PTI
ಸ್ಯಾನ್ ಆಂಟೋನಿಯೊ: ಟೆಕ್ಸಾಸ್ ನಲ್ಲಿ ಟ್ರಾಕ್ಟರ್ ಟ್ರೇಲರ್ ನಲ್ಲಿ 46 ಅಕ್ರಮ ವಲಸಿಗರ ಮೃತದೇಹ ಪತ್ತೆಯಾಗಿದ್ದು, ಈ ಪೈಕಿ ಗಂಭೀರ ಸ್ಥಿತಿಯಲ್ಲಿದ್ದ 16 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ನೈರುತ್ಯ ಸ್ಯಾನ್ ಆಂಟೋನಿಯೊದ ರಸ್ತೆಯಲ್ಲಿ ಶಂಕಿತ ವಲಸಿಗರನ್ನು ಹೊಂದಿರುವ ಟ್ರ್ಯಾಕ್ಟರ್-ಟ್ರೇಲರ್ ರಿಗ್ ಸೋಮವಾರ ಪತ್ತೆಯಾಗಿತ್ತು. ಈ ಟ್ರೇಲರ್ ನಲ್ಲಿ ನಲವತ್ತಾರು ಜನರು ಸಾವನ್ನಪ್ಪಿರುವ ವಿಚಾರ ಬೆಳಕಿಗೆ ಬಂದಿತು. ಅಂತೆಯೇ ಗಂಭೀರ ಸ್ಥಿತಿಯಲ್ಲಿದ್ದ 16 ಜನರನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ರಮವಾಗಿ ಅಮೆರಿಕ ಗಡಿ ಪ್ರವೇಶಿಸಿದ್ದಾರೆ ಎನ್ನಲಾದ 40ಕ್ಕೂ ಹೆಚ್ಚು ವಲಸಿಗರ ಶವಗಳು ಸ್ಯಾನ್ ಆಂಟೋನಿಯೊ ನಗರದ ಹೊರವಲಯದಲ್ಲಿ ನಿಂತಿದ್ದ ಟ್ರಾಕ್ಟರ್-ಟ್ರೇಲರ್ ಹಾಗೂ ಅದರ ಸುತ್ತ ಸೋಮವಾರ ಪತ್ತೆಯಾಗಿವೆ. ಜೀವಂತವಾಗಿದ್ದ 12ಕ್ಕೂ ಹೆಚ್ಚು ಜನರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಯಿತು. ಇತ್ತೀಚಿನ ದಿನಗಳಲ್ಲಿ ವರದಿಯಾದ ವಲಸಿಗರ ಅತ್ಯಂತ ಕೆಟ್ಟ ಸಾವಿನ ಪ್ರಕರಣಗಳಲ್ಲಿ ಇದೂ ಒಂದು ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಅಮೆರಿಕಾ: ತೆಲಂಗಾಣದ ಸಾಫ್ಟ್ವೇರ್ ಉದ್ಯೋಗಿಗೆ ಗುಂಡಿಕ್ಕಿ ಹತ್ಯೆ!
ಈ ಪ್ರದೇಶದಲ್ಲಿ ಟ್ರ್ಯಾಕ್ಟರ್ ಪತ್ತೆಯಾಗುವುದಕ್ಕೂ ಕೆಲ ಹೊತ್ತಿನ ಮೊದಲು ಚಾಲಕ ಅದನ್ನು ಅಲ್ಲಿ ಬಿಟ್ಟುಹೋಗಿರಬಹುದು ಎಂಬ ಶಂಕೆಯ ಮೇರೆಗೆ ಆತನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಮೆಕ್ಸಿಕೊದಿಂದ ದಾಖಲೆ ಪ್ರಮಾಣದ ವಲಸಿಗರು ಅಕ್ರಮವಾಗಿ ಗಡಿ ದಾಟುತ್ತಿರುವುದರ ಮೇಲೆ ಟೆಕ್ಸಾಸ್ ಅಧಿಕಾರಿಗಳು ಸದ್ಯ ನಿಗಾವಹಿಸುತ್ತಿದ್ದಾರೆ. ಇದೀಗ ಬೆಳಕಿಗೆ ಬಂದಿರುವ ಪ್ರಕರಣ, ಬೇಸಿಗೆ ಮತ್ತು ವಸಂತಕಾಲದಲ್ಲಿ ಅಕ್ರಮ ವಲಸೆ ಪ್ರಕರಣಗಳ ಉಲ್ಬಣಕ್ಕೆ ಪುಷ್ಠಿನೀಡಿದೆ. ವಲಸಿಗ ಜನರು ಹೇಗೆ ಮೃತಪಟ್ಟಿದ್ದಾರೆ ಎಂಬುದು ಸದ್ಯ ಸ್ಪಷ್ಟವಾಗಿಲ್ಲ. ಆದರೆ, ಜೂನ್ ತಿಂಗಳಲ್ಲಿ ಟೆಕ್ಸಾಸ್ನ ಸ್ಯಾನ್ ಅಂಟೋನಿಯೊ ಮತ್ತು ಇತರ ನಗರಗಳಲ್ಲಿ ದಾಖಲೆ ಪ್ರಮಾಣದಲ್ಲಿ ಉಷ್ಣ ವಾತಾವರಣ ಇರುತ್ತದೆ. ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸಲಿದ್ದಾರೆ ಎಂದು ವರದಿಯಾಗಿದೆ.
ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆಯ ಒಂದು ತಂಡ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದೆ. ಆದರೆ, ಹೆಚ್ಚಿನ ಮಾಹಿತಿ ನೀಡಿಲ್ಲ ಎಂದು ಕಸ್ಟಮ್ಸ್ ಮತ್ತು ಗಡಿ ಭದ್ರತೆಯ ವಕ್ತಾರರು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿದ್ದ ನಗರ ಸೇವಕರೊಬ್ಬರು ಸಂಜೆ 6 ಗಂಟೆಯ ಮೊದಲು ಸಹಾಯಕ್ಕಾಗಿ ಕೂಗುವ ಮೂಲಕ ಪರಿಸ್ಥಿತಿಯನ್ನು ಎಚ್ಚರಿಸಿದರು. ಸೋಮವಾರ, ಪೊಲೀಸ್ ಮುಖ್ಯಸ್ಥ ವಿಲಿಯಂ ಮೆಕ್ಮಾನಸ್ ಹೇಳಿದರು. ಟ್ರೇಲರ್ನ ಹೊರಗೆ ನೆಲದ ಮೇಲೆ ಮೃತದೇಹ ಮತ್ತು ಟ್ರೈಲರ್ಗೆ ಭಾಗಶಃ ತೆರೆದ ಗೇಟ್ ಅನ್ನು ಕಂಡುಹಿಡಿಯಲು ಅಧಿಕಾರಿಗಳು ಆಗಮಿಸಿದರು ಎಂದು ಅವರು ಹೇಳಿದರು.
For more news update stay with actp news
Android App
Facebook
Twitter
Dailyhunt
Share Chat
Telegram
Koo App