ಹು-ಧಾರವಾಡ ಪಾಲಿಕೆ ಚುನಾವಣೆ: “ಆಪರೇಷನ್ ಹಸ್ತ”ದ ಭೀತಿಯಲ್ಲಿ “ಕಮಲ” ಪಡೆ, ಇಲ್ಲಿದೆ ವಿವರ | BJP’s plan to win in Hubballi-Dharwad Municipal Corporation Election

Hubballi

lekhaka-Sandesh R Pawar

By ಹುಬ್ಬಳ್ಳಿ ಪ್ರತಿನಿಧಿ

|

Google Oneindia Kannada News

ಹುಬ್ಬಳ್ಳಿ, ಜೂನ್, 19: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆ ಕಾಂಗ್ರೆಸ್‌, ಬಿಜೆಪಿ ಪಾಳೆಯದ ನಾಯಕರ ನಿದ್ದೆಗೆಡಿಸಿದೆ. ಅಲ್ಲದೆ ಎರಡು ಪಕ್ಷಗಳ ನಾಯಕರು ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿಯಲು ಶತಾಯು ಗತಾಯು ಸೆಣಸಾಟ ನಡೆಸಿದ್ದಾರೆ.

ಜೂನ್ 20ರಂದು ನಿಗದಿಯಾಗಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನೂತನ ಮೇಯರ್- ಉಪ ಮೇಯರ್ ಆಯ್ಕೆ ಚುನಾವಣೆಯ ಹಿನ್ನೆಲೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ನೇತೃತ್ವದಲ್ಲಿ ಇಂದು ಸಭೆ ನಡೆಯಲಿದೆ. ಆಪರೇಷನ್ ಹಸ್ತ ಭೀತಿಯ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದುಕೊಂಡಿದೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ. ಇನ್ನು ಕಳೆದ 9 ದಿನಗಳಿಂದ ಬ್ರೆಜಿಲ್-ಉರುಗೈ ಪ್ರವಾಸದಲ್ಲಿರುವ ಪ್ರಲ್ಹಾದ್‌ ಜೋಶಿಯವರು ಸೋಮವಾರ (ಜೂನ್‌ 19) ಮಧ್ಯಾಹ್ನ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ.

Hubballi-Dharwad Municipal Corporation Election

ಜೋಶಿ ಅವರು ಮೊದಲಿಗೆ ಹುಬ್ಬಳ್ಳಿಯಲ್ಲಿ ಪಕ್ಷದ ಶಾಸಕರು ಹಾಗೂ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ. ಬಳಿಕ ದಾಂಡೇಲಿಗೆ ತೆರಳುವರೋ ಅಥವಾ ದಾಂಡೇಲಿ ರೆಸಾರ್ಟ್‌ನಲ್ಲಿರುವ ಪಾಲಿಕೆಯ ಬಿಜೆಪಿ ಸದಸ್ಯರನ್ನು ಹುಬ್ಬಳ್ಳಿ ಕರೆ ತರುವರೋ ಎನ್ನುವ ವಿಚಾರ ಕುತೂಹಲಕ್ಕೆ ಕಾರಣವಾಗಿದೆ.

ಇನ್ನೂ ಮಹಾನಗರ ಪಾಲಿಕೆಯ ಬಹುತೇಕ ಬಿಜೆಪಿ ಸದಸ್ಯರು ಕಳೆದ ಮೂರು ದಿನಗಳಿಂದ ತಂಡ ತಂಡವಾಗಿ ದಾಂಡೇಲಿ ರೆಸಾರ್ಟ್‌ಗೆ ತೆರಳಿದ್ದಾರೆ. ಹೀಗೆ ಆಪರೇಷನ್ ಹಸ್ತದ ಭೀತಿಯ ಹಿನ್ನೆಲೆ ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಗಳು ಯಾರು ಎಂಬುದು ಮಂಗಳವಾರ (ಜೂನ್‌ 20) ಬೆಳಗ್ಗೆಯೇ ನಿರ್ಧಾರ ಆಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಅಭ್ಯರ್ಥಿಗಳನ್ನು ಫೈನಲ್‌ ಮಾಡುವವರೆಗೆ ಪಕ್ಷದ ಪಾಲಿಕೆ ಸದಸ್ಯರನ್ನು ರೆಸಾರ್ಟ್‌ನಲ್ಲಿ ಹಿಡಿದಿಟ್ಟುಕೊಳ್ಳುವುದು ಬಿಜೆಪಿಯ ಕಾರ್ಯತಂತ್ರವಾಗಿದೆ. ಸದ್ಯ ಪಾಲಿಕೆಯಲ್ಲಿ ಬಿಜೆಪಿಯ ಆಡಳಿತವಿದ್ದು, ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಪಾಲಿಕೆಯನ್ನು ವಶಕ್ಕೆ ಪಡೆಯಲು ಇನ್ನಿಲ್ಲದ ಪ್ರಯತ್ನಗಳು ಮಾಡುತ್ತಿದೆ.

ಅಕ್ಕಿ ವಿತರಣೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದ ಕಾಂಗ್ರೆಸ್ ಕುಂಟು ನೆಪ: ಬೊಮ್ಮಾಯಿ‌ಅಕ್ಕಿ ವಿತರಣೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದ ಕಾಂಗ್ರೆಸ್ ಕುಂಟು ನೆಪ: ಬೊಮ್ಮಾಯಿ‌

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯಿಂದ ಆಯ್ಕೆಯಾದ 39 ಸದಸ್ಯರಿದ್ದಾರೆ. ಪಕ್ಷೇತರರಾದ ಕಿಶನ್ ಬೆಳಗಾವಿ, ದುರ್ಗಮ್ಮ ಬಿಜವಾಡ, ಚಂದ್ರಿಕಾ ಮೇಸ್ತ್ರಿ ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ. ಇನ್ನು ಜೆಡಿಎಸ್‌ನ ಲಕ್ಷ್ಮೀ ಹಿಂಡಸಗೇರಿ ಅವರ ಬೆಂಬಲವೂ ಬಿಜೆಪಿಗೆ ಇದೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಮೇಯರ್-ಉಪ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಬೆಂಬಲಿಸಿದರೆ ಬಿಜೆಪಿ ಸದಸ್ಯರಿಗೆ 50ರಿಂದ 75 ಲಕ್ಷ ರೂ. ಕೊಡುವುದಾಗಿ ಜತೆಗೆ ವಾರ್ಡ್‌ನಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಿಸಿಕೊಡುವುದಾಗಿ ಕಾಂಗ್ರೆಸ್ ಮುಖಂಡರು ಕಳೆದ ಒಂದು ವಾರದಿಂದ ಫೋನ್ ಕರೆ ಮಾಡಿ ಆಮಿಷವೊಡ್ಡಿದ್ದಾರೆ ಎಂದು ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಕಪಟಕರ, ಮೇಯರ್‌ ಈರೇಶ ಅಂಚಟಗೇರಿ ಆರೋಪಿಸಿದ್ದರು. ಈಗ ಶಾಸಕ ಬೆಲ್ಲದ ಹಾಗೂ ಪ್ರಹ್ಲಾದ ಜೋಶಿ ಮುತುವರ್ಜಿಯಿಂದ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ಬದಲಾವಣೆ ಕಾದುನೋಡಬೇಕಿದೆ.

English summary

Hubballi-Dharwad Municipal Corporation Election 2023: BJP leaders plan to win in Hubballi-Dharwad Municipal Corporation Election

Story first published: Monday, June 19, 2023, 12:58 [IST]

Source link