ANI
ಜರ್ಮನಿ: ಯುರೋಪ್ ರಾಷ್ಟ್ರ ಜರ್ಮನಿಯಲ್ಲಿ ಜಿ7 ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಯುನೈಟೆಡ್ ಅರಬ್ ಎಮಿರೇಟ್ಸ್(UAE) ಗೆ ಪ್ರಧಾನಿ ನರೇಂದ್ರ ಮೋದಿ ತೆರಳಿದ್ದಾರೆ.
ಜರ್ಮನಿ ಭೇಟಿ ಫಲಪ್ರದವಾಗಿತ್ತು ಎಂದು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಜರ್ಮನಿಯಲ್ಲಿ ತಮಗೆ ಸಿಕ್ಕಿದ ಆತಿಥ್ಯಕ್ಕೆ ಮನಸೋತಿದ್ದಾರೆ. ಇಲ್ಲಿನ ಆತಿಥ್ಯಕ್ಕೆ ಜರ್ಮನ್ ಸರ್ಕಾರಕ್ಕೆ ಮತ್ತು ಇಲ್ಲಿನ ನಾಗರಿಕರಿಗೆ ಧನ್ಯವಾದ ಹೇಳುತ್ತೇನೆ. ಭಾರತ-ಜರ್ಮನಿ ಸ್ನೇಹವು ಮುಂಬರುವ ದಿನಗಳಲ್ಲಿ ಹೊಸ ದಿಕ್ಕನ್ನು ಕಾಣಲಿದೆ ಎಂದು ನಾನು ವಿಶ್ವಾಸ ಹೊಂದಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಹವಾಮಾನ ಬದ್ಧತೆಗಳಿಗೆ ಭಾರತದ ಸಮರ್ಪಣೆ ಅದರ ಕಾರ್ಯಕ್ಷಮತೆಯಿಂದ ಸ್ಪಷ್ಟ: ಪ್ರಧಾನಿ ಮೋದಿ
“ನಾನು G7 ಶೃಂಗಸಭೆಯಲ್ಲಿ ಭಾಗವಹಿಸಿ ಜರ್ಮನಿ ಭೇಟಿ ಫಲಪ್ರದಾಯಕವಾಗಿತ್ತು. ಹಲವಾರು ವಿಶ್ವ ನಾಯಕರೊಂದಿಗೆ ಸಂವಾದ ನಡೆಸಿದ್ದೇನೆ, ಮ್ಯೂನಿಚ್ನಲ್ಲಿ ಸ್ಮರಣೀಯ ಸಮುದಾಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಜರ್ಮನಿ ಭೇಟಿ ಸಂದರ್ಭದಲ್ಲಿ ಜಾಗತಿಕ ಯೋಗಕ್ಷೇಮ ಮತ್ತು ಸಮೃದ್ಧಿಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಅನೇಕ ವಿಷಯಗಳನ್ನು ಚರ್ಚಿಸಲು ಸಾಧ್ಯವಾಯಿತು ಎಂದಿದ್ದಾರೆ.
#WATCH | Prime Minister Narendra Modi departs for UAE after attending the G7 Summit in Germany
PM Modi will pay his condolences on the passing away of Sheikh Khalifa bin Zayed Al Nahyan, former UAE President & Abu Dhabi Ruler.
(Source: DD) pic.twitter.com/kn2HewB7Dy
— ANI (@ANI) June 28, 2022
ಪ್ರಧಾನಿಯವರು ಯುಎಇಯಲ್ಲಿ ಅಲ್ಲಿನ ಮಾಜಿ ಅಧ್ಯಕ್ಷ ಮತ್ತು ಅಬುಧಾಬಿ ಆಡಳಿತಗಾರ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ನಿಧನಕ್ಕೆ ಸಂತಾಪ ಸೂಚಿಸಲಿದ್ದಾರೆ.
#WATCH | Prime Minister Narendra Modi leaves Germany after attending the G7 Summit
“Interacted with several world leaders & participated in a memorable community program in Munich. We were able to discuss many issues aimed at furthering global well-being & prosperity”, tweets PM pic.twitter.com/yorIW3xUN9
— ANI (@ANI) June 28, 2022
For more news update stay with actp news
Android App
Facebook
Twitter
Dailyhunt
Share Chat
Telegram
Koo App