್ವಾಧೀನಕ್ಕೆ ಪಡೆದುಕೊಂಡಿತ್ತು. ಬಳಿಕ ಸೂಕಿ ಅವರನ್ನು ಭ್ರಷ್ಟಾಚಾರ ಆರೋಪದ ಮೇರೆಗೆ ಸೇನೆ ವಶಕ್ಕೆ ಪಡೆದಿತ್ತು”.
ಸೂಕಿ ಅವರ ವಿರುದ್ಧದ ಕೋರ್ಟ್ ಪ್ರಕರಣಗಳ ವಿಚಾರಣೆಯು ಕಾರಾಗೃಹ ಆವರಣದಲ್ಲಿ ನಿರ್ಮಿಸಲಾಗಿರುವ ಕಟ್ಟಡದಲ್ಲಿ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App