Online Desk
ಕೇಪ್ ಟೌನ್: ದಕ್ಷಿಣ ಆಫ್ರಿಕಾದ ಪೂರ್ವ ಲಂಡನ್ ನಗರದ ಎನೋಬೆನಿ ಟಾವೆರ್ನ್ನಲ್ಲಿ 17 ಜನರು ನಿಗೂಢವಾಗಿ ಸಾವನ್ನಪ್ಪಿದ್ದು, ಸ್ಥಳೀಯರಲ್ಲಿ ಭೀತಿ ಸೃಷ್ಟಿ ಮಾಡಿದೆ.
ಮಾಧ್ಯಮಗಳು ಭಾನುವಾರ ಈ ವರದಿ ನೀಡಿವೆ. ನ್ಯೂಸ್ರೂಮ್ ಆಫ್ರಿಕಾ ಟೆಲಿವಿಷನ್ ಚಾನೆಲ್ ಉಲ್ಲೇಖಿಸಿದಂತೆ “ಘಟನೆಯ ಸುತ್ತಲಿನ ಪರಿಸ್ಥಿತಿಗಳ ಬಗ್ಗೆ ತನಿಖೆ ನಡೆಯುತ್ತಿದೆ” ಎಂದು ಪೊಲೀಸ್ ವಕ್ತಾರರು ಬಿಬಿಸಿಗೆ ತಿಳಿಸಿದ್ದಾರೆ. ಅಲ್ಲದೆ, ಮಾಧ್ಯಮ ವರದಿಗಳ ಪ್ರಕಾರ ಮೃತರ ಸಂಬಂಧಿಕರಿಗೆ ಮೃತ ದೇಹಗಳನ್ನು ನೋಡಲು ಅವಕಾಶ ನೀಡುತ್ತಿಲ್ಲ ಎಂದು ವರದಿ ಮಾಡಿವೆ.
ಇದನ್ನೂ ಓದಿ: ಭಾರತ- ದಕ್ಷಿಣ ಆಫ್ರಿಕಾ ಪಂದ್ಯ ರದ್ದು ಹಿನ್ನೆಲೆ ಟಿಕೆಟ್ ಪಡೆದಿದ್ದವರಿಗೆ ಶೇ.50 ರಷ್ಟು ಹಣ ವಾಪಸ್!
“ದೇಹಗಳು ಕ್ಲಬ್ ನಲ್ಲಿ ನೆಲದ ಮೇಲೆ ಬಿದ್ದಿವೆ” ಎಂದು ಡೈಲಿ ಡಿಸ್ಪ್ಯಾಚ್ ಪತ್ರಿಕೆಯಲ್ಲಿ ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ಈಸ್ಟರ್ನ್ ಕೇಪ್ ಪೊಲೀಸ್ ಕಮಿಷನರ್ ನೊಮ್ಥೆಲ್ ಲಿಲಿಯನ್ ಮೇನೆ, ಬಾರ್ನೊಳಗೆ ಕಾಲ್ತುಳಿತ ಸಂಭವಿಸಿದೆ ಎಂದು SABC ನ್ಯೂಸ್ಗೆ ತಿಳಿಸಿದ್ದಾರೆ. ಇನ್ನು ಮೃತಪಟ್ಟವರ ಪೈಕಿ ಹೆಚ್ಚಿನವರು 18 ರಿಂದ 20 ವರ್ಷದ ಒಳಗಿನವರು ಎಂದು ಬ್ರಿಗೇಡಿಯರ್ ಕಿನಾನಾ ಹೇಳಿದ್ದಾರೆ.
For more news update stay with actp news
Android App
Facebook
Twitter
Dailyhunt
Share Chat
Telegram
Koo App