ಹೈಕೋರ್ಟ್‌ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರ ಪುತ್ರ ನಿಧನ | High Court Senior Advocate CV Nagesh’s son Arun Avadhani passed away

Bengaluru

oi-Oneindia Staff

By ಒನ್‌ ಇಂಡಿಯಾ ಸ್ಟಾಫ್‌

|

Google Oneindia Kannada News

ಬೆಂಗಳೂರು, ಜೂನ್‌, 27: ಹೈಕೋರ್ಟ್‌ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರ ಪುತ್ರ ಅರುಣ್ ಅವಧಾನಿ (41) ಅವರು ಭಾನುವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಅರುಣ್ ಅವಧಾನಿ ಅವರು ಪತ್ನಿ, ಪುತ್ರ ಸೇರಿ ಅಪಾರ ಬಂಧು, ಬಳಗವನ್ನು ಅಗಲಿದ್ದಾರೆ. ಭಾನುವಾರ ಊಟಿಯಲ್ಲಿ ತಂಗಿದ್ದ ಇವರು ತಡರಾತ್ರಿ ವಾಂತಿ-ತಲೆನೋವು ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ತೀವ್ರ ಹೃದಯಾಘಾತ ಸಂಭವಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅರುಣ್ ಅವಧಾನಿ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇನ್ನು ಅವರ ಪಾರ್ಥಿವ ಶರೀರವನ್ನು ಊಟಿಯಿಂದ ಬೆಂಗಳೂರಿಗೆ ತರಲಾಗಿದೆ.

High Court Senior Advocate CV Nageshs son Arun Avadhani passed away

ಬನ್ನೇರುಘಟ್ಟ ರಸ್ತೆಯಲ್ಲಿರುವ ಸಾಗರ್ ಆಸ್ಪತ್ರೆಯಲ್ಲಿ ಅರುಣ್ ಅವಧಾನಿ ಅವರ ಪಾರ್ಥಿವ ಶರೀರ ಇರಿಸಲಾಗಿದೆ. ಹಾಗೆಯೇ ಮಂಗಳವಾರ (ಜೂನ್‌ 27) ಜಯನಗರದ ಸೌತ್ ಎಂಡ್ ಸರ್ಕಲ್‌ನ ಪಟಾಲಮ್ಮ ದೇವಸ್ಥಾನದ ರಸ್ತೆಯಲ್ಲಿರುವ ಸಿ.ವಿ.ನಾಗೇಶ್ ಮನೆಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಇನ್ನು ಇಂದು ಸಂಜೆ ಅಥವಾ ಬುಧವಾರ ಚಾಮರಾಜಪೇಟೆ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎನ್ನವ ಮಾಹಿತಿ ತಿಳಿದುಬಂದಿದೆ.

ದೈವ ನರ್ತಕ ನಿಧನ

ಇನ್ನು ಕೆಲವು ತಿಗಳುಗಳ ಹಿದೆಯಷ್ಟೇ ದೈವನರ್ತನದ ವೇಳೆಯೇ ದೈವ ನರ್ತಕ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಕಡಬ ತಾಲೂಕಿನ ಇಡ್ಯಡ್ಕದಲ್ಲಿ ಎಂಬಲ್ಲಿ ನಡೆದಿತ್ತು.

ಕಡಬ ತಾಲೂಕಿನ ಎಡಮಂಗಲ ನಿವಾಸಿ ಕಾಂತು (60) ಸಾವಿಗೀಡಾದ ದೈವ ನರ್ತಕರಾಗಿದ್ದಾರೆ. ಇಡ್ಯಡ್ಕದಲ್ಲಿ ಶಿರಾಡಿ ದೈವ ಕೋಲ ನಡೆದಿದ್ದು, ಈ ವೇಳೆ ದೈವದ ನರ್ತನ ಮಾಡುತ್ತಿರುವಾಗಲೇ ನರ್ತಕ ಕಾಂತು ಅವರು ಕುಸಿದು ಬಿದ್ದು ಸಾವನ್ನಪಿದ್ದರು.
ಶಿರಾಡಿ ದೈವದ ನರ್ತನಕ್ಕೆ ಮೊದಲು ಇಡ್ಯಡ್ಕದಲ್ಲಿ ಉಳ್ಳಾಕುಲು, ನಾಗಬ್ರಹ್ಮ ದೈವದ ನರ್ತನ ಮಾಡಲಾಗಿದ್ದು, ಈ ವೇಳೆ ಸಾವನ್ನಪ್ಪಿದ್ದರು.

ಇನ್ನು ಪರಶುರಾಮ ಸೃಷ್ಟಿಯ ತುಳುನಾಡು ನಾಗಾರಾಧನೆಯಲ್ಲಿ ಬಹಳ ಪಾವಿತ್ರ್ಯತೆಯನ್ನು ಹೊಂದಿದೆ. ದಕ್ಷಿಣ ಭಾರತದಲ್ಲಿ ಹಲವು ನೆಲೆಗಳಲ್ಲಿ ನಾಗಾರಾಧನೆ ನಡೆಯುತ್ತಿದ್ದರೂ ಕರಾವಳಿ ನಾಗಾರಾಧನೆಯ ಮೂಲ ನೆಲ ಎಂದು ನಂಬಲಾಗಿದೆ.
ಇಲ್ಲಿ ನಾಗನಿಗೆ ಸಂಬಂಧಿಸಿ ತನು ಎರೆಯುವುದು, ನಾಗಪ್ರತಿಷ್ಠೆ, ಸರ್ಪಸಂಸ್ಕಾರ, ನಾಗದರ್ಶನ, ಆಶ್ಲೇಷಾ ಬಲಿ, ಢಕ್ಕೆಬಲಿ, ಬ್ರಹ್ಮಮಂಡಲ, ನಾಗಮಂಡಲ, ಕಾಡ್ಯನಾಟ ಮೊದಲಾದ ಸೇವೆಗಳು ನಡೆಯುತ್ತದೆ.

ಆದರೆ ಇವರಿಗೆ ವೈದಿಕರಿಂದ ನಡೆಯುತ್ತಿದ್ದ ನಾಗಬ್ರಹ್ಮಮಂಡಲ ಸೇವೆ ಇದೇ ಮೊದಲ ಬಾರಿಗೆ ಚೌಕಟ್ಟು ಮೀರಿ ಬಿಲ್ಲವ ಶಾಂತಿ ಪಾತ್ರಿಗಳಿಂದ ನಡೆದಿದೆ. ಮಂಗಳೂರು ನಗರದ ಕಂಕನಾಡಿಯ ಶ್ರೀಬ್ರಹ್ಮ ಬೈದ್ಯರ್ಕಳ ಗರಡಿ ಕ್ಷೇತ್ರದಲ್ಲಿ ಕಾವೂರು ಶ್ರೀಮನೋಜ್ ಶಾಂತಿ ಹಾಗೂ ಬಳಗದವರಿಂದ ಅರ್ಧ ಮಂಡಲ ಅಂದರೆ ಚತುಶ್ಪವಿತ್ರ ನಾಗ ಬ್ರಹ್ಮಮಂಡಲ ಸೇವೆ ಸಂಭ್ರಮದಿಂದ ನಡೆದಿದೆ‌.

ಈ ನಾಗಬ್ರಹ್ಮ ಮಂಡಲೋತ್ಸವ ಐತಿಹಾಸಿಕ ಕ್ರಾಂತಿಯೊಂದಕ್ಕೆ ಮುನ್ನುಡಿ ಬರೆದಿದೆ. ಈ ಹಿನ್ನೆಲೆಯಲ್ಲಿ ನಾಗಮಂಡಲ ಸೇವೆಯ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವನ್ನು ಮಾಡಲಾಗಿದೆ. ನಾಗಮಂಡಲ ಢಕ್ಕೆಬಲಿಯ ವಿಸ್ತೃತ ಹಾಗೂ ವೈಭವೀಕೃತ ರೂಪ. ನಾಗಮಂಡಲದ ಪ್ರಮಾಣಕ್ಕನುಗುಣವಾಗಿ ರಂಗದ ಅಳತೆಯಿರುತ್ತದೆ.

ನಾಗಮಂಡಲದಲ್ಲಿ ಪೂರ್ಣಮಂಡಲ, ಅರ್ಧಮಂಡಲ, ಕಾಲುಮಂಡಲ ಎಂಬ ಪ್ರಭೇದವಿದೆ. ಪೂರ್ಣ ಮಂಡಲದಲ್ಲಿ 16 ಪವಿತ್ರ ಗಂಟುಗಳು, 14 ಹೆಡೆಯ ಸರ್ಪಾಕೃತಿ, ಅರ್ಧಮಂಡಲದಲ್ಲಿ 8 ಪವಿತ್ರಗಂಟುಗಳು, 7 ಹೆಡೆಯ ಸರ್ಪಾಕೃತಿ, ಕಾಲು ಮಂಡಲದಲ್ಲಿ 4 ಪವಿತ್ರ ಗಂಟುಗಳು, 5 ಹೆಡೆಯ ಸರ್ಪಾಕೃತಿಯ ಮಂಡಲ ಬಿಡಿಸಲಾಗುತ್ತದೆ‌. ಕೆಂಪು, ಕಪ್ಪು, ಹಳದಿ, ಬಿಳಿ ಹಾಗೂ ಹಸಿರು ಪಂಚವರ್ಣದ ಹುಡಿಗಳಿಂದ ಮಂಡಲ ರಚನೆಯಿರುತ್ತದೆ. ರಾತ್ರಿ ನಾಗಬನದಲ್ಲಿ ಹಾಲಿಟ್ಟು ಸೇವೆ ಜರುಗಿದ ಬಳಿಕ ನಾಲಮಂಡಲ ಸೇವೆ ನಡೆಯುತ್ತದೆ‌.

English summary

High Court Senior Advocate CV Nagesh’s son Arun Avadhani passed away from heart attack.

Source link