The New Indian Express
ಬೆಂಗಳೂರು: ನಗರದ ಕಬ್ಬನ್ ಪಾರ್ಕ್ ನ ಬಾಲಭವನದ ಆವರಣದಲ್ಲಿ ನಿರ್ಮಿಸಲಾಗಿರುವ ವಿಕಲಚೇತನ ಮಕ್ಕಳಿಗಾಗಿ ಕರ್ನಾಟಕ ರಾಜ್ಯದ ಮೊದಲ ವಿಶೇಷ ಚೇತನರ ಸ್ನೇಹಿ ಉದ್ಯಾನವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಶನಿವಾರ ಉದ್ಘಾಟಿಸಿದರು.
ಉದ್ಯಾನವನ ಉದ್ಘಾಟನೆ ಬಳಿಕ ಮಾತನಾಡಿದ ರಾಜ್ಯಪಾಲರು, ಬಾಲ ಭವನ ಮತ್ತು ಸ್ಮಾರ್ಟ್ ಸಿಟಿ ಸಹಯೋಗದಲ್ಲಿ ಮೈಂಡ್ಟ್ರೀ ಸಂಸ್ಥೆ ವಿಕಲಚೇತನರಿಗೆ ಸುರಕ್ಷಿತ, ಅಂತರ್ಗತ ಮತ್ತು ಭೌತಚಿಕಿತ್ಸೆಯ ಸ್ಥಳವನ್ನು ಒದಗಿಸಲು ಅನನ್ಯವಾಗಿ ವಿನ್ಯಾಸಗೊಳಿಸಿದ ಉದ್ಯಾನವನವನ್ನು ರಚಿಸಿದೆ, ಈ ನೂತನ ಉದ್ಯಾನವನದಲ್ಲಿ ವಿಶೇಷ ಚೇತನ ಮಕ್ಕಳು ಯಾವುದೇ ಅಡೆತಡೆಯಿಲ್ಲದೆ ಆಟವಾಡಲು ಸಾಧ್ಯವಾಗುತ್ತದೆ. ವಿಶೇಷ ಅಗತ್ಯವುಳ್ಳ ಲಕ್ಷಾಂತರ ಮಕ್ಕಳು ಈ ಉದ್ಯಾನವನದಿಂದ ಪ್ರಯೋಜನ ಪಡೆಯುತ್ತಾರೆ ಎಂದು ಹೇಳಿದರು.
ವಿಕಲಚೇತನ ಮಕ್ಕಳ ಸಮಸ್ಯೆಗಳನ್ನು ಪರಿಹರಿಸಲು ನಾವು ಬಹಳ ದೂರ ಬಂದಿದ್ದೇವೆ, ಇನ್ನೂ ಬಹಳಷ್ಟು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಇಟ್ಟಿರುವ ಮೊದಲ ಹೆಜ್ಜೆ ಇದಾಗಿದೆ. ಮಕ್ಕಳಿಗೆ ಆರೈಕೆ ನೀಡುವವರು, ಕೆಲವು ಸಂದರ್ಭಗಳಲ್ಲಿ, ಬೆಂಬಲಕ್ಕಾಗಿ ಮಕ್ಕಳೊಂದಿಗೆ ಕುಳಿತುಕೊಳ್ಳುತ್ತಾರೆ. ಕ್ಯಾಂಟೀನ್ನಲ್ಲಿ ತಿಂಡಿ ತಿನ್ನಲು, ಆಟವಾಡಲು ಮತ್ತು ಪ್ರಕೃತಿಯ ಮಡಿಲಲ್ಲಿ ಸ್ವಲ್ಪ ಸಮಯ ಕಳೆಯಲು ಕುಟುಂಬಕ್ಕೆ ಇದು ಪರಿಪೂರ್ಣ ಪಿಕ್ನಿಕ್ ತಾಣವಾಗಿದೆ ಎಂದು ತಿಳಿಸಿದರು.
ಮೈಂಡ್ಟ್ರೀಯ ಸಿಇಒ ಮತ್ತು ಎಂಡಿ ದೇಬಾಶಿಸ್ ಚಟರ್ಜಿ ಅವರು ಮಾತನಾಡಿ, ವಿಕಲಚೇತನ ಮಕ್ಕಳಿಗೆ ತಮ್ಮ ಬಾಲ್ಯವನ್ನು ಅನುಭವಿಸಲು ಮತ್ತು ಆನಂದಿಸಲು ಸ್ಥಳದ ಅಗತ್ಯವಿದೆ. ಈ ಉದ್ಯಾನವನವು ಮಕ್ಕಳಿಗೆ ಮತ್ತು ಅವರ ಪೋಷಕರ ಖಿನ್ನತೆ ದೂರಾಗಿಸಲು ಸಹಾಯ ಮಾಡುತ್ತದೆ ಎಂಬ ಭರವಸೆಯಿದೆ ಎಂದು ತಿಳಿಸಿದರು.
ಇದೇ ವೇಳೆ ಬಾಲಭವನ ಸೊಸೈಟಿಯ ಅಧ್ಯಕ್ಷೆ ಚಿಕ್ಕಮ್ಮ ಬಸವರಾಜ್, ಯೋಜನೆಯನ್ನು ಸಾಕಾರಗೊಳಿಸಲು ಸಹಾಯ ಮಾಡಿದ ಸರ್ಕಾರ ಮತ್ತು ಮೈಂಡ್ಟ್ರೀಗೆ ಕೃತಜ್ಞತೆ ಸಲ್ಲಿಸಿದರು.
For more news update stay with actp news
Android App
Facebook
Twitter
Dailyhunt
Share Chat
Telegram
Koo App