The New Indian Express
ತಿರುವನಂತಪುರಂ: ಮಲಯಾಳಂ ಜನಪ್ರಿಯ ನಟ ಎನ್ ಡಿ ಪ್ರಸಾದ್ ಅವರು ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತದೇಹ ಕೊಚ್ಚಿ ಬಳಿಯ ಕಲಮಸ್ಸೆರಿಯಲ್ಲಿ ತಮ್ಮ ಮನೆಯ ಹೊರಗಿನ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪ್ರಸಾದ್ ಅವರ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರ ಮಕ್ಕಳೇ ತಮ್ಮ ತಂದೆಯ ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೌಟುಂಬಿಕ ಕಲಹ ಅವರ ಸಾವಿಗೆ ಕಾರಣ ಎಂದು ಶಂಕಿಸಲಾಗಿದೆ.
ಕೆಲ ತಿಂಗಳುಗಳಿಂದ ಪತ್ನಿಯಿಂದ ದೂರ ಉಳಿದಿರುವ ಅವರು ಖಿನ್ನತೆಗೆ ಒಳಗಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ ಪ್ರಸಾದ್ ಅವರ ಮಾದಕ ದ್ರವ್ಯ ಸೇವನೆ ಆರೋಪ ಎದುರಾಗಿತ್ತು. 2021ರಲ್ಲಿ ಸಿಂಥೆಟಿಕ್ ಡ್ರಗ್ಸ್ (2.5 ಗ್ರಾಂ ಹ್ಯಾಶಿಶ್ ಆಯಿಲ್ ಮತ್ತು 15 ಗ್ರಾಂ ಗಾಂಜಾ) ಹೊಂದಿದ್ದರು ಎಂಬ ಕಾರಣಕ್ಕೆ ಅಬಕಾರಿ ಇಲಾಖೆ ಪ್ರಸಾದ್ ಅವರನ್ನು ಬಂಧಿಸಿತ್ತು. ಜತೆಗೆ ಮಾರಕಾಸ್ತ್ರಗಳನ್ನೂ ವಶಪಡಿಸಿಕೊಳ್ಳಲಾಗಿತ್ತು.
ಎನ್ಡಿ ಪ್ರಸಾದ್ ಅನೇಕ ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದರೂ ಆಕ್ಷನ್ ಹೀರೋ ಬಿಜು ಚಿತ್ರದಲ್ಲಿನ ಅವರ ಅಭಿನಯವು ಅವರ ಖ್ಯಾತಿಯನ್ನು ಹೆಚ್ಚಿಸಿತು.
For more news update stay with actp news
Android App
Facebook
Twitter
Dailyhunt
Share Chat
Telegram
Koo App