PTI
ನವದೆಹಲಿ: ರಾಜಸ್ಥಾನದ ಉದಯ್ಪುರದಲ್ಲಿ ನೂಪುರ್ ಶರ್ಮಾ ಪರ ಫೋಸ್ಟ್ ಹಾಕಿದ್ದ ಟೈಲರ್ನನ್ನು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಮಂಗಳವಾರ ರಾತ್ರಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ತನಿಖಾಧಿಕಾರಿಗಳ ತಂಡವನ್ನು ಉದಯಪುರಕ್ಕೆ ರವಾನಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆಯ ತಂಡವನ್ನು ಉದಯಪುರಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಟ್ಟುನಿಟ್ಟಾದ ಭಯೋತ್ಪಾದನಾ ವಿರೋಧಿ ಕಾನೂನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ ನಂತರ ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸುವ ಸಾಧ್ಯತೆಯಿದೆ.
ಇದನ್ನು ಓದಿ: ನೂಪುರ್ ಶರ್ಮಾ ಪರ ಫೋಸ್ಟ್: ವ್ಯಕ್ತಿಯ ಶಿರಚ್ಚೇದ ಮಾಡಿ, ಪ್ರಧಾನಿಗೂ ಬೆದರಿಕೆ ಹಾಕಿದ ದುಷ್ಕರ್ಮಿಗಳ ಬಂಧನ
ಮೇಲ್ನೋಟಕ್ಕೆ ಇದು ಭಯೋತ್ಪಾದಕ ದಾಳಿಯಂತೆ ತೋರುತ್ತಿದೆ ಎಂದು ಅನಾಮಧೇಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದ ವ್ಯಕ್ತಿಯನ್ನು ಇಬ್ಬರು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಈ ಸಂಪೂರ್ಣ ದಾಳಿಯ ವಿಡಿಯೋ ಕೂಡ ಮಾಡಲಾಗಿದೆ. ಅಷ್ಟೇ ಅಲ್ಲ, ಘಟನೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವ ಮೂಲಕ ಆರೋಪಿಗಳು ಕೊಲೆಯ ಹೊಣೆಯನ್ನೂ ಹೊತ್ತುಕೊಂಡಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144 ಜಾರಿ
ಉದಯಪುರದ 7 ಪೊಲೀಸ್ ಠಾಣೆ ಪ್ರದೇಶಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಇದರಲ್ಲಿ ಧನ್ಮಂಡಿ, ಘಂಟಾಘರ್, ಹತಿಪೋಲ್, ಅಂಬಾಮತ, ಸೂರಜ್ಪೋಲ್, ಭೂಪಾಲಪುರ ಮತ್ತು ಸವಿನ ಪೊಲೀಸ್ ಠಾಣೆ ವ್ಯಾಪ್ತಿಗಳು ಸೇರಿವೆ. ಅಲ್ಲದೆ, ಇಡೀ ರಾಜಸ್ಥಾನದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಆರೋಪಿಗಳು ವಿಡಿಯೋ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೂ ಬೆದರಿಕೆ ಹಾಕಿದ್ದಾರೆ. ಆರೋಪಿಗಳಾದ ರಿಯಾಜ್ ಅನ್ಸಾರಿ ಮತ್ತು ಮೊಹಮ್ಮದ್ ಗೌಸ್ ಅವರನ್ನು ರಾತ್ರಿ 7 ಗಂಟೆಗೆ ರಾಜ್ಸಮಂದ್ನ ಭೀಮ್ನಲ್ಲಿ ಬಂಧಿಸಲಾಗಿದೆ. ಇಬ್ಬರೂ ಉದಯಪುರದ ಸೂರಜ್ಪೋಲ್ ಪ್ರದೇಶದ ನಿವಾಸಿಗಳು.
ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಇಡೀ ರಾಜ್ಯದಲ್ಲಿ 24 ಗಂಟೆಗಳ ಕಾಲ ಇಂಟರ್ನೆಟ್ ಬಂದ್ ಮಾಡಲಾಗಿದೆ. ಘಟನೆಯನ್ನು ವಿರೋಧಿಸಿ ಉದಯಪುರದ ಹಾಥಿಪೋಲ್, ಘಂಟಾಘರ್, ಅಶ್ವಿನಿ ಬಜಾರ್, ಡೆಹ್ಲಿ ಗೇಟ್ ಮತ್ತು ಮಾಲ್ದಾಸ್ ಸ್ಟ್ರೀಟ್ನ ಮಾರುಕಟ್ಟೆಗಳನ್ನು ಮುಚ್ಚಲಾಗಿದೆ. ಇಡೀ ರಾಜಸ್ಥಾನದಲ್ಲಿ ತೀವ್ರ ಎಚ್ಚರಿಕೆ ವಹಿಸಲಾಗಿದೆ. ಶವ ಇನ್ನೂ ಅಂಗಡಿಯ ಹೊರಗೆ ಬಿದ್ದಿದೆ. ಮೃತರ ಕುಟುಂಬಸ್ಥರು 50 ಲಕ್ಷ ರೂಪಾಯಿ ಹಾಗೂ ಸರ್ಕಾರಿ ಉದ್ಯೋಗ ನೀಡುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಸರ್ಕಾರ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.
ಅಳತೆ ನೀಡುವ ನೆಪದಲ್ಲಿ ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳು
40 ವರ್ಷದ ಟೈಲರ್ ಕನ್ಹಯ್ಯಾಲಾಲ್ ತೇಲಿ ಅವರು, ಧನ್ಮಂಡಿಯ ಭೂತಮಹಲ್ ಬಳಿ ಸುಪ್ರೀಂ ಟೈಲರ್ಸ್ ಎಂಬ ಅಂಗಡಿ ಇಟ್ಟುಕೊಂಡಿದ್ದರು. ಮಂಗಳವಾರ ಮಧ್ಯಾಹ್ನ 2.30ರ ಸುಮಾರಿಗೆ ಬೈಕ್ನಲ್ಲಿ ಇಬ್ಬರು ದುಷ್ಕರ್ಮಿಗಳು ಬಂದಿದ್ದಾರೆ. ಬಟ್ಟೆಯ ಅಳತೆ ಕೊಡುವ ನೆಪದಲ್ಲಿ ಅಂಗಡಿ ಪ್ರವೇಶಿಸಿದ್ದಾರೆ. ಕನ್ಹಯ್ಯಲಾಲ್ಗೆ ಏನೋ ಅರ್ಥವಾಗುವಷ್ಟರಲ್ಲಿ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ತೇಲಿ ಮೇಲೆ ಕತ್ತಿಯಿಂದ ಹಲವಾರು ಬಾರಿ ಇರಿದಿದ್ದಾರೆ. ಇದರಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App