Online Desk
ಕೋಲ್ಕತ್ತಾ: 2023 ಏಷ್ಯನ್ ಕಪ್ ಕ್ವಾಲಿಫೈಯರ್ನಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ನಡೆದ ಪಂದ್ಯದಲ್ಲಿ ಉಭಯ ತಂಡದ ಆಟಗಾರರು ಬಡಿದಾಡಿಕೊಂಡಿರುವ ಘಟನೆ ನಡೆದಿದೆ.
ಕೋಲ್ಕತ್ತಾದಲ್ಲಿ ನಡೆದ ಕ್ವಾಲಿಫೈಯರ್ ಪಂದ್ಯದಲ್ಲಿ ಭಾರತ ತಂಡ ಕೊನೆಯ ಕ್ಷಣಗಳಲ್ಲಿ ಗೋಲು ಗಳಿಸಿ ಜಯ ಸಾಧಿಸಿತು. ಇದನ್ನು ಅರಗಿಸಿಕೊಳ್ಳಲಾಗದೆ ಹತಾಶೆಯಿಂದ ಅಫ್ಘಾನ್ ಆಟಗಾರರು ಭಾರತದ ಆಟಗಾರರ ಜತೆ ವಾಗ್ದಾಳಿ ನಡೆಸಿದರು. ಆರಂಭದಲ್ಲಿ ಇಬ್ಬರು-ಮೂವರು ಆಟಗಾರರ ನಡುವೆ ಜಟಾಪಟಿ ಆರಂಭವಾದರೂ ಕ್ರಮೇಣ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಎರಡೂ ಕಡೆಯ ಅರ್ಧಕ್ಕೂ ಹೆಚ್ಚು ಆಟಗಾರರು ಈ ಹೊಡೆದಾಟದಲ್ಲಿ ಭಾಗಿಯಾಗಿದ್ದರು. ಈ ವೇಳೆ ಬೆಂಚ್ ಮೇಲೆ ಕುಳಿತ ಆಟಗಾರರು ಕೂಡ ಮೈದಾನಕ್ಕೆ ಬಂದರು.
ಕೊನೆಯ ಕ್ಷಣಗಳಲ್ಲಿ ಭಾರತಕ್ಕೆ ಗೆಲುವು ಒಲಿದಿತ್ತು
ಈ ಪಂದ್ಯ ಅತ್ಯಂತ ಕುತೂಹಲಕಾರಿಯಾಗಿತ್ತು. ಎರಡೂ ತಂಡಗಳ ನಡುವೆ ಸಮಬಲದ ಪೈಪೋಟಿ ಕಂಡು ಬಂದಿತು. 84 ನಿಮಿಷಗಳವರೆಗೆ ಪಂದ್ಯದಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. 85ನೇ ನಿಮಿಷದಲ್ಲಿ ಭಾರತದ ಸುನಿಲ್ ಛೆಟ್ರಿ ಫ್ರೀ ಕಿಕ್ ನಲ್ಲಿ ಗೋಲು ಗಳಿಸಿ ಭಾರತ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಆದಾಗ್ಯೂ, ಈ ಮುನ್ನಡೆ ಕೇವಲ 3 ನಿಮಿಷಗಳ ಕಾಲ ಉಳಿಯಿತು. ನಂತರ ಅಫ್ಘಾನ್ ಆಟಗಾರ ಜುಬೈರ್ ಅಮಿರಿ 88ನೇ ನಿಮಿಷದಲ್ಲಿ ಹೆಡರ್ ಮಾಡಿ ಪಂದ್ಯವನ್ನು ಸಮಬಲಗೊಳಿಸಿದರು. ಭಾರತದ ಅಬ್ದುಲ್ ಸಮದ್ ಕೊನೆಯ ಕ್ಷಣದಲ್ಲಿ ಅದ್ಭುತ ಗೋಲು ಗಳಿಸಿ ಭಾರತಕ್ಕೆ ಜಯ ತಂದುಕೊಟ್ಟರು.
ಇದನ್ನೂ ಓದಿ: ಏಷ್ಯನ್ ಕಪ್ ಅರ್ಹತಾ ಸುತ್ತಿನ ಪಂದ್ಯ: ಅಫ್ಘಾನಿಸ್ತಾನವನ್ನು 2-1 ಗೋಲುಗಳಿಂದ ಸೋಲಿಸಿದ ಭಾರತ!
ಡಿ ಗುಂಪಿನಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ
ಏಷ್ಯನ್ ಕಪ್ 2023ರ ಅಂತಿಮ ಅರ್ಹತಾ ಸುತ್ತಿನಲ್ಲಿ, ಗ್ರೂಪ್-ಡಿ ಪಂದ್ಯದಲ್ಲಿ ಭಾರತ ತಂಡವು ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಹಾಂಗ್ ಕಾಂಗ್ ಮೊದಲ ಸ್ಥಾನದಲ್ಲಿದೆ.
India vs Afghanistan Fight #IndianFootball #ISL #BlueTigers pic.twitter.com/jlvU1P8CKe
— Navaneed M (@mattathil777777) June 12, 2022
For more news update stay with actp news
Android App
Facebook
Twitter
Dailyhunt
Share Chat
Telegram
Koo App