Online Desk
ಬೆಂಗಳೂರು: ಕೆಜಿಎಫ್ ಚಾಪ್ಟರ್ 2 ಯಶಸ್ಸಿನ ನಂತರ ಮತ್ತೊಂದು ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ‘ವಿಕ್ರಾಂತ್ ರೋಣ’ ಬಿಡುಗಡೆಗೆ ಸಜ್ಜಾಗಿದ್ದು, ನಿರೀಕ್ಷೆ ದುಪ್ಪಟ್ಟಾಗಿದೆ.
ಕಿಚ್ಚ ಸುದೀಪ್ ಹಾಗೂ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅಭಿಯನದ ಈ ಚಿತ್ರದ ವಿಡಿಯೋ ಸಾಂಗ್ ಹಾಗೂ ಟ್ರೇಲರ್ ಬಿಡುಗಡೆಯಾಗಿದ್ದು, ದೇಶಾದ್ಯಂತ ಸಾಕಷ್ಟು ಸೌಂಡ್ ಮಾಡುತ್ತಿವೆ.
ಅದರಲ್ಲೂ ರಾರಾ.. ರುಕ್ಕಮ್ಮ ಸಾಂಗ್ ಅಂತೂ ಹೊಸ ಟ್ರೆಂಡ್ ಸೃಷ್ಟಿಸಿದೆ. ಕಿರುತೆರೆಯ ಬಹುತೇಕ ಕಲಾವಿದರು ಈ ಹಾಡಿಗೆ ಹೆಜ್ಜೆಗೆ ಹಾಕುವ ಮೂಲಕ ಇನ್ಸ್ಟಾಗ್ರಾಮ್ ರೀಲ್ಸ್ ನಲ್ಲಿ ಸಾಕಷ್ಟು ಮೋಡಿ ಮಾಡುತ್ತಿದ್ದಾರೆ.
ಮುಂದಿನ ತಿಂಗಳು 28 ರಂದು ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದ್ದು, ಬಾಲಿವುಡ್ ಸೇರಿದಂತೆ ಕೆಜಿಎಫ್ ನಂತರ ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ಕನ್ನಡ ಸಿನಿಮಾ ಹೊಸ ದಾಖಲೆ ಬರೆಯುವ ಸಾಧ್ಯತೆಯಿದೆ.
ಇದನ್ನೂ ಓದಿ: ಶೀಘ್ರದಲ್ಲೇ 50 ಮಿಲಿಯನ್ ವೀಕ್ಷಣೆಯತ್ತ ಸುದೀಪ್ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಅಭಿನಯದ ರಾ ರಾ ರಕ್ಕಮ್ಮ ಸಾಂಗ್!
ಈ ಮಧ್ಯೆ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್, ವಿಕ್ರಾಂತ್ ರೋಣ ಸಿನಿಮಾದ ಎಲ್ಲಾ ಭಾಷೆಗಳ ಟ್ರೇಲರ್ ಗಳ ಗುಚ್ಚವನ್ನು ಟ್ವೀಟರ್ ನಲ್ಲಿ ಶೇರ್ ಮಾಡುವ ಮೂಲಕ ಈ ಚಿತ್ರ ಜುಲೈ 28ರಂದು 3ಡಿಯಲ್ಲಿ ಬಿಡುಗಡೆಯಾಗಲಿದೆ ಎಂದು ಉಲ್ಲೇಖಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಕಿಚ್ಚ ಸುದೀಪ್ ಧ್ಯನವಾದ ತಿಳಿಸಿದ್ದಾರೆ.
T 4331 – Kannada star SUDEEP .. a pan india film VIKRANT RONA in 3 D .. releasing in 5 languages on July 28 th https://t.co/fWdBFkmjT7
— Amitabh Bachchan (@SrBachchan) June 27, 2022
For more news update stay with actp news
Android App
Facebook
Twitter
Dailyhunt
Share Chat
Telegram
Koo App