The New Indian Express
ಬೆಂಗಳೂರು: ಭಾರತದ ಪ್ರಜಾಪ್ರಭುತ್ವ ಬಲಿಷ್ಠವಾಗಿದ್ದು, ಇತರ ಹಲವು ದೇಶಗಳಲ್ಲಿ ಈ ಪ್ರಜಾಪ್ರಭುತ್ವ ಕೆಲವೇ ನಿಮಿಷಗಳ ಕಾಲ ಸಿನಿಮಾ ಟ್ರೈಲರ್ಗಳಂತೆ ಬಂದು ಹೋಗುತ್ತಿರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಹೇಳಿದ್ದಾರೆ.
ತುರ್ತು ಪರಿಸ್ಥಿತಿ ಕರಾಳ ದಿನಾಚರಣೆಯ ಪ್ರಯುಕ್ತ ಫ್ರೀಡಂ ಪಾರ್ಕ್ ಗೆ ಭೇಟಿ ನೀಡಿ ಮಾತನಾಡಿದ ಅವರು, “ಪ್ರಜಾಪ್ರಭುತ್ವವು ಬಲವಾಗಿ ಬೆಳೆಯುತ್ತಿರುವ ಏಕೈಕ ಸ್ಥಳವೆಂದರೆ ಭಾರತ. ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ಅಥವಾ ಶ್ರೀಲಂಕಾ ನಿರಂತರ ಪ್ರಜಾಪ್ರಭುತ್ವವನ್ನು ಕಂಡಿಲ್ಲ ಎಂದು ಹೇಳಿದರು.
“ಭಾರತೀಯ ಸಂವಿಧಾನವು ವಿಶ್ವದಲ್ಲೇ ಅತ್ಯುತ್ತಮವಾಗಿದೆ. ಇದು ನಮ್ಮ ಪ್ರಜಾಪ್ರಭುತ್ವವನ್ನು ರಕ್ಷಿಸುವ ಸಮಯ-ಪರೀಕ್ಷಿತ ದಾಖಲೆಯಾಗಿದೆ. ಕೇವಲ ಮತದಾನದ ಮೂಲಕ ತಮ್ಮ ಜವಾಬ್ದಾರಿ ಮುಗಿದಿದೆ ಎಂದು ಜನರು ಭಾವಿಸಬಾರದು ಮತ್ತು ನಡೆಯುತ್ತಿರುವ ಸಮಸ್ಯೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಭಾಗವಹಿಸುವಿಕೆ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥವನ್ನು ನೀಡುತ್ತದೆ. ಎಲ್ಲರೂ ಪಾಲುದಾರರಾಗಿರಬೇಕು. ಬಲಿಷ್ಠ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶ್ರಮಿಸಿದ್ದಾರೆ ಎಂದು ತಿಳಿಸಿದರು.
ಹಿಂದೆ “ವಾಕ್ ಸ್ವಾತಂತ್ರ್ಯ ಇರಲಿಲ್ಲ, ಮತ್ತು ಈಗ ಕಾಂಗ್ರೆಸ್ ನಾಯಕರು ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ಹೇಳುತ್ತಾರೆ. ಇಂದು ಜನರು ಮನದಾಳದ ಮಾತನ್ನು ಹೇಳಲು ಅವಕಾಶವಿದೆ ಮತ್ತು ಅದು ಪ್ರಜಾಪ್ರಭುತ್ವದ ಪುರಾವೆ ಎಂಬುದನ್ನು ಅವರು ಅರಿತುಕೊಳ್ಳಬೇಕು ಎಂದರು.
ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ, ಅವರ ಸರ್ಕಾರದ ಅವಧಿಯಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿತ್ತು, ಕೇಂದ್ರ ಸರ್ಕಾರಕ್ಕೆ ಎಲ್ಲ ಅಧಿಕಾರವನ್ನೂ ಹೊಂದಿತ್ತು. ಆದರೆ, ಮೋದಿಯವರ ಸರ್ಕಾರದಲ್ಲಿ ಹಾಗಿಲ್ಲ. ಜನ್ ಧನ್ ಯೋಜನೆ ಜಾರಿಗೆ ತಂದು ಎಲ್ಲರೂ ಬ್ಯಾಂಕ್ ಖಾತೆ ತೆರೆಯುವಂತೆ ಮಾಡಿದರು. ನಂತರ ಸ್ವಚ್ಛ ಭಾರತ ಉಪಕ್ರಮ, ಯೋಜನೆಗಳ ಫಲ ನೇರವಾಗಿ ಜನರಿಗೆ ತಲುಪುವಂತೆ ಮಾಡಲಾಗುತ್ತಿದೆ. ಕುಡಿಯುವ ನೀರು ಸರಬರಾಜು ಯೋಜನೆ ಜಾರಿಗೆ ತರಲಾಗಿದೆ. ಈ ರೀತಿ ಪ್ರಜಾಪ್ರಭುತ್ವ ಬಲಗೊಳ್ಳುತ್ತಿದೆ.
“ಸಂವಿಧಾನವನ್ನು ತಿರುಚಿದ ತುರ್ತು ಪರಿಸ್ಥಿತಿ ಪ್ರಜಾಪ್ರಭುತ್ವಕ್ಕೆ ಸವಾಲಾಗಿತ್ತು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟದ ಬೆಂಕಿ ಕಾಣಿಸಿಕೊಂಡಿತ್ತು. ಕರಾಳ ಯುಗ ಭಾರತವನ್ನು ಇನ್ನಷ್ಟು ಬಲಿಷ್ಠಗೊಳಿಸಿತು. ಉತ್ತರ ಭಾರತದಲ್ಲಿ ಬಂಧಿತರಾದವರನ್ನು ಬೆಂಗಳೂರು ಜೈಲಿಗೆ ಸ್ಥಳಾಂತರಿಸುವ ಮೂಲಕ ತುರ್ತು ಪರಿಸ್ಥಿತಿಯಲ್ಲಿ ಕರ್ನಾಟಕದ ಪಾತ್ರ ಪ್ರಮುಖವಾಗಿದೆ ಎಂದು ಅವರು ಹೇಳಿದರು.
For more news update stay with actp news
Android App
Facebook
Twitter
Dailyhunt
Share Chat
Telegram
Koo App